Wednesday, January 15, 2025
Homeರಾಜ್ಯಸ್ವಂತ ಮಗಳ ಮೇಲೆ ಕಣ್ಣು ಹಾಕಿದ ಪತಿಯ ಮರ್ಮಾಂಗವನ್ನು ಜಜ್ಜಿ ಕೊಂದ ಪತ್ನಿಯರು

ಸ್ವಂತ ಮಗಳ ಮೇಲೆ ಕಣ್ಣು ಹಾಕಿದ ಪತಿಯ ಮರ್ಮಾಂಗವನ್ನು ಜಜ್ಜಿ ಕೊಂದ ಪತ್ನಿಯರು

Wives killed husband by crushing his private part

ಸೂರ್ಯ ಪೇಟೆ – (ತೆಲಂಗಾಣ),ಜ.14– ತನ್ನ ಮಗಳ ಮೇಲೆಯೇ ಕಣ್ಣು ಹಾಕಿದ ವ್ಯಕ್ತಿಯನ್ನು ಆತನ ಇಬ್ಬರು ಪತ್ನಿಯರೇ ಸೇರಿ ಕೊಲೆಗೈದ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡೆದಿದೆ.

ಜಿಲ್ಲೆಯ ಚಿವ್ವೆನ್ಲಾ ತಾಲ್ಲೂಕಿನ ಹಳ್ಳಿಯಲ್ಲಿ ಸೋಮವಾರ ನಸುಕಿನ ಜಾವ ಈ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು 43 ವರ್ಷ, ವೃತ್ತಿಯಲ್ಲಿ ಚಾಲಕ ಎಂದು ಗುರುತಿಸಲಾಗಿದೆ. ಹಲವು ವರ್ಷಗಳ ಹಿಂದೆ ನಲ್ಗೊಂಡ ಜಿಲ್ಲೆಯ ಯುವತಿಯನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಗಂಡು ಮಗುವಿನ ಮೋಹದಲ್ಲಿ ತನ್ನ ಪತ್ನಿಯ ತಂಗಿಯನ್ನೂ ಮದುವೆಯಾಗಿದ್ದಾನೆ. ಆಕೆಗೆ ಗಂಡು ಮಗು ಜನಿಸಿದ್ದು, ಎಲ್ಲರೂ ಒಂದೇ ಕುಟುಂಬದಲ್ಲಿ ಒಟ್ಟಿಗೆ ನೆಲೆಸಿದ್ದರು.

ಕೆಲವು ತಿಂಗಳ ಹಿಂದೆ ತನ್ನ ಮೊದಲ ಪತ್ನಿಯ ಕಿರಿ ಮಗಳು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಹಿರಿ ಮಗಳು ಹೈದರಾಬಾದ್ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ಕಿರಿ ಮಗಳ ಸಾವಿನ ನಂತರ ಆರೋಪಿ ಮದ್ಯದ ಚಟಕ್ಕೆ ದಾಸನಾಗಿದ್ದ. ಅಂದಿನಿಂದ ಆತನ ನಡವಳಿಕೆ ಬದಲಾಗುತ್ತಾ ಸಾಗಿದೆ. ಇಬ್ಬರು ಪತ್ನಿಯರಿಗೆ ಮಾನಸಿಕ, ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದ. ಇದರಿಂದ ಪತ್ನಿಯರು ಸಾಕಷ್ಟು ಮನನೊಂದಿದ್ದರು. ಹಿರಿ ಮಗಳ ಜೊತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. ದಿನ ಕಳೆದಂತೆ ಆಕೆಗೆ ಲೈಂಗಿಕ ಕಿರುಕುಳ ನೀಡಲೂ ಶುರು ಮಾಡಿದ್ದಾನೆ.

ಹೈದರಾಬಾದ್ನಲ್ಲಿ ನೆಲೆಸಿದ್ದ ಮಗಳು ಸಂಕ್ರಾಂತಿ ಹಬ್ಬಕ್ಕೆ ಸಿಕ್ಕ ರಜೆಗಾಗಿ ಊರಿಗೆ ಬಂದಿದ್ದಳು. ಹೀಗೆ ಬಂದ ಮಗಳೊಂದಿಗೆ ತಂದೆ ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ. ಇದು ತಪ್ಪು, ನಿಮ ನಡವಳಿಕೆ ಬದಲಾಯಿಸಿಕೊಳ್ಳಿ ಎಂದು ಪತ್ನಿಯರು ಅಂಗಲಾಚಿ ಬೇಡಿಕೊಂಡರೂ ಆರೋಪಿ ನಿರ್ಲಕ್ಷಿಸಿದ್ದಾನೆ. ಇದರಿಂದ ಬೇಸರಗೊಂಡು ಒಂದು ದಿನ ತಾಯಿ ಮತ್ತು ಮಗಳು ಆತಹತ್ಯೆ ಮಾಡಿಕೊಳ್ಳಲು ಆಲೋಚಿಸಿದ್ದರು.

ಆದರೆ ಅದೇ ರಾತ್ರಿ ಪತಿ ತನ್ನ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದ. ಇದರಿಂದ ಕೋಪಗೊಂಡ ಇಬ್ಬರು ಪತ್ನಿಯರು ಪತಿಯ ಮರ್ಮಾಂಗಕ್ಕೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಪೊಲೀಸರು ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ತನಿಖೆ ಕೈಗೊಂಡಿದ್ದಾರೆ. ಮೃತನ ಸಹೋದರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ ಎಂದು ಸಬ್ ಇನ್‌್ಸಪೆಕ್ಟರ್ ವಿ. ಮಹೇಶ್ ತಿಳಿಸಿದ್ದಾರೆ.

RELATED ARTICLES

Latest News