Thursday, December 5, 2024
Homeಜಿಲ್ಲಾ ಸುದ್ದಿಗಳು | District Newsಕುಕ್ಕೆ ಸುಬ್ರಹಣ್ಯ ದೇವಾಲಯದಲ್ಲಿ ಕಾಡಾನೆ ಪ್ರತ್ಯಕ್ಷ, ಕೆಲಕಾಲ ಆತಂಕ

ಕುಕ್ಕೆ ಸುಬ್ರಹಣ್ಯ ದೇವಾಲಯದಲ್ಲಿ ಕಾಡಾನೆ ಪ್ರತ್ಯಕ್ಷ, ಕೆಲಕಾಲ ಆತಂಕ

Wild Tusker creates stir at Kukke Subrahmanya Temple

ಮಂಗಳೂರು, ಡಿ 2 (ಪಿಟಿಐ) – ಪ್ರಸಿದ್ಧ ಕುಕ್ಕೆ ಸುಬ್ರಹಣ್ಯ ದೇವಸ್ಥಾನದ ಆವರಣಕ್ಕೆ ಕಾಡು ಆನೆಯೊಂದು ದಾರಿ ತಪ್ಪಿ ಬಂದ ಪರಿಣಾಮ ಕೆಲ ಕಾಲ ದೇವಾಲಯದ ಸುತ್ತಮುತ್ತ ಆತಂಕ ಮನೆ ಮಾಡಿತ್ತು.

ತಡ ರಾತ್ರಿ ಈ ಘಟನೆ ಸಂಭವಿಸಿದ್ದು, ಆನೆಯು ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಅಲೆದಾಡಿದ್ದು, ಭಕ್ತರಲ್ಲಿ ಭಯವನ್ನುಂಟುಮಾಡಿದೆ.ಆನೆಯನ್ನು ಗಮನಿಸಿದ ಕೆಲವು ಭಕ್ತರು ಆರಂಭದಲ್ಲಿ ಅದನ್ನು ದೇವಾಲಯದ ಆನೆ ಎಂದು ತಪ್ಪಾಗಿ ಭಾವಿಸಿ ಪ್ರಾರ್ಥನೆ ಸಲ್ಲಿಸಲು ಪ್ರಯತ್ನಿಸಿದರು. ಆದರೆ, ಅದು ದೇವಸ್ಥಾನದ ಆನೆ ಅಲ್ಲ ಎಂದು ದೇವಸ್ಥಾನದ ಸಿಬ್ಬಂದಿ ತಕ್ಷಣ ಮಾಹಿತಿ ನೀಡಿದರು.

ಕೂಡಲೇ ಭಕ್ತರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಿಬ್ಬಂದಿ ಒತ್ತಾಯಿಸಿದ್ದು, ದೇವಸ್ಥಾನದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಅರಣ್ಯ ಇಲಾಖೆ, ಸ್ಥಳೀಯ ಪೊಲೀಸರು ಮತ್ತು ಗ್ರಾಮಸ್ಥರು ಪರಿಸ್ಥಿತಿಗೆ ಕ್ಷಿಪ್ರವಾಗಿ ಸ್ಪಂದಿಸಿದರು. ಸಂಘಟಿತ ಪ್ರಯತ್ನದ ನಂತರ, ಅವರು ಯಶಸ್ವಿಯಾಗಿ ಕಾಡು ಆನೆಯನ್ನು ಕಾಡಿಗೆ ಓಡಿಸಿದರು.ಆನೆ ಹಿಂತಿರುಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ದೇವಾಲಯದ ಸಿಬ್ಬಂದಿ ಮತ್ತು ಭಕ್ತರು ಜಾಗರೂಕರಾಗಿರಲು ಸೂಚಿಸಿದ್ದಾರೆ.

