Sunday, September 14, 2025
Homeರಾಜ್ಯಪಹಲ್ಗಾಮ್‌ ದಾಳಿಗೆ ಅವಕಾಶ ಮಾಡಿಕೊಟ್ಟಿದ್ದೇಕೆ..? : ಗುಂಡೂರಾವ್‌ ಪ್ರಶ್ನೆ

ಪಹಲ್ಗಾಮ್‌ ದಾಳಿಗೆ ಅವಕಾಶ ಮಾಡಿಕೊಟ್ಟಿದ್ದೇಕೆ..? : ಗುಂಡೂರಾವ್‌ ಪ್ರಶ್ನೆ

Why was the Pahalgam attack allowed?: Gundu Rao's question

ಬೆಂಗಳೂರು,ಜು.30– ಪಹಲ್ಗಾಮ್‌ ದಾಳಿಯ ನಂತರದ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಅಷ್ಟು ಬಹಿರಂಗವಾಗಿ ಭಯೋತ್ಪಾದಕ ದಾಳಿಯಾಗಲು ಅವಕಾಶ ಮಾಡಿಕೊಟ್ಟಿದ್ದೇಕೆ ಎಂಬ ಬಗ್ಗೆ ಈವರೆಗೂ ಉತ್ತರ ದೊರೆತಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮದಲ್ಲಿ 40 ಸೈನಿಕರ ಸಾವಿನ ಬಗ್ಗೆ ಈವರೆಗೂ ಸ್ಪಷ್ಟತೆ ಇಲ್ಲ. ಆರೋಪಿಗಳ್ಯಾರು ಎಂಬುದನ್ನು ತಿಳಿಸಲಾಗಿಲ್ಲ. ಇತ್ತೀಚೆಗೆ ನಡೆದ ಪಹಲ್ಗಾಮ್‌ ದಾಳಿಯ ಬಗ್ಗೆಯೂ ನಿಖರತೆ ಇಲ್ಲವಾಗಿದೆ. ಯಾವುದಕ್ಕೂ ಕೇಂದ್ರ ಸರ್ಕಾರ ಉತ್ತರ ನೀಡುತ್ತಿಲ್ಲ. ಎಷ್ಟು ವಿಮಾನಗಳು ನಾಶವಾದವು ಎಂಬುದು ಈವರೆಗೂ ಅಸ್ಪಷ್ಟತೆಯಿಂದಲೇ ಕೂಡಿದೆ ಎಂದರು.

ಕದನ ವಿರಾಮಕ್ಕೆ ತಾವು ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳುತ್ತಿದ್ದಾರೆ. ಪಾಕಿಸ್ತಾನ ಭಾರತದ 5 ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ. ಇದ್ಯಾವುದನ್ನೂ ಕೇಂದ್ರಸರ್ಕಾರ ನಡೆದಿದೆ ಅಥವಾ ನಡೆದಿಲ್ಲ ಎಂದು ಖಚಿತವಾಗಿ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಬರಗಾಲದ ಸಂದರ್ಭದಲ್ಲಿ ನೀಡಬೇಕಾದ ಪರಿಹಾರದ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಅದನ್ನು ಸುಪ್ರೀಂಕೋರ್ಟ್‌ ಮೊರೆ ಹೋಗಿ ಪಡೆದುಕೊಳ್ಳಬೇಕಾಯಿತು. ಬಿಜೆಪಿಯಿಂದ ಸಂಸದರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಹ್ಲಾದ್‌ ಜೋಷಿ ಸೇರಿದಂತೆ ಯಾರೂ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಬಲಾಢ್ಯರಿದ್ದಾರೆ. ಅವರಿಗೆ ಬಲಪ್ರದರ್ಶನ ಮಾಡುವ ಅಗತ್ಯವಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಶಾಸಕರ ಜೊತೆ ಸಭೆ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ವಿಶೇಷಗಳಿಲ್ಲ. ಮುಖ್ಯಮಂತ್ರಿಯವರಿಗೆ ತಮದೇ ಆದ ಕಾರ್ಯಕಲಾಪ ಪಟ್ಟಿಗಳಿರುತ್ತವೆ. ಅದರಂತೆ ಸಭೆಗಳು ನಡೆಯುತ್ತವೆ ಎಂದರು.

RELATED ARTICLES

Latest News