Monday, June 2, 2025
Homeರಾಜ್ಯವಿಶ್ವಸುಂದರಿ ಪಟ್ಟ ಯಾರಿಗೆ..?

ವಿಶ್ವಸುಂದರಿ ಪಟ್ಟ ಯಾರಿಗೆ..?

Who will be crowned Miss World 2025?

ಬೆಂಗಳೂರು,ಮೇ 31– ಬಹುನಿರೀಕ್ಷಿತ ವಿಶ್ವ ಸುಂದರಿ 2025 ಗ್ರ್ಯಾಂಡ್‌ ಫಿನಾಲೆಗೆ ವೇದಿಕೆ ಸಜ್ಜಾಗಿದ್ದು ಹೈದರಾಬಾದ್‌ನಲ್ಲಿರುವ ಹೈಟೆಕ್ಸ್ ಕನ್ವೆನ್ಷನ್‌ ಸೆಂಟರ್‌ನಲ್ಲಿಂದು ರಾತ್ರಿ 9.15ಕ್ಕೆ 72ನೇ ಆವೃತ್ತಿಯ ವಿಶ್ವಸುಂದರಿಯ ಫೈನಲ್‌ ಸ್ಪರ್ಧೆನಡೆಯಲಿದೆ.ಇನ್ನೂ, ಸಂಜೆ 6 ರಿಂದ ರಾತ್ರಿ 9ರವರೆಗೆ ಈ ಸ್ಪರ್ಧೆ ನಡೆಯಲಿದ್ದು, ಸ್ಥಳದಲ್ಲಿ 3,500 ಜನರು ನೇರ ಪ್ರೇಕ್ಷಕರು ಬರುವ ಸಾಧ್ಯತೆ ಇದೆ.

ಜೊತೆಗೆ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ, ವಿಶ್ವ ಸುಂದರಿ ಅಧ್ಯಕ್ಷೆ ಜೂಲಿಯಾ ಮಾರ್ಲಿ ಮತ್ತು ನೂತನ ರಾಣಿಗೆ ಕಿರೀಟಧಾರಣೆ ಮಾಡಲಿರುವ ಹಾಲಿ ವಿಶ್ವ ಸುಂದರಿ ಕ್ರಿಸ್ಟಿನಾ ಪಿಸ್ಜ್ಕೋವಾ ಅವರು ಭಾಗವಹಿಸಲಿದ್ದಾರೆ.

ಈಗಾಗಲೇ ಸುಂದರಿಯ ಅಂತಿಮ ಸುತ್ತಿಗೆ 24 ಮಂದಿ ಆಯ್ಕೆಯಾಗಿದ್ದು, ಭಾರತದಿಂದ ರಾಜಸ್ಥಾನ ಮೂಲದ ನಂದಿನಿ ಗುಪ್ತಾ ಸ್ಪರ್ಧಿಸಿದ್ದಾರೆ. ರಾಜಸ್ಥಾನ ಮೂಲದ, 2023ರ ಸಾಲಿನ ಮಿಸ್‌‍ ಇಂಡಿಯಾ ನಂದಿನಿ ಗುಪ್ತಾ ಅವರು ಭಾರತದಿಂದ ಸ್ಪರ್ಧೆ ಮಾಡಿದ್ದು, ಅಂತಿಮ 24ರ ಸುತ್ತನ್ನೂ ಯಶಸ್ವಿಯಾಗಿ ತಲುಪಿದ್ದಾರೆ. ಮಿಸ್‌‍ ವರ್ಲ್ಡ್ ಆಗಿ ಅವರು ಆಯ್ಕೆಯಾಗುತ್ತಾರಾ ಎಂಬದು ಕುತೂಹಲ ಮೂಡಿಸಿದೆ.

RELATED ARTICLES

Latest News