Monday, August 25, 2025
Homeಜಿಲ್ಲಾ ಸುದ್ದಿಗಳು | District Newsಹೆತ್ತ ಮಗುವನ್ನು ಕೊಂದು ಶೌಚಾಲಯದಲ್ಲಿ ಹಾಕಿ ಪರಾರಿಯಾಗಿದ್ದ ಮಹಿಳೆಯ ಬಂಧನ

ಹೆತ್ತ ಮಗುವನ್ನು ಕೊಂದು ಶೌಚಾಲಯದಲ್ಲಿ ಹಾಕಿ ಪರಾರಿಯಾಗಿದ್ದ ಮಹಿಳೆಯ ಬಂಧನ

Woman arrested for killing her newborn baby and throwing it in the toilet

ಶಿವಮೊಗ್ಗ,ಆ.25-ಹೆತ್ತ ಮಗುವನ್ನು ಕೊಂದು ಶೌಚಾಲಯದಲ್ಲಿ ಹಾಕಿ ಪರಾರಿಯಾಗಿದ್ದ ಮಹಿಳೆಯನ್ನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದ ಶೈಲಾ ಬಂಧಿತ ಆರೋಪಿಯಾಗಿದ್ದಾರೆ.

ಕಳೆದ ಆ.16ರಂದು ಮೆಗ್ಗಾನ್‌ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಶೌಚಾಲಯದಲ್ಲಿ ಒಂದು ದಿನದ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಮಾಹಿತಿ ಸಂಗ್ರಹಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಹೊನ್ನಾಳಿ ಮೂಲದ ಶೈಲಾಗೆ 2 ಮಕ್ಕಳಿದ್ದು, ನಾಲ್ಕು ವರ್ಷಗಳ ಹಿಂದೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.

ಆದರೂ ಶೈಲಾ ಗರ್ಭಿಣಿಯಾಗಿದ್ದರು ಈ ನಡುವೆ ಮನೆಯವರಿಗೆ ಥೈರಾಯ್‌್ಡ ನೆಪ ಹೇಳಿ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯ ಶೌಚಾಲಯದಲ್ಲಿ ಒಬ್ಬಳೇ ನಾರ್ಮಲ್‌ ಹೆರಿಗೆ ಮಾಡಿಕೊಂಡಿದ್ದ ಶೈಲಾ ನಂತರ ಶಸ್ತ್ರಚಿಕಿತ್ಸೆಗೆ ಬಳಸುವ ಬ್ಲೇಡ್‌ನಿಂದ ನಿರ್ದಹಿಯಾಗಿ ಮಗುವಿನ ಕತ್ತು ಕೊಯ್ದು ಕೊಲೆ ಮಾಡಿ ಮೋರಿಗೆ ಎಸೆದಿದ್ದರು. ಇದೀಗ ತನಿಖೆ ವೇಳೆ ಘಟನೆ ಬೆಳಕಿಗೆ ಬಂದಿದೆ.ಆರೋಪಿಯನ್ನು ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News