ಕೊರಟಗೆರೆ,ಜು.8- ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯತಮನ ಜೊತೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷದ ಮಗಳ ಹೇಳಿಕೆ ಅನ್ವಯಿಸಿ ತುಮಕೂರಿನ ಮೂರನೇ ಅಧಿಕ ಸತ್ರ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ತಾಲೂಕಿನ ಗಡಿಭಾಗ ಮಧುಗಿರಿ ತಾಲೂಕಿನ ಕೊಡಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಜರಗಿದ್ದು, ಯಶೋಧ ಎಂಬ ಮಹಿಳೆ ಪ್ರಿಯತಮ ಮಂಜುನಾಥನ ಜೊತೆ ಸೇರಿ ಗಂಡ ಅಂಜನಪ್ಪ ಎಂಬುವರನ್ನು ಕೊಲೆಗೈದ ಪ್ರಕರಣ ಆರು ವರ್ಷಗಳ ನಂತರ ತೀರ್ಪು ಹೊರಬಿದ್ದಿದ್ದು, ಈ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಮಧುಗಿರಿ ತಾಲೂಕು ಕೊಡಗೇನಹಳ್ಳಿ ಹೋಬಳಿ ಭಟ್ಟಗೆರೆ ಗ್ರಾಮದ ಅಂಜಿನಪ್ಪ ಹಾಗೂ ಯಶೋಧ ದಂಪತಿ ನಡುವೆ ಸಾಮರಸ್ಯ ಕೊರತೆ ಸೇರಿದಂತೆ ಹೆಂಡತಿ ಪ್ರಿಯತಮನೊಂದಿಗೆ ಸತತವಾಗಿ ಸಂಪರ್ಕ ಇಟ್ಟುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಸಾಂಸಾರಿಕ ಜೀವನದಲ್ಲಿ ಪ್ರತಿದಿನ ಗಲಾಟೆ ನಡೆಯುತ್ತಿತ್ತು.
ಈ ನಡುವೆ ಅಂತಿಮವಾಗಿ ಹೆಂಡತಿ ಯಶೋಧ ತನ್ನ ಪ್ರಿಯತಮ ಮಂಜುನಾಥ್ ಜೊತೆಗೂಡಿ ಪತಿ ಅಂಜಿನಪ್ಪನನ್ನು ಕೊಲೆ ಮಾಡಲು ನಿರ್ಧರಿಸಿದ್ದಾಳೆ.ತೋಟದ ಮನೆಯಲ್ಲಿ ಆಂಜನಪ್ಪನಿಗೆ ಅಂದಿನ ರಾತ್ರಿ ಹೆಚ್ಚು ಮದ್ಯ ಕುಡಿಸಿ ಜ್ಞಾನತಪ್ಪುವಂತೆ ಮಾಡಿ ನಂತರ ಮಲಗಿದ್ದಾಗ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ಪ್ರಕರಣ ಅಂದಿನ ಸಿಪಿಐ ಅಂಬರೀಶ್ ಅವರು ಹೆಂಡತಿ ಮೇಲೆಯೇ ಅನುಮಾನಗೊಂಡು ತನಿಖೆ ನಡೆಸಿದ ಸಂದರ್ಭದಲ್ಲಿ ಆರೋಪಿತೆ ತಪ್ಪು ಒಪ್ಪಿಕೊಂಡಿದ್ದಾಳೆ. ನಂತರ ತಲೆಮರೆಸಿಕೊಂಡಿದ್ದಪ್ರಿಯತಮ ಮಂಜುನಾಥನನ್ನು ಪೊಲೀಸರು ಪ್ರಕರಣ ನಡೆದ ಎರಡು ದಿನದಲ್ಲಿ ಎಡೆಮುರಿ ಕಟ್ಟಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಅಂತಿಮ ಪಟ್ಟಿ ಸಲ್ಲಿಸಿದ್ದರು.
ಸಾಕ್ಷಿ ನುಡಿದ 3 ವರ್ಷದ ಮಗು: ಕೊಲೆ ಪ್ರಕರಣ ಅಂತಿಮವಾಗಿ ಮೂರು ವರ್ಷದ ಮಗಳು ಜಾನಶ್ರೀ ನುಡಿದ ಸಾಕ್ಷಿ ಆಧಾರವಾಗಿಟ್ಟುಕೊಂಡು ಅಂದಿನ ಡಿವೈಎಸ್ ಪಿ ಕಲ್ಲೇಶಪ್ಪ ಮಾರ್ಗದರ್ಶನದಂತೆ ಸಿಪಿಐ ಅಂಬರೀಶ್ ಆರೋಪಿಗಳನ್ನ ಸತತವಾಗಿ ವಿಚಾರಣೆ ಗೊಳಿಸಿದ್ದಲ್ಲದೆ ಘಟನೆ ಮಧ್ಯರಾತ್ರಿ 3 ಗಂಟೆಗೆ ಜರುಗಿದ ಹಿನ್ನೆಲೆಯಲ್ಲಿ ಸಾಕ್ಷಿ ಆಧಾರಗಳ ಕೊರತೆಯಿಂದ ಅಂತಿಮವಾಗಿ 3 ವರ್ಷದ ಮಗಳು ಜಾನುಶ್ರೀ ಸಾಕ್ಷಿ ನುಡಿದಿದ್ದಾಳೆ.ಈ ಮಗುವನ್ನೇ ಅಂತಿಮ ಸಾಕ್ಷಿಯನ್ನಾಗಿಸಿಕೊಂಡು ಚಾರ್ ಶೀಟ್ ಸಲ್ಲಿಸಿದ ಅಂದಿನ ಸಿಪಿಐ ಅಂಬರೀಶ್ ಕೂಲಂಕುಶವಾಗಿ ಅಂತಿಮ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಿದೆ.
- ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ಡಿಸಿಎಂ ಚರ್ಚೆ
- ಇಡಿ ಯಿಂದ ಡಿ.ಕೆ.ಸುರೇಶ್ ವಿಚಾರಣೆ
- ಇಂದು ಅಮರನಾಥನ ದರ್ಶನಕ್ಕೆ ಹೊರಟ 7500 ಭಕ್ತರು
- ಗಾಂಜಾ ನಾಶಕ್ಕೆ ಟೊಂಕ ಕಟ್ಟಿ ನಿಂತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್
- ಬಿಹಾರ ಮಹಿಳೆಯರಿಗೆ ಮಾತ್ರ ಉದ್ಯೋಗ ಮೀಸಲಾತಿ : ನಿತೀಶ್ ಕುಮಾರ್ ಘೋಷಣೆ