ಬೆಂಗಳೂರು,ಆ.11-ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಧಿಕಾರಿಯವರ ಬಗ್ಗೆ ಸುಳ್ಳು ಹಾಗು ಗೌರವಕ್ಕೆ ಚ್ಯುತಿ ತರುವಂತಹ ಸುದ್ದಿ ಹರಡುತ್ತಿರುವ ಇನ್ಫ್ಲುಯೆನ್ಸರ್ ಮತ್ತು ಯುಟ್ಯೂಬರ್ ಗಳ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಿರಿ? ಎಂದು ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರುಗಳು ಈ ಕೂಡಲೇ ನೂರಾರು ಆಸ್ತಿಕ ಬಂಧುಗಳ, ಶ್ರೀ ಕ್ಷೇತ್ರಧರ್ಮಸ್ಥಳದ ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿಯ ಭಕ್ತರ ಮನದಲ್ಲಿರುವ ಮೇಲಿನ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿ ಎಂದು ಮನವಿ ಮಾಡಿದ್ದಾರೆ.
ಯಾವುದೇ ಆಧಿಕೃತ ಮಾಹಿತಿ ನೀಡದೆ ಇದ್ದರೆ ಸುಳ್ಳು ಸುದ್ದಿ ಹರಡುತ್ತಿರುವ ಈ ಸೊಕಾಲ್ಡ್ ಯು ಟ್ಯೂಬರ್‌ಗಳ ಮೇಲೆ ಯಾವ ಕ್ರಮ ತೆಗೆದುಕೊಂಡಿದೆ? ಭೀಮ ಎಂದು ಕರೆಸಿಕೊಳ್ಳುತ್ತಿರುವ ಅನಾಮದೇಯನ ಮಂಪರು ಪರೀಕ್ಷೆ ಯಾವಾಗ ಮಾಡುತ್ತೀರಿ? ಎಂಬುದನ್ನು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದ್ದಾರೆ.
ಧರ್ಮಸ್ಥಳ ಕ್ಷೇತ್ರಕ್ಕೆ ಕೆಲ ಪಟ್ಟಬದ್ಧ ಹಿತಾಸಕ್ತಿಗಳು ಹಾಗೂ ಹಿಂದೂ ವಿರೋಧಿ ಶಕ್ತಿಗಳು ವ್‌ಯಾಪಕವಾಗಿ ಅಪಪ್ರಚಾರವೆಸಗುತ್ತಾ ಕ್ಷೇತ್ರದ ಗೌರವ ಹಾಗೂ ಘನತೆಗೆ ಕೆಸರೆರೆಚಲು ಪ್ರಯತ್ನ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಷಡ್ಯಂತ್ರದಂತೆ ತೋರುವ ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಹಲವು ಪ್ರಶ್ನೆಗಳು ಮೂಡುತ್ತವೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳೇ, ನೀವು ಎಸ್‌ಟಿಐ ರಚನೆ ಮಾಡುವುದಿಲ್ಲ ಎಂದ ಮರುದಿನವೇ ರಚನೆ ಮಾಡುವಂತಾದದ್ದು ಯಾಕೆ?. ಎಸ್‌ಟಿಐ ರಚಿಸಲು ಒತ್ತಡ ಹೇರಿದವರುಯಾರು? ಎಡಪಂಥೀಯರು? ಕಮ್ಯುನಿಸ್ಟ್‌ಗಳು? ಜಿಹಾದಿಗಳು ಅಥವಾ ನಿಮ ಸರ್ಕಾರದ ಒಳಗಿನ ಹಿಂದುವಿರೋಧಿ ನಾಸ್ತಿಕರೇ? ಈಗ ಅನಾಮದೇಯನೊಬ್ಬ ಮಾಡಿದ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡದೆ, ಹಲವು ಹಿಂದು ವಿರೋಧಿ ಸಂಘಟನೆಗಳ ಒತ್ತಾಯಕ್ಕೆ (ದಿನೇಶ್ ಗುಂಡೂರಾವ್ ಹೇಳಿಕೆಯಂತೆ), ಸರ್ಕಾರ ಯಾವುದೇ ಆಧಾರ ಇಲ್ಲದಿದ್ದರೂ ಎಸ್ ಐಟಿ ರಚಿಸಿದ್ದು ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಜನರ ನಂಬಿಕೆಯನ್ನು ಉಳಿಸಲು ಮಧ್ಯಂತರ ವರದಿ ಬಿಡುಗಡೆ ಮಾಡದಿರುವುದು ಏಕೆ?