ಬೆಂಗಳೂರು,ಆ.2- ಕೇಂದ್ರ ಚುನಾವಣಾ ಆಯೋಗದ ಕುರಿತು ಹೇಳಿಕೆ ನೀಡಿದರೆ ಬಿಜೆಪಿ ಅಡ್ಡಬಾಯಿ ಹಾಕಿ ಸಮರ್ಥಿಸಿಕೊಳ್ಳುತ್ತಿರುವುದೇಕೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಅಕ್ರಮಗಳಾಗಿವೆ ಎನ್ನುತ್ತಿದ್ದಂತೆ ಬಿಜೆಪಿಯವರು ಭಯ ಬೀಳುತ್ತಿದ್ದಾರೆ. ಆಯೋಗ ಸ್ವಾಯತೆಯ ಸಂಸ್ಥೆ. ಅದು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತದೆ ಎಂದು ಹೇಳಿದರು.
ಮತ ಕಳ್ಳತನದ ಬಗ್ಗೆ ಈ ಹಿಂದೆ ಕರ್ನಾಟಕದಲ್ಲಿ ಸಾಕಷ್ಟು ದೂರುದಾಖಲಾಗಿದ್ದವು. ಚಿಲುಮೆ ಸಂಸ್ಥೆಯ ಅಕ್ರಮಗಳ ಬಗ್ಗೆ ಬಿಜೆಪಿಯ ಅವಧಿಯಲ್ಲೇ ಪ್ರಕರಣ ದಾಖಲಾಗಿತ್ತು. ಇವುಗಳನ್ನು ಮುಂದಿಟ್ಟುಕೊಂಡೇ ರಾಹುಲ್ ಗಾಂಧಿ ಪ್ರತಿಭಟನೆ ಮಾಡುತ್ತಿದ್ದಾರೆ.
ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ. ದೂರು ಎಷ್ಟು ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ. ಪ್ರತಿ ಭಾರಿಯೂ ಕೇಂದ್ರ ಸರ್ಕಾರದ ಅಣತಿಯಂತೆ ವರ್ತಿಸುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ಅಕ್ರಮಗಳಿಗೆ ಅವಕಾಶ ಕೊಟ್ಟಿಲ್ಲ. ಸ್ವಾಯತೆ ಸಂಸ್ಥೆಗಳ ಮೇಲೆ ಪ್ರಭಾವ ಬೀರಲಿಲ್ಲ. ಸುಪ್ರೀಂಕೋರ್ಟ್ ಕೇಂದ್ರ ತನಿಖಾ ಸಂಸ್ಥೆಗಳ ಬಗ್ಗೆ ಪದೇಪದೇ ಟೀಕೆ ಮಾಡುತ್ತಲೇ ಇದೆ. ಅದರೆ ಅದರ ಲೋಪಗಳನ್ನು ತಿದ್ದುಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-11-2025)
 - ಅಭಿವೃದ್ಧಿ ಕಾಣದ ದೇವರಾಜ ಅರಸ್ ಅವರ ಮನೆ
 - ದಲಿತ ಅಥವಾ ಮುಸ್ಲಿಂ ಸಮುದಾಯಕ್ಕೆ ಸಿಎಂ ಸ್ಥಾನ ನೀಡಲು ಆಗ್ರಹ
 - ಕುರ್ಚಿ ಕಿತ್ತಾಟದಲ್ಲಿ ರೈತರನ್ನು ಮರೆತ ಸರ್ಕಾರ : ಆರ್.ಅಶೋಕ್
 - ಬಾಣಲಿ ಹೆಲ್ಮೆಟ್ ಸವಾರನಿಗಾಗಿ ಪೊಲೀಸರ ಶೋಧ
 
