Thursday, September 19, 2024
Homeರಾಷ್ಟ್ರೀಯ | Nationalಮನೀಶ್‌ ಸಿಸೋಡಿಯಾ ಮುಂದಿನ ದೆಹಲಿ ಸಿಎಂ.?

ಮನೀಶ್‌ ಸಿಸೋಡಿಯಾ ಮುಂದಿನ ದೆಹಲಿ ಸಿಎಂ.?

Who will be next Delhi Chief Minister?

ನವದೆಹಲಿ,ಸೆ.16– ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್‌ ಕೇಜ್ರಿವಾಲ್‌ ರಾಜೀನಾಮೆ ಘೋಷಿಸಿದ ಬಳಿಕ ಆಮ್‌ ಆದಿ ಪಕ್ಷದ ಹಿರಿಯ ನಾಯಕ ಮನೀಶ್‌ ಸಿಸೋಡಿಯಾ ಮುಂದಿನ ಮುಖ್ಯ ಮಂತ್ರಿ ಎಂಬ ವದಂತಿ ಹಬ್ಬಿದೆ. ಕೇಜ್ರಿವಾಲ್‌ ಅವರು 48 ಗಂಟೆಗಳ ಒಳಗಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಇನ್ನೂ 24 ಗಂಟೆ ಬಾಕಿ ಉಳಿದಿದೆ. ಈ ನಡುವೆ ದೆಹಲಿಯ ಸಿಎಂ ಗದ್ದುಗೆಗೆ ಪೈಪೋಟಿ ಶುರುವಾಗಿದೆ.

ಈ ಮಧ್ಯೆ ಮನೀಶ್‌ ಸಿಸೋಡಿಯಾ, ಅರವಿಂದ್‌ ಕೇಜ್ರಿವಾಲ್‌ ಅವರನ್ನು ಭೇಟಿ ಸಭೆ ನಡೆಸಿರುವುದು ತೀವ್ರ ಕುತೂಹಲ ಉಂಟುಮಾಡಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಇಂದು ಸಭೆ ನಡೆದಿದ್ದು, ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಬಗ್ಗೆಯೂ ಚರ್ಚೆಯಾಗಿದೆ ಪಕ್ಷದ ವರಿಷ್ಠರ ನಿರ್ಧಾರದ ನಂತರ ಇದು ಮೊದಲ ಸಭೆಯಾಗಿದೆ. ಪಕ್ಷದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ಅಬಕಾರಿ ನೀತಿ ಪ್ರಕರಣದಲ್ಲಿ ತಿಹಾರ್‌ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕೇಜ್ರಿವಾಲ್‌, ಒಂದೆರಡು ದಿನಗಳಲ್ಲಿ ಎಎಪಿ ಶಾಸಕರ ಸಭೆ ನಡೆಸಲಿದ್ದು, ತಮ ಪಕ್ಷದ ಸಹೋದ್ಯೋಗಿಯೊಬ್ಬರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಅವರ ಹಠಾತ್‌ ಘೋಷಣೆಯಿಂದಾಗಿ ಅವರ ಪತ್ನಿ ಸುನೀತಾ, ಸಚಿವರಾದ ಅತಿಶಿ ಮತ್ತು ಗೋಪಾಲ್‌ ರೈ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬಂತಹ ಮಾತುಗಳು ಕೂಡಾ ಕೇಳಿಬರುತ್ತಿದೆ.

ದೆಹಲಿ ಸಿಎಂ ಮನಸ್ಸಿನಲ್ಲಿ ಏನಿದೆ:?
ಹಿರಿಯ ಎಎಪಿ ನಾಯಕರೊಬ್ಬರು ಜಾಮೀನು ಪಡೆದ ನಂತರ ರಾಜೀನಾಮೆ ನೀಡುವುದು ಮುಖ್ಯವಾಗಿತ್ತು. ಈಗ ಅವರು ಹೊರಗಿದ್ದು, ಸಿಎಂ ಸ್ಥಾನದಲ್ಲಿ ಮುಂದುವರಿಯಬಹುದು. ಆದರೆ ಯಾವುದೇ ಬಾಹ್ಯ ಒತ್ತಡಕ್ಕೆ ಒಳಗಾಗದೆ ಸ್ವಂತ ಇಚ್ಛೆಯಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ನಮ ಮೇಲೆ ಪದೇ ಪದೇ ದಾಳಿಗಳು ನಮನ್ನು ದುರ್ಬಲ ಸ್ಥಿತಿಗೆ ತಲುಪಿಸಿರುವುದು ನಿಜ. ಹಿರಿಯ ನಾಯಕರು ಅವರ ಅನುಪಸ್ಥಿತಿಯಲ್ಲಿ ಹರಡಿದ ವದಂತಿಗಳನ್ನು ಹೊರಹಾಕಲು ಮತ್ತು ಮತದಾರರೊಂದಿಗೆ ಮರುಸಂಪರ್ಕಿಸಲು ಗಮನಹರಿಸುತ್ತಾರೆ ಎಂದು ಕ್ರೇಜಿವಾಲ್‌ ಹೇಳಿದ್ದರು.