ತನಿಖೆಯ ನಿಜವಾದ ಗುರಿ ? ಸತ್ಯ ಹೊರ ತರುವುದುನಾ? ಅಥವಾ ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಮಸಿಬಳೆಯುವುದಾ?. ಯಾವುದೇ ಆಧಾರಗಳು ಇಲ್ಲದೆ ಇದ್ದರೂ ರಾಷ್ಟ್ರೀಯ ಅಂತರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಧರ್ಮಸ್ಥಳದ ಬಗ್ಗೆ ಕಪೋಲಕಲ್ಪಿತ ಸುದ್ದಿಯನ್ನು ಭಿತ್ತರಿಸತ್ತಿರುವುದು ಷಡ್ಯಂತ್ರದ ಭಾಗವಲ್ಲವೇ? ಧರ್ಮಸ್ಥಳದ ಭಕ್ತರ ಭಾವನೆಗಳಿಗೆ ಘಾಸಿಯಾಗದಂತೆ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ?ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಶ್ರೀ ಕ್ಷೇತ್ರದ ವಿರುದ್ಧ ಯಾರೇ ಬಂದು ಹೇಳಿದರು ದೂರು ಸ್ವೀಕರಿಸುವ ಓಪನ್ ಡೋರ್ ನೀತಿಯ ಹಿಂದೆ ಯಾವ ರಾಜಕೀಯ ಲಾಭದ ಯೋಜನೆ ಇದೆ? ದೂರು ನೀಡುವವರ ಪ್ರಾಮಾಣಿಕತೆ ಮತ್ತು ಹೇಳಿಕೆಗಳನ್ನು ಪ್ರಾಥಮಿಕವಾಗಿ ಪರಿಶೀಲನೆ ಮಾಡದೆ ಹೇಗೆ ಸ್ವೀಕರಿಸುತ್ತಿದ್ದೀರಿ? ಘನ ನ್ಯಾಯಾಲಯಕ್ಕೆ ಸಾಕ್ಷ್ಯ ಕೊಡಲು ಭಯವಿದ್ದವರು ಸೋಶಿಯಲ್ ಮೀಡಿಯಾದಲ್ಲಿ ಮುಕ್ತವಾಗಿ ಆರೋಪ ಮಾಡುವ ಧೈರ್ಯವನ್ನು ಹೇಗೆ ತೋರಿಸುತಿದ್ದಾರೆ? ಭೀಮ ಎಂಬ ಮುಖ ಮುಚ್ಚಿದ ಮಾಸ್ಕ್ ಮ್ಯಾನ್ ಯಾರು? ಎಂದು ಮತ್ತೊಂದು ಪ್ರಶ್ನೆ ಮಾಡಿದ್ದಾರೆ.
ಇಷ್ಟು ವರ್ಷ ಎಲ್ಲಿದ್ದ? ಅವನನ್ನು ಯಾರು ರಕ್ಷಿಸುತ್ತಿದ್ದರು?ಹದಿಮೂರು ಸ್ಥಳ ಗುರುತಿಸಿದ್ದೇನೆ ಎಂದವನು ಈಗ ತನಗೆ ಮನಬಂದಲ್ಲಿ, ದಿನಕ್ಕೊಂದು ಜಾಗ ತೋರಿಸುತ್ತಿವುದು ಯಾಕೆ?. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಯವರೇ ಮುಸುಕುಧಾರಿಯ ಮಂಪರು ಪರೀಕ್ಷೆ ಆಗಬೇಕು ಎಂದರು, ಅದಕ್ಕೆ ಅನುಮತಿ ಕೊಡದಿರಲು ಕಾರಣ ಏನು? ಪರೀಕ್ಷೆ ನಡೆಯದಂತೆ ಒತ್ತಾಯ ಹೇಳಿದವರು ಯಾರು? . ಇಲ್ಲಿಯವರೆಗೆ ಯಾವ ಸಾಕ್ಷ್ಯಾಧಾರ ದೊರೆಯದಿದ್ದರೂ ಆತ ಹೇಳಿದ ಜಾಗವನ್ನೇಲ್ಲಾ, ಮರು ಪ್ರಶ್ನಿಸದೆ ಖಿ ಅಧಿಕಾರಿಗಳು ಅಗೆಯುತ್ತಿರುವುದರ ಹಿಂದಿನ ಮರ್ಮ ಏನು? ಎಂದು ಕೇಳಿದ್ದಾರೆ.
ನೂರಾರು ಹೆಣ ಹೂಳಿದ್ದೇನೆಎಂದು ಹೇಳಿ ತಲೆ ಬುರುಡೆ ತಂದು ಪೊಲೀಸರಿಗೆ ಒಪ್ಪಿಸಿದ ಆ ತಲೆ ಬುರುಡೆ ಯಾರದ್ದು?ಎಲ್ಲಿ ಸಿಕ್ಕಿತು, ಅವನು ಹೇಗೆ ತಂದ? ಒಬ್ಬ ಮುಸ್ಲಿಂ ಯೂ ಟ್ಯೂಬರ್ ಜೊತೆಗೆ ಕೆಲವು ಹಿಂದು ವಿರೋಧಿ ಯುಟ್ಯೂಬರ್ಗಳು ಖಿ ತನಿಖೆಯ ಕುರಿತು ನಿರಂತರವಾಗಿ ನಿಖರ ಮಾಹಿತಿ ನೀಡುವ ವಿಡಿಯೋಗಳ ಸತ್ಯಾಸತ್ಯತೆ ಏನು? ಈ ಮಾಹಿತಿಯನ್ನು ಅವರಿಗೆ ಯಾರು ನೀಡಿದ್ದು ಎಂದು ಸರ್ಕಾರಕ್ಕೆ ರವಿ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದ್ದಾರೆ.