Saturday, August 2, 2025
Homeರಾಜ್ಯಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

Wife kills husband along with lover

ಕೊಪ್ಪಳ,ಅ.1-ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು, ಸುಟ್ಟು ಹಾಕಿದ ಘಟನೆ ತಾಲೂಕಿನ ಬುದಗೂಂಪದಲ್ಲಿ ನಡೆದಿದೆ. ದ್ಯಾಮಣ್ಣ ವಜ್ರಬಂಡಿ (38) ಕೊಲೆಯಾದ ವ್ಯಕ್ತಿಯಾಗಿದ್ದು ,ಸದ್ಯ ಅವರ ಪತ್ನಿ ನೇತ್ರಾವತಿ ಹಾಗು ಪ್ರಿಯಕರ ಶಾಮಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಜು.25 ರಂದು ನೇತ್ರಾವತಿ ಹಾಗು ಪ್ರಿಯಕರ ಶ್ಯಾಮಣ್ಣ ಜೊತೆ ಸೇರಿಕೊಂಡು ದ್ಯಾಮಣ್ಣನನ್ನ ತಮ್ಮ ಜಮೀನಿನಲ್ಲಿಯೇ ರಾಡ್‌ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿ 5 ಕಿಲೋ ಮೀಟರ್‌ ದೂರದವರೆಗೆ ಹೋಗಿ ಪೆಟ್ರೋಲ್‌ ಸುರಿದು ಶವ ಸುಟ್ಟು ಹಾಕಿದ್ದರು.ಇನ್ನೂ ಅಪರಿಚಿತ ಶವ ಪತ್ತೆಯಾದಾಗ ಗುರುತು ಸಿಗದ ಹಿನ್ನೆಲೆ ಕೊಪ್ಪಳ ಮುನಿರಾಬಾದ್‌ ಪೊಲೀಸರೇ 2 ದಿನದ ಹಿಂದೆ ಶವ ಸಂಸ್ಕಾರ ಮಾಡಿದ್ದರು.

ಘಟನೆ ವಿವರ : ಆರೋಪಿ ಶ್ಯಾಮಣ್ಣ ಲಾರಿ ಚಾಲಕನಾಗಿದ್ದು,ಮೂಲತಃ ಕೊಪ್ಪಳ ತಾಲೂಕಿನ ಕಾಮನೂರ ನಿವಾಸಿಯಾಗಿದ್ದು ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಅದೇ ಗ್ರಾಮದ ನೇತ್ರಾವತಿ ಹಾಗು ಬೂದಗುಂಪ ಗ್ರಾಮದ ದ್ಯಾಮಣ್ಣ ಜೊತೆ ಮದುವೆಯಾಗಿತ್ತು.ಆದರೆ ನೇತ್ರಾವತಿ ಹಾಗೂ ಶ್ಯಾಮಣ್ಣ ನಡುವೆ ಅಕ್ರಮ ಸಂಭಂದವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಗ್ಯಾರೇಜ್‌ ಒಂದರಲ್ಲಿ ಆರೋಪಿ ಶ್ಯಾಮಣ್ಣ ಲಾರಿ ಚಕ್ರ ರಿಪೇರಿಗೆಂದು ರಾಡ್‌ ಪಡೆದಿದ್ದ ನಂತರ ಅದೇ ರಾಡ್‌ ನಿಂದ ಹೊಡೆದು ದ್ಯಾಮಣ್ಣನನ್ನ ಕೊಲೆ ಮಾಡಿ ರಾಡ್‌ ತೊಳೆದು ವಾಪಸ್‌ ಕೊಟ್ಟಿದ್ದಾನೆ. ಜೊತೆಗೆ ಲಾರಿ ಟಯರ್‌ಗೆ ಪಂಚರ್‌ ಹಾಕಿಸಿಕೊಂಡು ಹಣ ಆಮೇಲೆ ಕೊಡ್ತೀನಿ ಎಂದು ಸಹಿ ಮಾಡಿ ಹೋಗಿದ್ದ,ಇತ್ತ ಗಂಡ ಧರ್ಮಸ್ಥಳಕ್ಕೆ ಹೋಗಿದ್ದಾನೆಂದು ಕಥೆ ಕಟ್ಟಿದ್ದ ನೇತ್ತಾವತಿ ತನ್ನ ಮೊಬೈಲ್‌ ಕೂಡ ಸ್ವಿಚ್‌ ಆ್‌‍ ಮಾಡಿ ಮನೆಯಲ್ಲೇ ಇದ್ದಳು. ಅನುಮಾನಗೊಂಡು ಮೊನ್ನೆ ದ್ಯಾಮಣ್ಣ ಸಹೋದರರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ನೇತ್ರಾವತಿಯನ್ನು ವಿಚಾರಣೆ ನಡೆಸಿದ ಬಳಿಕ ಸತ್ಯ ಬಾಯಿಬಿಟ್ಟಿದ್ದಾಳೆ ಬಳಿಕ ಪ್ರಿಯಕರ ಶ್ಯಾಮಣ್ಣನನ್ನ ಪೊಲೀಸರು ಬಂಧಿಸಿದ್ದಾರೆ. ಈಗ ವಿಷಯ ತಿಳಿದ ಬಳಿಕ ದ್ಯಾಮಣ್ಣ ಕುಟುಂಬಸ್ಥರು ಮುನಿರಾಬಾದ್‌ಗೆ ತೆರಳಿ ಗುರುತು ಪತ್ತೆ ಮಾಡಿದ್ದಾರೆ.ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News