ಬೆಂಗಳೂರು, ಡಿ.4- ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಫಾಫ್ ಡುಪ್ಲೆಸಿಸ್ ಅವರಿಂದ ತೆರವಾಗಿರುವ ಆರ್ ಸಿಬಿ ಕ್ಯಾಪ್ಟನ್ಸಿ ಸ್ಥಾನವನ್ನು ತಂಡದ ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರ ರಜತ್ ಪಾಟಿದಾರ್ ಅವರು ತುಂಬಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಸೌದಿ ಅರೇಬಿಯಾದ ಜೈದಾದಲ್ಲಿ ನಡೆದ ಮೆಗಾ ಹರಾಜಿಗೂ ಮುನ್ನವೇ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿಗೆ ತಂಡದ ಸಾರಥ್ಯ ವಹಿಸುವ ಆಲೋಚನೆಯಲ್ಲಿದ್ದ ಫ್ರಾಂಚೈಸಿ ಹರಾಜಿನಲ್ಲಿ ನಾಯಕತ್ವದ ಗುಣವುಳ್ಳ ಕನ್ನಡಿಗ ಕೆ.ಎಲ್.ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಅವರ ಖರೀದಿಗೆ ಮನಸ್ಸು ಮಾಡಿಲ್ಲ.
ಆದರೆ ವಿರಾಟ್ ಕೊಹ್ಲಿಗೆ ನಾಯಕತ್ವ ವಹಿಸಿದರೆ ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಬಹುದು ಎಂಬ ದೃಷ್ಟಿ ಯಿಂದ ಹೊಸ ನಾಯಕನ ತಲಾಷೆಯಲ್ಲಿ ಫ್ರಾಂಚೈಸಿ ಇದೆ ಎಂಬ ಸುದ್ದಿಗಳು ಹರಿದಾಡು ತ್ತಿದೆ.
ರಜತ್ ಮಿಂಚು:
ಪ್ರಸಕ್ತ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯಪ್ರದೇಶ ವನ್ನು ಯಶಸ್ವಿಯಾಗಿ ಮುನ್ನಡೆ ಸುತ್ತಿರುವ ರಜತ್ ಪಾಟಿದರ್ ಇದುವರೆಗೂ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಅಲ್ಲದೆ ರನ್ ಹೊಳೆ ಹರಿಸುತ್ತಿದ್ದು 3 ಅರ್ಧಶತಕ ಸೇರಿದಂತೆ 248 ರನ್ ಸಿಡಿಸಿದ್ದಾರೆ.
ಆರ್ ಸಿಬಿ ಫ್ರಾಂಚೈಸಿ ವಿರಾಟ್ ಕೊಹ್ಲಿ ನಂತರ ಎರಡನೇ ಆಟಗಾರನಾಗಿ ರಜತ್ ಪಾಟಿದಾರ್ ರನ್ನು ರಿಟೇನ್ ಮಾಡಿಕೊಂಡಿದ್ದು ತಂಡದ ಭವಿಷ್ಯದ ದೃಷ್ಟಿಯಿಂದ ರಜತ್ ಪಾಟಿದಾರ್ ಗೆ ಕ್ಯಾಪ್ಟನ್ಸಿ ನೀಡುವುದು ಸೂಕ್ತ ಎಂಬ ಕೂಗು ಕೇಳಿಬಂದಿದೆ.
ಆದರೆ ವಿರಾಟ್ ಕೊಹ್ಲಿ ಆರ್ ಸಿಬಿ ತಂಡವನ್ನು 144 ಪಂದ್ಯಗಳಲ್ಲಿ ಮುನ್ನಡೆಸಿದ್ದು 68ರಲ್ಲಿ ಗೆಲುವು ಹಾಗೂ 72 ಪಂದ್ಯಗಳಲ್ಲಿ ಗೆಲುವು ಸಾಧಿಸಿ ದ್ದಲ್ಲದೆ 2016ರಲ್ಲಿ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸಿದ್ದರು. ಆರ್ ಸಿಬಿ ತಂಡದ ನೂತನ ಸಾರಥಿ ಯಾರಾಗುತ್ತಾರೆ ಎಂಬ ಅಭಿಮಾನಿಗಳ ಕುತೂಹಲವನ್ನು ಫ್ರಾಂಚೈಸಿ ಸದ್ಯದಲ್ಲೇ ತಣಿಸಲಿ ದ್ದಾರೆ.