ನವದೆಹಲಿ,ಆ.9– ಕುಸ್ತಿ ಪಟು ವಿನೇಶ್ ಪೋಗಟ್ ಅವರ ಅನರ್ಹತೆ ವಿರುದ್ಧ ಕಾನೂನು ಹೋರಾಟ ನಡೆಸಲು ಖ್ಯಾತ ವಕೀಲ ಹರೀಶ್ ಸಾಳ್ವೆ ಮುಂದಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಅನರ್ಹತೆಯ ಪ್ರಕರಣ ಕುರಿತಂತೆ ಕ್ರೀಡಾ ಮಧ್ಯಸ್ತಿಕೆ ನ್ಯಾಯಾಲಯದಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಸಾಳ್ವೆ ಪ್ರತಿನಿಧಿಸಲಿದ್ದಾರೆ.
50-ಕೆಜಿ ಕುಸ್ತಿ ವಿಭಾಗದಲ್ಲಿ ಅಗ್ರ ಸ್ಪರ್ಧಿಯಾಗಿದ್ದ ಫೋಗಟ್ ಅವರು, ಫೈನಲ್‌ಗೆ ಕೆಲವೇ ಗಂಟೆಗಳ ಮೊದಲು ತೂಕದ ಸಮಸ್ಯೆಯಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್ ನಿಂದ ಅನರ್ಹಗೊಂಡರು. ಒಲಿಂಪಿಕ್ಸ್ ನಲ್ಲಿ ಫೋಗಟ್ ಅವರ ಅದ್ಭುತ ಪ್ರದರ್ಶನಕ್ಕಾಗಿ ಜಂಟಿ ಬೆಳ್ಳಿ ಪದಕವನ್ನು ನೀಡುವಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಮನವಿ ಮಾಡಿಕೊಂಡಿದೆ.
ಕ್ರೀಡೆಯ ಮಧ್ಯಸ್ಥಿಕೆ ನ್ಯಾಯಾಲಯ ಅಥವಾ ಸಿಎಎಸ್ ಎಂಬುದು 1984 ರಲ್ಲಿ ಸ್ಥಾಪಿತವಾದ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಕ್ರೀಡೆಯಲ್ಲಿನ ವಿವಾದಗಳನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸುತ್ತದೆ.ಭಾರತದ ಮಾಜಿ ಸಾಲಿಸಿಟರ್ ಜನರಲ್ ಮತ್ತು ಕಿಂಗ್ಸ್ ಕೌನ್ಸಿಲ್ ಹರೀಶ್ ಸಾಳ್ವೆ ಅವರು ಈ ಪ್ರಕರಣದಲ್ಲಿ ಫೋಗಟ್ ಅವರನ್ನು ಪ್ರತಿನಿಧಿಸಲು ತೀರ್ಮಾನಿಸಿದ್ದಾರೆ.
ಸಾಳ್ವೆ ಅವರು 1999 ರಿಂದ 2002 ರವರೆಗೆ ಭಾರತದ ಸಾಲಿಸಿಟರ್ ಜನರಲ್ ಆಗಿದ್ದರು. ಅವರು ಭಾರತದ ಉನ್ನತ ವಕೀಲರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ, ಸಾಂವಿಧಾನಿಕ, ವಾಣಿಜ್ಯ ಮತ್ತು ಮಧ್ಯಸ್ಥಿಕೆ ಕಾನೂನಿನಲ್ಲಿ ಅವರ ಅಸಾಧಾರಣ ಪರಿಣತಿಗೆ ಹೆಸರುವಾಸಿಯಾಗಿದ್ದಾರೆ.
ಸಾಳ್ವೆ ಸಾಧನೆಗಳು:
ಕುಲಭೂಷಣ್ ಜಾಧವ್ ಪ್ರಕರಣ (2017): ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾದ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅವರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಇಒ) ಭಾರತವನ್ನು ಪ್ರತಿನಿಧಿಸಿದರು.
ಜಾಧವ್ ಅವರ ಮರಣದಂಡನೆಗೆ ತಡೆ ನೀಡಲು ಸಾಳ್ವೆ ಯಶಸ್ವಿಯಾಗಿ ವಾದಿಸಿದರು.ರತನ್ ಟಾಟಾ ವಿರುದ್ಧ ಸೈರಸ್ ಮಿಸ್ತ್ರಿ (2016): ಸಾಳ್ವೆ ಅವರು ಸೈರಸ್ ಮಿಸ್ತ್ರಿ ವಿರುದ್ಧ ಕಾನೂನು ಹೋರಾಟದಲ್ಲಿ ರತನ್ ಟಾಟಾ ಅವರನ್ನು ಪ್ರತಿನಿಧಿಸಿದರು.
ವೊಡಾಫೋನ್ ತೆರಿಗೆ ವಿವಾದ (2012):
ಈ ಪ್ರಕರಣದಲ್ಲಿ ಉನ್ನತ ಮಟ್ಟದ ತೆರಿಗೆ ವಿವಾದದಲ್ಲಿ ವೊಡಾಫೋನ್ ಅನ್ನು ಪ್ರತಿನಿಧಿಸಿದರು,2ಜಿ ಸ್ಪೆಕ್ಟ್ರಮ್ ಹಗರಣ (2012): ಸಾಳ್ವೆ ಅವರು 2ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಪರವಾಗಿ ಹಾಜರಾಗಿದ್ದರು.
ಸಹಾರಾ ಗ್ರೂಪ್ ವಿರುದ್ಧ ಸೆಬಿ (2012): ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೇಬಿ) ಯೊಂದಿಗಿನ ವಿವಾದದಲ್ಲಿ ವಕೀಲರು ಸಹಾರಾ ಗ್ರೂಪ್ ಅನ್ನು ಪ್ರತಿನಿಧಿಸಿದರು.