ಬೆಂಗಳೂರು,ಅ.4- ಜೈಲಿನಲ್ಲಿರುವ ಪತಿ ದರ್ಶನ್ ಪರಿಸ್ಥಿತಿ ಕಂಡು ಪತ್ನಿ ವಿಜಯಲಕ್ಷಿ ಕಣ್ಣೀರಿಟ್ಟಿದ್ದಾರೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಬಾರೀ ಜೈಲು ಸೇರಿರುವ ನಟ ದರ್ಶನ್‌ಗೆ ಒಂದರ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಿವೆ.
ಪರಪ್ಪನ ಅಗ್ರಹಾರ ಜೈಲಿಗೆ ವಿಜಯಲಕ್ಷಿ ಭೇಟಿ ನೀಡಿದ ಸಂದರ್ಭದಲ್ಲಿ, ದಿಂಬು ಇಲ್ಲದೇ ಪರದಾಡುವಂತಾಗಿದ್ದು, ಕೂರಲು ಖುರ್ಚಿಯೂ ಇಲ್ಲದೇ ಒದ್ದಾಡುವಂತಾಗಿದೆ. ಜೊತೆಗೆ ವ್ಯಾಯಾಮ, ನಡಿಗೆಗೆ ಅವಕಾಶ ಇಲ್ಲದೆ ಕಷ್ಟವಾಗುತ್ತಿದೆ ಎಂದು ದರ್ಶನ್ ಸಂಕಷ್ಟ ತೋಡಿಕೊಂಡಿದ್ದಾರೆ.
ಜೈಲಿಗೆ ಬಂದು ಗಂಟೆಗಟ್ಟಲೇ ಕಾಯ್ದು ಬಳಿಕ ದರ್ಶನ್ ಭೇಟಿಯಾಗಬೇಕು. ಹೀಗಾಗಿ ನಟ ದರ್ಶನ್ ನಮ ಹಣೆಬರಹ ಇರೋಹಂಗೆ ಆಗುತ್ತೆ. ನೀನು ಇನುಂದೆ ಜೈಲಿಗೆ ಬರಬೇಡ ಎಂದು ಹೇಳಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಜೈಲಿನಲ್ಲಿ ದರ್ಶನ್ ಜೊತೆ ಮಾತನಾಡಿ ಹೊರಬರುವಾಗ ಕಣ್ಣಿರು ಹಾಕಿದ್ದಾರೆ. ನಂತರ ಮಾಧ್ಯಮದವರನ್ನು ಮಾತನಾಡಿಸಲು ಹೋದಾಗಲು ಕೈಮುಗಿದು ಅಳುತ್ತಾ ಕಾರಿನಲ್ಲಿ ತೆರಳಿದ್ದಾರೆ.