ಬೆಂಗಳೂರು,ಮಾ.19- ಸಾಫ್ಟ್ ವೇರ್ ಎಂಜಿನಿಯರ್‌ನನ್ನು ಮದುವೆಯಾದ ಯುವತಿಯೊಬ್ಬಳು ಪತಿಗೆ ಕಿರುಕುಳ ನೀಡಿ ತನ್ನೊಂದಿಗೆ ಸಂಸಾರ ಮಾಡಲು ದಿನಕ್ಕೆ 5ಸಾವಿರ ರೂ.ಗಳ ಬೇಡಿಕೆ ಇಟ್ಟಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.
2022ರಲ್ಲಿ ಮದುವೆಯಾದ ಈ ಯುವತಿ ತನ್ನ ಪತಿಯೊಂದಿಗೆ ಒಂದು ದಿನವೂ ಸರಿಯಾಗಿ ಸಂಸಾರ ಮಾಡಿಲ್ಲವಂತೆ. ನಮಗೆ ಈಗಲೇ ಮಕ್ಕಳು ಬೇಡ ನನ್ನ ಸೌಂದರ್ಯ ಹಾಳಾಗುತ್ತೆ, 60 ವರ್ಷದ ಬಳಿಕ ಮಕ್ಕಳು ಮಾಡಿಕೊಳ್ಳೋಣ, ಹಾಗೊಂದು ವೇಳೆ ಮಕ್ಕಳು ಬೇಕೆಂದರೆ ದತ್ತು ಪಡೆಯೋಣವೆಂದು ಹೇಳುತ್ತಿರುವುದು ಟೆಕ್ಕಿಗೆ ಒಂದು ರೀತಿ ಇರಿಸು ಮುರುಸಾಗಿದೆ.
ದುಡಿದ ಹಣವೆಲ್ಲವನ್ನೂ ಪತ್ನಿ ಖರ್ಚು ಮಾಡಿದ್ದಾಳೆ. ಒಂದು ವೇಳೆ ಪತ್ನಿ ಸಮೀಪ ಹೋದರೆ ಡೆತ್ ನೋಟ್ ಬರೆದಿಟ್ಟು ಆತಹತ್ಯೆ ಮಾಡಿಕೊಳ್ಳುವುದಾಗಿ ಪತಿಗೆ ಬೆದರಿಕೆ ಹಾಕಿದ್ದಾಳಂತೆ.
ಅಲ್ಲದೇ ಡಿವೋರ್ಸ್ ನೀಡಲು 45ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾಳೆಂದು ಟೆಕ್ಕಿ ಆಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಪತ್ನಿಯ ವರ್ತನೆಯಿಂದ ಮನನೊಂದ ಟೆಕ್ಕಿ ಇದೀಗ ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ವೈಯಾಲಿ ಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಪೊಲೀಸರು ಪರಿಶೀಲಿಸಿ ಎನ್‌ಸಿಆರ್ ದಾಖಲಿಸಿಕೊಂಡು ಪ್ರಕರಣವನ್ನು ಸಂಪಿಗೆ ಹಳ್ಳಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.