ನೋಯ್ಡಾ, ಏ. 26: ನಾನು ಪಾಕಿಸ್ತಾನದ ಮಗಳು, ಆದರೆ ಈಗ ನಾನು ಭಾರತದ ಸೊಸೆ ಹೀಗಾಗಿ ನಾನು ಇಲ್ಲಿ ಉಳಿದುಕೊಳ್ಳಲು ಎಲ್ಲ ರೀತಿಯ ಆರ್ಹತೆ ಪಡೆದುಕೊಂಡಿದ್ದೇನೆ ಎಂದು ಸೀಮಾ ಹೈದರ್ ಹೇಳಿಕೊಂಡಿದ್ದಾರೆ.
ಭಾರತದ ಪ್ರೇಮಿ ಸಚಿನ್ ಮೀನಾ ಅವರನ್ನು ವರಿಸಲು ಪಾಕ್ ತೊರೆದು ಭಾರತಕ್ಕೆ ಬಂದು ಇದೀಗ ಸಚಿನ್ ಅವರನ್ನು ವಿವಾಹವಾಗಿರುವ ಸೀಮಾ ಹೈದರ್ ಈ ಹೇಳಿಕೆ ನೀಡಿದ್ದಾರೆ. ಪಹಲ್ಲಾಮ್ ಭಯೋತ್ಪಾದಕ ದಾಳಿಯ ನಂತರ ಪ್ರತೀಕಾರದ ಕ್ರಮಗಳ ಭಾಗವಾಗಿ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸರ್ಕಾರ ಸ್ಥಗಿತಗೊಳಿಸಿದ ನಂತರ ಗಡೀಪಾರು ಮಾಡುವ ಭಯದಲ್ಲಿದ್ದಾರೆ ಎಂದು ಸೀಮಾ ಹೈದರ್ ಹೇಳುತ್ತಾರೆ.
ನಾಲ್ಕು ಮಕ್ಕಳ ತಾಯಿಯಾಗಿದ್ದ ಸೀಮಾ ಹೈದರ್ 2023 ರಲ್ಲಿ ತನ್ನ ಭಾರತೀಯ ಪ್ರೇಮಿ ಸಚಿನ್ ಮೀನಾ ಅವರನ್ನು ಮದುವೆಯಾಗಲು ಪಾಕಿಸ್ತಾನವನ್ನು ತೊರೆದಾಗ ಸುದ್ದಿಯಾಗಿದ್ದರು. ಆಕೆ ಈಗಾಗಲೇ ಸಿಂಥ್ ಪ್ರಾಂತ್ಯದಲ್ಲಿ ಮದುವೆಯಾಗಿದ್ದರು ಆದರೆ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಳು.
ಸೋಷಿಯಲ್ ಮೀಡಿಯಾದಲ್ಲಿ ಸೀಮಾ, ನಾನು ಪಾಕಿಸ್ತಾನಕ್ಕೆ ಹೋಗಲು ಬಯಸುವುದಿಲ್ಲ. ನನಗೆ ಭಾರತದಲ್ಲಿಯೇ ಇರಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡುತ್ತೇನೆ.ಮೀನಾ ಅವರನ್ನು ಮದುವೆಯಾದ ನಂತರ ಅವರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದೇನೆ ಎಂದು ಹೈದರ್ ಹೇಳಿಕೊಂಡಿದ್ದಾರೆ.
ದೇಶಾದ್ಯಂತ ಹಿನ್ನಡೆಯ ಹೊರತಾಗಿಯೂ, ಅವರು ಇನ್ನು ಮುಂದೆ ಪಾಕಿಸ್ತಾನಿ ಪ್ರಜೆಯಲ್ಲದ ಕಾರಣ, ಅವರಿಗೆ ಭಾರತದಲ್ಲಿ ವಾಸಿಸಲು ಅವಕಾಶ ನೀಡಲಾಗುವುದು ಎಂದು ಅವರ ವಕೀಲರು ಭರವಸೆ ವ್ಯಕ್ತಪಡಿಸಿದ್ದಾರೆ. ಸೀಮಾ ಇನ್ನು ಮುಂದೆ ಪಾಕಿಸ್ತಾನಿ ಪ್ರಜೆಯಲ್ಲ. ಅವರು ಗ್ರೇಟರ್ ನೋಯ್ಡಾ ನಿವಾಸಿ ಸಚಿನ್ ಮೀನಾ ಅವರನ್ನು ವಿವಾಹವಾಗಿರುವುದರಿಂದ ಅವರು ಗಡಿಪಾರಿನಿಂದ ಬಚಾವಾಗುವ ಸಾಧ್ಯತೆಗಳಿವೆ.