ಬಂದಾ, ಆ.10-ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಕೌಟುಂಬಿಕ ಕಲಹದಿಂದ ನೊಂದು ತನ್ನ ಮೂವರು ಮಕ್ಕಳನ್ನು ದೇಹಕ್ಕೆ ಕಟ್ಟಿಕೊಂಡು ಕಾಲುವೆಗೆ ಹಾರಿ ಆತಹತ್ಯೆ ಮಾಡಿಕೊಂಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. ರಿಸೌರಾ ಗ್ರಾಮದ ಅಖಿಲೇಶ್ ಎಂಬುವವರ ಪತ್ನಿ ರೀನಾ (30) ಮತ್ತು ಅವರ ಮೂವರು ಮಕ್ಕಳಾದ ಹಿಮಾಂಶು (9), ಅನ್ಶಿ (5) ಮತ್ತು ಪ್ರಿನ್‌್ಸ(3) ಮೃತರು.
ಪತಿಯೊಂದಿಗೆ ಜಗಳವಾಡಿ ಕೊಂಡ ಮಕ್ಕಳೊಂದಿಗೆ ಮನೆ ತೊರೆದಿದ್ದ ಮಹಿಳೆ ದುಡುಕಿ ಆತಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕು ಶವಗಳನ್ನು ನೀರಿನಿಂದ ಮೇಲೆತ್ತಲಾಗಿದ್ದು ಮಹಿಳೆಯ ಪತಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವರಾಜ್ ತಿಳಿಸಿದ್ದಾರೆ.
ಮೊದಲು ಮಹಳೆ ಮಕ್ಕಳು ನಾಪತ್ತೆಯಾಗಿರುವ ವಿಷಯ ತಿಳಿದು ಪೊಲೀಸರು ಮತ್ತು ಕುಟುಂಬ ಸದಸ್ಯರು ಹುಡುಕಾಟ ಆರಂಭಿಸಿದಾಗ, ಗ್ರಾಮದಿಂದ ಸುಮಾರು ಒಂದು ಕಿಮೀ ದೂರದಲ್ಲಿರುವ ಕೆನ್ ಕಾಲುವೆಯ ದಡದಲ್ಲಿ ರೀನಾಳ ಬಳೆಗಳು ಮತ್ತು ಕೆಲವು ಮಕ್ಕಳ ಬಟ್ಟೆಗಳು ಕಂಡುಬಂದಿವೆ.
ಆಕೆ ಕಾಲುವೆಗೆ ಹಾರಿದ್ದಾಳೆ ಎಂಬ ಅನುಮಾನದಿಂದ, ಅಧಿಕಾರಿಗಳು ನೀರಿನ ಹರಿವನ್ನು ನಿಲ್ಲಿಸಿದರು ಮತ್ತು ಸ್ಥಳೀಯ ಈಜುಗಾರರನ್ನು ಮತ್ತು ಪೊಲೀಸ್ ತಂಡಗಳ ಸಹಾಯದಿಂದ ಪತ್ತೆ ಹಚ್ಚಲು ಮುಂದಾಗಿ ಎಲ್ಲರ ಶವ ರಾತ್ರಿವೇಳೆಗೆ ಪತ್ತೆಯಾಗಿದೆ.
ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದರು.ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಖಚಿತಪಡಿಸಿಕೊಳ್ಳಲು ಆಕೆಯ ಪತಿ ಅಖಿಲೇಶ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.