Wednesday, September 11, 2024
Homeರಾಷ್ಟ್ರೀಯ | Nationalತನ್ನ ಮಗುವನ್ನು ಕೊಂದು ಪ್ರಿಯಕರನೊಂದಿಗೆ ಓಡಿಹೋಗಿದ್ದ ಮಹಿಳೆ ಬಂಧನ

ತನ್ನ ಮಗುವನ್ನು ಕೊಂದು ಪ್ರಿಯಕರನೊಂದಿಗೆ ಓಡಿಹೋಗಿದ್ದ ಮಹಿಳೆ ಬಂಧನ

Woman arrested in Bihar for killing 3-year-old daughter to marry lover

ಪಾಟ್ನಾ,ಆ.28- ಪ್ರಿಯಕರನೊಂದಿಗೆ ಓಡಿಹೋಗಲು ತನ್ನ ಮಗುವಿನ ಕತ್ತು ಸೀಳಿ ಕೊಂದು ಸೂಟ್ಕೇಸ್ನಲ್ಲಿಟ್ಟು ಬಿಸಾಡಿ ಪ್ರಿಯಕರನೊಂದಿಗೆ ಓಡಿಹೋಗಿದ್ದ ಆರೋಪಿಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.ಆರೋಪಿ ಕಾಜಲ್ ಬಂಧಿತ ಆರೋಪಿ. ವಿವಾಹೇತರ ಸಂಬಂಧ ಹೊಂದಿದ್ದ ಪ್ರಿಯಕರನೊಂದಿಗೆ ಓಡಿಹೋಗಲು ತಂತ್ರ ರೂಪಿಸಿದ್ದ ಈಕೆ ತನ್ನ ಮಗಳ ಕತ್ತನ್ನು ಸೀಳಿ ಕೊಲೆ ಮಾಡಿ ಸೂಟ್ಕೇಸ್ನಲ್ಲಿಟ್ಟು ಪೊದೆಯೊಳಗೆ ಬಿಸಾಡಿ ಹೋಗಿದ್ದಳು.

ಮುಜಾಫರ್ಪುರದ ಶಾಸ್ತ್ರಿ ನಗರದಲ್ಲಿ ಮಿಶ್ತಿ(3) ಎಂಬ ಮಗುವಿನ ಮೃತದೇಹವು ಕೆಂಪು ಟ್ರಾಲಿ ಸೂಟ್ಕೇಸ್ನಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಇದಕ್ಕಾಗಿ ವಿಶೇಷ ತನಿಖಾ ತಂಡವನ್ನು ಸಹ ರಚಿಸಿದ್ದರು.

ಈ ನಡುವೆ ಕೊಲೆಯಾದ ಮಿಶ್ತಿಯ ತಂದೆ ಮನೋಜ್ ಅವರಿಂದ ಕಾಜಲ್ ವಿರುದ್ಧ ಎಫ್ಐಆರ್ ದಾಖಲಾಗಿತ್ತುಉ. ಪತಿ ಮನೋಜ್ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಕಾಜಲ್ ಫೋನ್ ಟ್ರ್ಯಾಕ್ ಮಾಡಿದ ಪೊಲೀಸರು ಮೀನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರಿಯಲ್ಲಿರುವ ತನ್ನ ಪ್ರಿಯಕರನ ಮನೆಯಲ್ಲಿದ್ದ ಆಕೆಯನ್ನು ಬಂಧಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ, ತಾನು ಇನ್ನೊಬ್ಬ ಹುಡುಗನ ಜೊತೆ ಸಂಬಂಧ ಹೊಂದಿದ್ದು, ಇದಕ್ಕಾಗಿ ಗಂಡನನ್ನು ಬಿಡಲು ಬಯಸಿದ್ದೆ. ಆದರೆ ತನಗೊಂದು ಮಗುವಿದ್ದು, ಆ ಮಗು ಆಕೆಯೊಟ್ಟಿಗೆ ಬರುವುದು ಪ್ರಿಯಕರನಿಗೆ ಇಷ್ಟವಿರಲಿಲ್ಲ. ಹಾಗಾಗಿ ಮಗಳ ಕತ್ತು ಸೀಳಿ ಸೂಟ್ಕೇಸ್ನಲ್ಲಿ ತುಂಬಿಸಿ ಪೊದೆಯೊಳಗೆ ಬಿಸಾಕಿ ಹೋಗಿದ್ದೆ ಎಂದು ಆರೋಪಿ ಬಾಯ್ಬಿಟ್ಟಿದ್ದಾಳೆ.

ಆರೋಪಿ ಕಾಜಲ್ ಆಗಾಗ್ಗೆ ಕ್ರೈಮ್ ಪೆಟ್ರೋಲ್ ಧಾರಾವಾಹಿಯನ್ನು ನೋಡುತ್ತಿದ್ದಳು ಮತ್ತು ಅದರಿಂದ ಪ್ರೇರಿತಳಾದ ಅವಳು ತನ್ನ ಮಗಳು ಮಿಶ್ತಿಯನ್ನು ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿಬಳಿಕ ಸೂಟ್ಕೇಸ್ನಲ್ಲಿ ಶವ ಇಟ್ಟುಕೊಂಡು ಟೆರೇಸ್ನಿಂದ ಎಸೆದಿದ್ದಾಳೆ.

ಮನೆ ಮತ್ತು ಚಾವಣಿಯ ಮೇಲಿನ ರಕ್ತದ ಕಲೆಗಳನ್ನು ತೊಳೆದು, ಕೃತ್ಯ ಎಸಗಿದ ದಿನ ಪತಿ ಮೋಜ್ಗೆ ಕಾಲ್ ಮಾಡಿ ಚಿಕ್ಕಮನ ಮನೆಗೆ ಹೋಗುವುದಾಗಿ ಹೇಳಿದ್ದಳಂತೆ. ಆದರೆ ಫೋರೆನ್ಸಿಕ್ ತಂಡ ಮಾತ್ರ ರಕ್ತದ ಕಲೆಗಳನ್ನು ಪತ್ತೆ ಹಚ್ಚಿ ಹತ್ಯೆಯ ಹಿಂದಿನ ಸತ್ಯವನ್ನು ಬಯಲು ಮಾಡಿದ್ದಾರೆ ಎಂದು ನಗರ ಎಸ್ಪಿ ಅವಧೇಶ್ ದೀಕ್ಷಿತ್ ತಿಳಿಸಿದ್ದಾರೆ.

RELATED ARTICLES

Latest News