ಮೆಲ್ಬೋರ್ನ್, ಡಿ.26- ಕಿರಿಕ್ ವಿರಾಟ್ ಕೊಹ್ಲಿಗೆ ಐಸಿಸಿ ದಂಡ ವಿಧಿಸುವ ಸಾಧ್ಯತೆಗಳಿವೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೆ ಟೆಸ್ಟ್‌ನಲ್ಲಿ ಕಾಂಗರೂ ಬ್ಯಾಟರ್ ಸ್ಯಾನ್ ಕೊನ್‌ಸ್ಟಾಸ್ ಅವರೊಂದಿಗೆ ಕಿರಿಕ್ ಮಾಡಿಕೊಂಡಿರುವ ಘಟನೆಯನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿರುವುದರಿಂದ ದಂಡ ವಿಧಿಸುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಈ ಪಂದ್ಯದ 10ನೇ ಓರ್ವ ಮುಕ್ತಾಯದ ವೇಳೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಬ್ಯಾಟರ್ ಸ್ಯಾಮ್ ಕೊನ್‌ಸ್ಟಾಸ್ ಅವರನ್ನು ಭುಜಕ್ಕೆ ಭುಜ ನೀಡಿ ಕೆಣಕಿದ್ದರು. ಮೇಲ್ನೋಟಕ್ಕೆ ಕೊಹ್ಲಿ ಉದ್ದೇಶ ಪೂರ್ವಕವಾಗಿಯೇ ಆಸೀಸ್ ಆಟಗಾರನೊಂದಿಗೆ ಜಗಳಕ್ಕಿಳಿದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.
ಈ ಜಗಳ ತಾರಕ್ಕೇರುತ್ತಿದ್ದಂತೆ ಅಂಪೈರ್ ಮತ್ತು ಸಹ ಆಟಗಾರರು ಮಧ್ಯ ಪ್ರವೇಶಿಸಿದ್ದರು. ಇದೀಗ ಈ ಭುಜಬಲದ ವಿಡಿಯೋ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಈ ಘಟನೆಯನ್ನು ಪರಿಶೀಲಿಸಲು ಐಸಿಸಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿದೆ.
ಹೀಗಾಗಿ ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಬಳಿಕ ಅಥವಾ ಈ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕೊನ್‌ಸ್ಟಾಸ್ ಅವರನ್ನು ವ್ಯಾಚ್ ರೆಫರಿ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ಅಲ್ಲದೆ ಇಲ್ಲಿ ಕೊಹ್ಲಿ ತಪ್ಪು ಮಾಡಿರುವುದು ಸಾಬೀತಾದರೆ ಡಿಮೆರಿಟ್ ಪಾಯಿಂಟ್‌ನೊಂದಿಗೆ ದಂಡ ವಿಧಿಸುವ ಸಾಧ್ಯತೆ ಹೆಚ್ಚಿದೆ.
ಏಕೆಂದರೆ ಇದಕ್ಕೂ ಮುನ್ನ ಅಡಿಲೇಡ್ ಟೆಸ್ಟ್‌ನಲ್ಲಿ ಟ್ರಾವಿಸ್ ಹೆಡ್ ಜೊತೆ ಕಿರಿಕ್ ಮಾಡಿಕೊಂಡಿದ್ದ ಮೊಹಮದ್ ಸಿರಾಜ್‌ಗೆ ಐಸಿಸಿ ಡಿಮೆರಿಟ್ ಪಾಯಿಂಟ್ ನೀಡಿ, ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ವಿಧಿಸಿದ್ದರು. ಇದೀಗ ಮೆಲ್ಬೋರ್ನ್‌ನಲ್ಲಿ ವಿರಾಟ್ ಕೊಹ್ಲಿ ಮಾತಿನ ಚಕಮಕಿ ನಡೆಸಿರುವ ಕಾರಣ ಇದೇ ಪ್ರಮಾಣದ ದಂಡ ವಿಧಿಸುವ ಸಾಧ್ಯತೆಯಿದೆ.
ಇದಕ್ಕೂ ಮುನ್ನ ಅಡಿಲೇಡ್ ಟೆಸ್ಟ್‌ನಲ್ಲಿ ಟ್ರಾವಿಸ್ ಹೆಡ್ ಜೊತೆ ಕಿರಿಕ್ ಮಾಡಿಕೊಂಡಿದ್ದ ಮೊಹಮದ್ ಸಿರಾಜ್‌ಗೆ ಐಸಿಸಿ ಡಿಮೆರಿಟ್ ಪಾಯಿಂಟ್ ನೀಡಿ, ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ವಿಧಿಸಿತ್ತು. ಇದೀಗ ಮೆಲ್ಬೋರ್ನ್‌ನಲ್ಲಿ ವಿರಾಟ್ ಕೊಹ್ಲಿ ಮಾತಿನ ಚಕಮಕಿ ನಡೆಸಿರುವ ಕಾರಣ ಇದೇ ಪ್ರಮಾಣದ ದಂಡ ವಿಧಿಸುವ ಸಾಧ್ಯತೆಯಿದೆ.