ಬೆಂಗಳೂರು,ಆ.30- ಜಾತ್ರೆ, ಸಂತೆ ಹಾಗು ಬಸ್‌ಗಳಲ್ಲಿ ಸಂಚರಿಸುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಚಿನ್ನಾಭರಣಗಳನ್ನು ದೋಚುತ್ತಿದ್ದ ಶುಂಠಿ ವ್ಯಾಪಾರಿ ಮಹಿಳೆಯನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿ 40 ಲಕ್ಷ ಮೌಲ್ಯದ536 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಶಾರದಾ(28) ಬಂಧಿತ ಆರೋಪಿತೆ. ಈಕೆ ಶುಂಠಿ ವ್ಯಾಪಾರಿ.
ಈಕೆಯ ಬಂಧನದಿಂದ ಈ ಹಿಂದೆ ಚಿಕ್ಕಪೇಟೆ ಹಾಗೂ ತುಮಕೂರಿನ ಗುಬ್ಬಿ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣಗಳು ಹಾಗೂ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ ಏಳು ಕಳವು ಪ್ರಕರಣಗಳು ಪತ್ತೆಯಾಗಿವೆ. ಕೆ.ಆರ್.ಪುರದ ನಿವಾಸಿಯೊಬ್ಬರು ಬಟ್ಟೆ ಅಂಗಡಿಯಲ್ಲಿ ಬಟ್ಟೆ ಖರೀದಿಸಲು ಹೋಗಿದ್ದು, ಆ ಸಂದರ್ಭದಲ್ಲಿ ಅವರ ಪರ್ಸ್‌ನಿಂದ ಸುಮಾರು 6 ಸಾವಿರ ರೂ. ಕಳುವಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಕೇವಲ 24 ಗಂಟೆಯೊಳಗೆ ಮಹಿಳೆಯನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ಗೊಳಪಡಿಸಿದಾಗ ಪರ್ಸ್‌ನಿಂದ ಹಣ ಎಗರಿಸಿರುವುದಾಗಿ ತಿಳಿಸಿದ್ದಾಳೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು ಅರಸೀಕೆರೆಯಲ್ಲಿರುವ ಆರೋಪಿತೆಯ ಸ್ನೇಹಿತನಿಂದ 18 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿ ದ್ದಲ್ಲದೆ ಅಲ್ಲಿನ ಜ್ಯೂವೆಲರಿ ಶಾಪ್‌ನಿಂದ 29 ಗ್ರಾಂ ಚಿನ್ನಾಭರಣ, ಮತ್ತೊಂದು ಜ್ಯೂವೆಲರಿ ಶಾಪ್‌ನಿಂದ 135 ಗ್ರಾಂ ಚಿನ್ನಾಭರಣ, ಹಾಗೂ ಹರ್ಬನ್ ಕೋ ಅಪರೇಟಿವ್ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ 315 ಗ್ರಾಂ ಚಿನ್ನಾಭರಣ ಹಾಗೂ ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿಟ್ಟಿದ್ದ 39 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇವುಗಳ ಒಟ್ಟು ಮೌಲ್ಯ 40 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಆರೋಪಿತೆಯ ಬಂಧನದಿಂದ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ 7 ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಕೆ.ಆರ್.ಪುರಂ 4, ಅನ್ನಪೂರ್ಣೇಶ್ವರಿ, ಬಾಗಲುಗುಂಟೆ ಹಾಗೂ ಮಹದೇವಪುರ ಪೊಲೀಸ್ ಠಾಣೆಯ ತಲಾ 1 ಕಳವು ಪ್ರಕರಣಗಳು ಪತ್ತೆಯಾಗಿವೆ. ಕೆ.ಆರ್.ಪುರ ಠಾಣೆ ಇನ್‌್ಸಪೆಕ್ಟರ್ ರಾಮಮೂರ್ತಿ ಹಾಗೂ ಸಿಬ್ಬಂದಿ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.