Monday, September 8, 2025
Homeರಾಷ್ಟ್ರೀಯ | Nationalನಮ್ಮ ಮಾವ ನಾನು ಸ್ನಾನ ಮಾಡುವುದನ್ನು ಚಿತ್ರಿಕರಿಸಿದ್ದಾರೆ : ಬಿಜೆಪಿ ಸಂಸದನ ಸಹೋದರಿ ಆರೋಪ

ನಮ್ಮ ಮಾವ ನಾನು ಸ್ನಾನ ಮಾಡುವುದನ್ನು ಚಿತ್ರಿಕರಿಸಿದ್ದಾರೆ : ಬಿಜೆಪಿ ಸಂಸದನ ಸಹೋದರಿ ಆರೋಪ

'Will shoot you': UP BJP MP's sister alleges in-laws tried filming her bathing; attacked with knife

ಇಟಾನಗರ, ಸೆ. 8 (ಪಿಟಿಐ) ಫರೂಕಾಬಾದ್‌ನ ಬಿಜೆಪಿ ಸಂಸದ ಮುಖೇಶ್‌ ರಜಪೂತ್‌ ಅವರ ಸಹೋದರಿ ತಮ್ಮ ಮಾವ ಮತ್ತು ಇತರರು ನನ್ನೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ಮೂವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ದೂರಿನ ಪ್ರಕಾರ, ರೀನಾ ಸಿಂಗ್‌ ತನ್ನ ಮಾವ ಲಕ್ಷ್ಮಣ್‌ ಸಿಂಗ್‌ ಮತ್ತು ಸೋದರ ಮಾವ ರಾಜೇಶ್‌ ಮತ್ತು ಗಿರೀಶ್‌ ತನ್ನ ಮೇಲೆ ಹಲ್ಲೆ ನಡೆಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಗಿರೀಶ್‌ ಮತ್ತು ಲಕ್ಷ್ಮಣ್‌ ಸಿಂಗ್‌ ನಾನು ಸ್ನಾನ ಮಾಡುತ್ತಿದ್ದಾಗ ಸ್ನಾನಗೃಹದ ಕಿಟಕಿಯ ಮೂಲಕ ತನ್ನ ವಿಡಿಯೋ ರೆಕಾರ್ಡ್‌ ಮಾಡಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಇದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದಾಗ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ತನ್ನ ಮಾವ ಪರವಾನಗಿ ಪಡೆದ ರೈಫಲ್‌ ತೆಗೆದು ನಾನು ನಿನಗೆ ಗುಂಡು ಹಾರಿಸುತ್ತೇನೆ ಎಂದು ಬೆದರಿಸಿದ್ದಾರೆ ಎಂದು ಸಿಂಗ್‌ ಹೇಳಿದ್ದಾರೆ. ಅವರು ಕೋಲಿನಿಂದ ಕೂಡ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.ದೂರುದಾರರ ಪ್ರಕಾರ, ರಾಜೇಶ್‌ ತನ್ನ ಮೇಲೆ ಹರಿತವಾದ ಚಾಕುವಿನಿಂದ ಹಲ್ಲೆ ಮಾಡಿ, ಕೈಗೆ ಗಾಯ ಮಾಡಿದ್ದರೆ, ಗಿರೀಶ್‌ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ.ಹಲ್ಲೆಯ ನಂತರವೂ ತನಗೆ ಬೆದರಿಕೆ ಕರೆಗಳು ಬರುತ್ತಲೇ ಇವೆ ಎಂದು ಸಿಂಗ್‌ ಪೊಲೀಸರಿಗೆ ನೀಡಿದ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ ಲಕ್ಷ್ಮಣ್‌ ಸಿಂಗ್‌‍, ರಾಜೇಶ್‌ ಮತ್ತು ಗಿರೀಶ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಸಹವರ್‌ನ ಸ್ಟೇಷನ್‌ ಹೌಸ್‌‍ ಆಫೀಸರ್‌ ಚಮನ್‌ ಗೋಸ್ವಾಮಿ ತಿಳಿಸಿದ್ದಾರೆ.ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ ಮತ್ತು ಕಾನೂನಿನ ಪ್ರಕಾರ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

RELATED ARTICLES

Latest News