Thursday, September 19, 2024
Homeಕ್ರೀಡಾ ಸುದ್ದಿ | Sportsದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ವೆಸ್ಟ್ಇಂಡೀಸ್

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ವೆಸ್ಟ್ಇಂಡೀಸ್

West Indies vs South Africa: West Indies clean sweeps T20 Series

ಬಾರ್ಬಾಡೋಸ್,ಆ.28– ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟ್ವೆಂಟಿ-20 ಸರಣಿಯನ್ನು ಅತಿಥೇಯ ವೆಸ್ಟ್ಇಂಡೀಸ್ 3-0 ಯಿಂದ ಕ್ಲೀನ್ ಸ್ವೀಪ್ ಸಾಧಿಸಿ ಟೆಸ್ಟ್ ಸರಣಿಯ ಸೋಲಿಗೆ ಪ್ರತೀಕಾರ ಹೇಳಿದೆ.

ಇಲ್ಲಿ ನಡೆದ ಅಂತಿಮ ಮಳೆ ಬಾಧಿತ ಪಂದ್ಯದಲ್ಲಿ 13 ಓವರ್ಗಳಲ್ಲಿ 116 ರನ್ಗಳ ಗುರಿ ಪಡೆದ ವಿಂಡೀಸ್ ಪರ ಶೈ ಹೋಪ್ (42 ರನ್), ನಿಕೋಲಸ್ ಪೂರನ್ (35 ರನ್), ಶೈಮಾರ್ ಹಿಟೇಯರ್ (31ರನ್) ಅವರ ಸಿಡಿಲಬ್ಬರದ ಆಟದಿಂದ 9.2 ಓವರ್ಗಳಲ್ಲೇ 116/2 ರನ್ ಗಳಿಸಿ ಗೆಲುವಿನ ದಡ ತಲುಪಿತ್ತು.

ದಕ್ಷಿಣ ಆಫ್ರಿಕಾ 13 ಓವರ್ಗಳಲ್ಲಿ 108/4 ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯ ಸ್ಥಗಿತವಾಗಿತ್ತು. ದಕ್ಷಿಣ ಆಫ್ರಿಕಾ ಪರ ಟ್ರಿಸ್ಟನ್ ಸ್ಟಬ್‌್ಸ (40 ರನ್) ಟಾಪ್ ಸ್ಕೋರರ್ ಆಗಿದ್ದಾರೆ.

RELATED ARTICLES

Latest News