Sunday, May 4, 2025
Homeಅಂತಾರಾಷ್ಟ್ರೀಯ | Internationalಯುದ್ಧ ನಡೆದರೆ ಇಂಗ್ಲೆಂಡ್‌ಗೆ ಓಡಿಹೋಗುವೆ : ಪಾಕಿಸ್ತಾನಿ ರಾಜಕಾರಣಿ ಶೇರ್ ಮಾರ್ವತ್

ಯುದ್ಧ ನಡೆದರೆ ಇಂಗ್ಲೆಂಡ್‌ಗೆ ಓಡಿಹೋಗುವೆ : ಪಾಕಿಸ್ತಾನಿ ರಾಜಕಾರಣಿ ಶೇರ್ ಮಾರ್ವತ್

Will go to England if war breaks out with India: Pakistani MP in viral video

ಇಸ್ಲಾಮಾಬಾದ್, ಮೇ4– ಪಹಲ್ಟಾಮ್ ದಾಳಿಗೆ ಭಾರತದ ಪ್ರತೀಕಾರ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಸಾಧ್ಯತೆಯ ಬಗ್ಗೆ ಊಹಾಪೋಹಗಳು ಎದ್ದಿರುವ ಬೆನ್ನಲ್ಲೇ ಪಾಕಿಸ್ತಾನಿ ರಾಜಕಾರಣಿ ಶೇರ್ ಅಪ್ಪಲ್ ಖಾನ್ ಮಾರ್ವತ್ ಅವರು, ಯುದ್ಧ ಉಲ್ಬಣಗೊಂಡರೆ ಇಂಗ್ಲೆಂಡ್ ಹೋಗುವೆ ಎಂದಿರುವ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ಲಾಗಿದೆ.

ಮಾರ್ವತ್ ಅವರ ಈ ಹೇಳಿಕೆಗೆ ನೆಟ್ಟಿಗರು ಪ್ರತಿಕ್ರಿಯಿಸಿ, ಪಾಕಿಸ್ತಾನಿ ರಾಜಕಾರಣಿಗಳೂ ಸಹ ಅವರ ಸೈನ್ಯವನ್ನು ನಂಬುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ವರದಿಗಾರರೊಬ್ಬರು ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ನೀವು ಹೋರಾಡುತ್ತೀರಾ ಎಂದು ಮಾರ್ವತ್ ಅವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಯುದ್ಧ ಉಲ್ಬಣಗೊಂಡರೆ, ನಾನು ಇಂಗ್ಲೆಂಡ್‌ಗೆ ಹೋಗುತ್ತೇನೆ ಎಂದಿದ್ದಾರೆ. ಈ ಉತ್ತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ಲಾಗಿದ್ದು, ಪಾಕಿಸ್ತಾನಿ ರಾಜಕಾರಣಿಗಳೂ ಸಹ ಅವರ ಸೈನ್ಯವನ್ನು ನಂಬುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಉದ್ವಿಗ್ನತೆಯನ್ನು ಶಮನಗೊಳಿಸಲು ಎಲ್ಲಿ ಸಂಯಮ ವಹಿಸಬೇಕು ಎಂದು ವರದಿಗಾರರ ಮತ್ತೊಂದು ಪ್ರಶ್ನೆಗೆ, ಮೋದಿ ಮೇರಾ ಖಾಲಾ ಕಾ ಬೇಟಾ ಹೈ ಜೋ ಮೇರೆ ಕೆಪ್ಪೆ ಸೆ ಪೀಚೆ ಜಾಯೇಗಾ? (ನಾನು ಹಾಗೆ ಹೇಳಿದರೆ ಮಾತ್ರ ಅವರು ಹಿಂದೆ ಸರಿಯುವ ಮೋದಿ ನನ್ನ ಚಿಕ್ಕಮ್ಮನ ಮಗನಾ?) ಎಂದು ಮಾರ್ವತ್ ಪ್ರಶ್ನಿಸಿದ್ದಾರೆ.

ಮಾರ್ವತ್ ಹಿರಿಯ ಪಾಕಿಸ್ತಾನಿ ರಾಜಕಾರಣಿಯಾಗಿದ್ದು, ಅವರು ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಪ್ರೀಕ್-ಇ-ಇನ್ಸಾಫ್ (ಪಿಟಿಐ) ನೊಂದಿಗೆ ಸಂಬಂಧ ಹೊಂದಿದ್ದರು. ಆದಾಗ್ಯೂ, ಅವರು ಪಕ್ಷ ಮತ್ತು ಅದರ ನಾಯಕರನ್ನು ಹಲವಾರು ಸಂದರ್ಭಗಳಲ್ಲಿ ಟೀಕಿಸಿದ್ದರು. ಇದು ಇಮ್ರಾನ್ ಖಾನ್ ಅವರನ್ನು ಪಕ್ಷದ ಪ್ರಮುಖ ಸ್ಥಾನಗಳಿಂದ ತೆಗೆದುಹಾಕುವಂತೆ ಮಾಡಿತ್ತು.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಯಾಮ್ ನಲ್ಲಿ ನಡೆದ ಬರ್ಬರ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.

ಏತನ್ಮಧ್ಯೆ ಪಾಕಿಸ್ತಾನಿ ಸೇನೆಯು ಜಮ್ಮು ಮತ್ತು ಕಾಶ್ಮೀರದ ಕುಪ್ಪಾರಾ, ಬಾರಾಮುಲ್ಲಾ, ಪೂಂಚ್, ರಾಜೇರಿ, ಮಂಧರ್, ನೌಶೇರಾ, ಸುಂದರ್‌ಬಾನಿ ಮತ್ತು ಅನ್ನೂರ್ ಎದುರು ಪ್ರದೇಶಗಳಲ್ಲಿ ನಿಯಂತ್ರಣ ರೇಖೆಯ (ಎಲ್‌ಸಿ) ಉದ್ದಕ್ಕೂ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿ ನಡೆಸಿದ್ದು, ಸತತ ಹತ್ತನೇ ರಾತ್ರಿಯೂ ಕದನ ವಿರಾಮವನ್ನು ಉಲ್ಲಂಘಿಸಿದೆ.

ಭಾರತೀಯ ಸೇನೆಯು ತಕ್ಷಣ ಪ್ರತಿಕ್ರಿಯಿಸಿತು. ಪಾಕಿಸ್ತಾನದಿಂದ ಆಮದು, ಒಳಬರುವ ಮೇಲ್ ಮತ್ತು ಪಾರ್ಸೆಲ್‌ ಗಳ ಮೇಲೆ ನಿಷೇಧ ಹೇರುವ ಮೂಲಕ ಮತ್ತು ಎಲ್ಲಾ ಭಾರತೀಯ ಬಂದರುಗಳಲ್ಲಿ ದೇಶದಿಂದ ಹಡಗುಗಳ ಡಾಕಿಂಗ್ ಅನ್ನು ನಿರ್ಬಂಧಿಸುವ ಮೂಲಕ ಭಾರತವು ಪಾಕಿಸ್ತಾನದ ವಿರುದ್ಧ ತನ್ನ ರಾಜತಾಂತ್ರಿಕ ದಾಳಿಯನ್ನು ಹೆಚ್ಚಿಸಿದೆ. ಪಹಲ್ಟಾಮ್‌ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರ ತೆಗೆದುಕೊಂಡ ಬಲವಾದ ಕ್ರಮಗಳ ಸರಣಿಯಲ್ಲಿ ಈ ಮೂರು ಕ್ರಮಗಳು ಇತ್ತೀಚಿನವು.

RELATED ARTICLES

Latest News