ಬೇಲೂರಿನಲ್ಲೂ ಕಾಣಿಸಿಕೊಂಡ ಕಾಡಾನೆಗಳು
ಬೇಲೂರು ಪಟ್ಟಣದ ವಿಷ್ಣು ಸಮುದ್ರಕೆರೆಯ ಮಧ್ಯದಲ್ಲಿ ಎರಡು ಕಾಡಾನೆಗಳು ಕಾಣಿಸಿಕೊಂಡು ಗಂಟೆಗೂ ಹೆಚ್ಚು ಸಮಯ ನೀರಿನಲ್ಲಿ ಈಜಾಡಿ ಬೊಮಡಿಹಳ್ಳಿ ಅರಣ್ಯಕ್ಕೆ ತೆರಳಿರುವುದು ಈ ಭಾಗದ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ತಾಲೂಕಿನ ಬಿಕ್ಕೋಡು-ಅರೇಹಳ್ಳಿ ಸೇರಿದಂತೆ ಮಲೆನಾಡು ಬಾಗದ ಗ್ರಾಮಗಳಲ್ಲಿ ಕಂಡು ಬರುತಿದ್ದ ಕಾಡಾನೆಗಳ ಪೈಕಿ ಗುಂಪಿನಿಂದ ಪ್ರತ್ಯೇಕವಾಗಿರುವ ಎರಡು ಕಾಡಾನೆಗಳು ಆಹಾರ ಅರಸಿ ಪಟ್ಟಣ ಸಮೀಪದ ಗ್ರಾಮಗಳ ಮೂಲಕ ವಿಷ್ಣು ಸಮುದ್ರಕೆರೆಗೆ ಬಂದು ತಮ ಪಾಡಿಗೆ ತಾವು ಕೆರೆಯಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಈಜಾಡಿವೆ.

ಈ ಆನೆಗಳನ್ನು ನೋಡಿದ ಕೆಲವರು ಒಬ್ಬರಿಂದ ಮತ್ತೊಬ್ಬರಿಗೆ ವಿಷಯ ಮುಟ್ಟಿಸಿದ್ದಾರೆ. ಇದರಿಂದ ಆನೆಗಳನ್ನು ನೋಡಲು ಕೆರೆಏರಿ ಮೇಲೆ ಜನ ಜಂಗುಳಿಯೇ ನೆರೆದಿತ್ತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕೆರೆಯಲ್ಲಿ ಈಜುತಿದ್ದ ಆನೆಗಳನ್ನು ಕಂಡು ಪಟಾಕಿ ಸಿಡಿಸಿ ಮೇಲಕ್ಕೆ ಹತ್ತಿಸಿದ್ದಾರೆ.

ಈ ಸಂದರ್ಭ ಆನೆಗಳು ಪುನಃ ಕೆರಲೂರು-ಹಳೇ ಉತ್ಪಾತನಹಳ್ಳಿ-ತಗರೆ ಮೂಲಕವೇ ಬೊಮ್ಮಡಿಹಳ್ಳಿ ಅರಣ್ಯ ಪ್ರದೇಶಕ್ಕೆ ಹೋಗಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಯಿತು.

ಅಲ್ಲದೆ ಆನೆಗಳು ಬಂದದಾರಿಯುದ್ದಕ್ಕೂ ಜಮೀನುಗಳಲ್ಲಿ ಸಿಕ್ಕ ಬೆಳೆಗಳನ್ನು ತಿಂದು ತುಳಿದುಕೊಂಡೇ ಹೋಗಿದ್ದರಿಂದ ಇಲ್ಲಿಯೂ ಬೆಳೆ ನಷಕ್ಕೆ ಕಾರಣವಾಗಿದೆ. ಜತೆಗೆಒಂದು ಸಾರಿಆಹಾರ ನೀರು ಅರಸಿ ಬಂದ ಆನೆಗಳು ಮತ್ತೆಬರುವ ಸಾಧ್ಯತೆ ಹೆಚ್ಚಾಗಿದ್ದು, ಕಾಡಾನೆಗಳು ಇದೇ ದಾರಿಯಲ್ಲಿ ಆಹಾರ ಅರಸಿ ಹಿಂಡಿನೊಂದಿಗೆ ಪಟ್ಟಣಕ್ಕೆ ಬಂದರೆ ದೇವರೇ ಕಾಪಾಡಬೇಕು ಎನ್ನುತ್ತಾರೆ ಈ ಭಾಗದ ಗ್ರಾಮಸ್ಥರು.

RELATED ARTICLES

Latest News