ಈ ಘೋಷಣೆಯು ಬಿಜೆಪಿಯ ಕೆಲವರಿಗೆ ಅಚ್ಚರಿ ಮೂಡಿಸಿದೆ. ಪಕ್ಷವು ಸಾಮಾನ್ಯವಾಗಿ ಆಮ್‌ ಆದಿ ಪಕ್ಷದ ಮೇಲೆ ಮತ್ತು ವಿಶೇಷವಾಗಿ ಅದರ ಹಿರಿಯ ನಾಯಕತ್ವದ ಕೇಜ್ರಿವಾಲ್‌ ಮೇಲೆ ಭ್ರಷ್ಟಾಚಾರದ ವಿಷಯದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಲು ಪ್ರಯತ್ನಿಸುತ್ತಿದೆ. ದೆಹಲಿ ಚುನಾವಣೆಗೆ ಪಕ್ಷವು ಇನ್ನೂ ಆರಂಭಿಕ ಹಂತದ ತಯಾರಿಯಲ್ಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ದೆಹಲಿ ಬಿಜೆಪಿ ಕಾರ್ಯದರ್ಶಿ ಹರೀಶ್‌ ಖುರಾನಾ ಅವರು ಘೋಷಣೆಯ ಸಮಯವನ್ನು ಪ್ರಶ್ನಿಸಿದ್ದಾರೆ. ಅವರು ರಾಜೀನಾಮೆ ನೀಡಲು ಎರಡು ದಿನಗಳ ಕಾಲಾವಕಾಶವನ್ನು ಏಕೆ ಕೇಳಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಇದು ಹೊಸ ನಾಟಕವನ್ನು ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ತೋರುತ್ತದೆ – ನಾನು ರಾಜೀನಾಮೆ ನೀಡಲು ಬಯಸುತ್ತೇನೆ ಆದರೆ ಜನರು ನಾನು ರಾಜೀನಾಮೆ ಕೊಡುವುದನ್ನು ಬಯಸುವುದಿಲ್ಲ ಎಂದಿದ್ದಾರೆ.

ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಬರೋಬ್ಬರಿ 6 ತಿಂಗಳು ಜೈಲಿನಲ್ಲಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಇದೇ ಸೆಪ್ಟೆಂಬರ್‌ 13ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆ ಬಳಿಕ ಮೊದಲ ಭಾಷಣ ಮಾಡಿದ ಕೇಜ್ರಿವಾಲ್‌ ರಾಜೀನಾಮೆ ಘೋಷಿಸಿದರು. ಅಲ್ಲದೇ ಜನತೆ ತೀರ್ಪು ನೀಡುವವರೆಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಈ ನಡುವೆ ಆಪ್‌ನಲ್ಲೇ ಇರುವ ದಿಗ್ಗಜ ನಾಯಕರ ನಡುವೆ ಪೈಪೋಟಿ ಶುರುವಾಗಿದೆ.

ಸದ್ಯ ಸಿಎಂ ರೇಸ್‌‍ನಲ್ಲಿ ಸಚಿವೆ ಅತಿಶಿ, ಮೂರು ಬಾರಿ ಶಾಸಕರಾಗಿರುವ ಸೌರಭ್‌ ಭಾರದ್ವಾಜ್, ರಾಘವ್‌ ಛಡ್ಡಾ, ಕೈಲಾಶ್‌ ಗೆಹ್ಲೋಟ್‌ ಹಾಗೂ ಸಂಜಯ್‌ ಸಿಂಗ್‌ ಅವರ ಹೆಸರು ಕೇಳಿಬಂದಿದೆ. ಸಚಿವ ಸಂಪುಟ ಸಭೆಯ ಬಳಿಕ ದೆಹಲಿಗೆ ನೂತನ ಸಿಎಂ ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ವರದಿಗಳು ಉಲ್ಲೇಖಿಸಿವೆ.

ಮುಂದಿನ ನವೆಂಬರ್ನಲ್ಲೇ ಮಹಾರಾಷ್ಟ್ರ ಚುನಾವಣೆಯ ಜೊತೆಗೆ ದೆಹಲಿ ಚುನಾವಣೆ ನಡೆಸುವಂತೆ ಕೇಜ್ರಿವಾಲ್‌ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಆದ್ರೆ ಆಯೋಗ ಮನವಿ ತಿರಸ್ಕರಿಸಿದ್ದು, 2025ರ ಫೆಬ್ರವರಿಯಲ್ಲಿ ದೆಹಲಿಯ ವಿಧಾನಸಭಾ ಚುನಾವಣೆ ನಡೆಯಲಿದೆ.

ಈ ನಡುವೆ ಮಾತನಾಡಿರುವ ಸಿಎಂ ಕೇಜ್ರಿವಾಲ್‌, ಮಾಡಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವರೊಂದಿಗೆ ನಾನು ಜನರ ಬಳಿಗೆ ಹೋಗುತ್ತೇನೆ. ಜನರ ತೀರ್ಪು ಪಡೆದ ನಂತರವೇ ಕಚೇರಿಗೆ ಮರಳುತ್ತೇನೆ ಎಂದು ಗುಡುಗಿದ್ದಾರೆ. ಇದು ಬ್ರಿಟಿಷ್‌ ವಸಾಹತುಶಾಹಿ ಆಳ್ವಿಕೆಗಿಂತ ಹೆಚ್ಚು ಸರ್ವಾಧಿಕಾರಿ ಆಡಳಿತವಾಗಿದೆ. ಕೇಂದ್ರ ಸರ್ಕಾರ ಏನೇ ಪಿತೂರಿ ಮಾಡಿದರೂ ನಮ ಸಂಕಲ್ಪ ಮುರಿಯಲು ಸಾಧ್ಯವಿಲ್ಲ, ರಾಷ್ಟ್ರಕ್ಕಾಗಿ ನಮ ಹೋರಾಟ ಮುಂದುವರಿಯುತ್ತೆ ಎಂದು ಎಚ್ಚರಿಕೆ ನೀಡಿದ್ದರು.

RELATED ARTICLES

Latest News