Thursday, October 23, 2025
Homeರಾಷ್ಟ್ರೀಯ | Nationalಬಿಹಾರ : ಹಳಿ ದಾಟುವಾಗ ರೈಲು ಹರಿದು ನಾಲ್ವರ ದುರ್ಮರಣ

ಬಿಹಾರ : ಹಳಿ ದಾಟುವಾಗ ರೈಲು ಹರಿದು ನಾಲ್ವರ ದುರ್ಮರಣ

Woman, Daughter Among 4 Run Over By Train While Crossing Track In Bihar

ಬೇಗುಸರಾಯ್‌, ಅ. 23 (ಪಿಟಿಐ) : ಹಳಿ ದಾಟುತ್ತಿದ್ದವರ ಮೇಲೆ ರೈಲು ಹರಿದ ಪರಿಣಾಂ ತಾಯಿ-ಮಗಳು ಸೇರಿದಂತೆ ನಾಲ್ವರು ಬಲಿಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಬೇಗುಸರೈ ಜಿಲ್ಲೆಯಲ್ಲಿ ಹಳಿ ದಾಟಲು ಯತ್ನಿಸುತ್ತಿದ್ದ ಮಹಿಳೆ ಮತ್ತು ಅವರ ಮಗಳು ಸೇರಿದಂತೆ ನಾಲ್ವರು ರೈಲು ಹರಿದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಹೇಬ್‌ಪುರ ಕಮಲ್‌ ಪೊಲೀಸ್‌‍ ಠಾಣೆಯ ಎಸ್‌‍ಎಚ್‌ಒ ಸಿಂಟು ಕುಮಾರ್‌ ಅವರು ತಡರಾತ್ರಿ ಬರೌನಿ-ಕತಿಹಾರ್‌ ವಿಭಾಗದಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.ರಾಹುವಾ ಗ್ರಾಮದ ನಾಲ್ವರು ನಿವಾಸಿಗಳು ಹತ್ತಿರದ ಪ್ರದೇಶದಲ್ಲಿ ನಡೆದ ಜಾತ್ರೆಯಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದಾಗ, ಅಮ್ರಪಾಲಿ ಎಕ್‌್ಸಪ್ರೆಸ್‌‍ ಹಾದುಹೋಗುವಾಗ ರೈಲ್ವೆ ಹಳಿಗಳನ್ನು ದಾಟಲು ಪ್ರಯತ್ನಿಸಿದರು ಎಂದು ಎಸ್‌‍ಎಚ್‌ಒ ಹೇಳಿದರು.

ಮೃತರನ್ನು ರೀತಾ ದೇವಿ (40), ಅವರ ಮಗಳು ರೋಶ್ನಿ ಕುಮಾರಿ (14), ಏಳು ವರ್ಷದ ಅರೋಹಿ ಕುಮಾರಿ ಮತ್ತು ಅವರ ಚಿಕ್ಕಪ್ಪ ಧರ್ಮ ದೇವ್‌ ಮಹ್ತೊ (35) ಎಂದು ಗುರುತಿಸಲಾಗಿದೆ ಎಂದು ಪೊಲೀಸ್‌‍ ಅಧಿಕಾರಿ ತಿಳಿಸಿದ್ದಾರೆ.ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ.

RELATED ARTICLES

Latest News