ಶಿವಮೊಗ್ಗ,ಜ.2-ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ತಿಳಿದು ಆತಂಕಗೊಂಡ ಪತ್ನಿ ನೇಣು ಕಾಕಿಕೊಂಡು ಆತ್ಮಹತ್ಯೆಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕಿಲ್ಲೆ ಕ್ಯಾತರ ಕ್ಯಾಂಪ್‌ನಲ್ಲಿ ನಡೆದಿದೆ.ಮಂಜುನಾಥ್ (25), ಅಮೃತ (21) ಮೃತ ದುರ್ದೈವಿಗಳು.
ಮಂಜುನಾಥ್ ಜ.31 ರಂದು ಬೈಕ್‌ನಲ್ಲಿ ಹೋಗುವಾಗ ಶಿಕಾರಿಪುರದ ಬಳಿ ಅಪಘಾತ ನಡೆದು ತೀವ್ರವಾಗಿ ಗಾಯಗೊಂಡಿದ್ದರು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿನ್ನೆ ಮೃತಪಟ್ಟಿದ್ದಾರೆ.
ಈ ವಿಷಯ ತಿಳಿಯುತ್ತಿದಂತೆ ಮನನೊಂದ ಪತ್ನಿ ಅಮೃತ ಮನೆಗೆ ಬಂದು ತನ್ನ ವೇಲಿನಿಂದ ಪ್ಯಾನಿಗೆ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾಳೆ.ಕಳೆಸ ವರ್ಷ ಮಂಜುನಾಥ್ ಹಾಗೂ ಅಮೃತ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು ಆದರೆ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ದಂಪತಿ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಹೊಸನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.