ನ್ಯೂಯಾರ್ಕ್, ಆ.21- ಆರು ವರ್ಷದ ಮಗನನ್ನು ಕೊಂದು ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಪಲಾಯನ ಮಾಡಿದ ಮಹಿಳೆಯನ್ನು ಅಮೆರಿಕದ ಎಫ್‌ಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಎಫ್‌ಬಿಐನ ಟಾಪ್ 10 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಸಿಂಡಿ ರೊಡ್ರಿಗಸ್ ಸಿಂಗ್(40) ಎಂಬಕೆಯನ್ನು ಬಂಧಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕ ಕಾಶ್ ಪಟೇಲ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ತನ್ನ ಮಗನನ್ನು ಕೊಂದ ಆರೋಪದ ಆಕೆಯ ಮೇಲಿದೆ.ಟೆಕ್ಸಾಸ್‌ನಲ್ಲಿರುವ ಕಾನೂನು ಜಾರಿ ಅಧಿಕಾರಿಗಳು ಯುಎಸ್ ನ್ಯಾಯ ಇಲಾಖೆ ಮತ್ತು ಭಾರತದಲ್ಲಿನ ಅಧಿಕಾರಿಗಳ ಸಮನ್ವಯತೆಯಿಂದ ಟಾಪ್ 10 ಮೋಸ್ಟ್ ವಾಂಟೆಡ್‌ನಲ್ಲಿ ಈಕೆ 4ನೇ ಸ್ಥಾನದಲ್ಲಿದ್ದಳು.ಭಾರತದಲ್ಲಿ ಎಫ್‌ಬಿಐ ಬಂಧಿಸಿದೆ ಎಂದು ಹೇಳಿದ್ದಾರೆ.
ಭಾರತೀಯ ಅಧಿಕಾರಿಗಳು ಮತ್ತು ಇಂಟರ್‌ಪೋಲ್‌ನ ಸಮನ್ವಯದೊಂದಿಗೆ ಸಿಂಗ್ ಅವರನ್ನು ಭಾರತದಲ್ಲಿ ಎಫ್‌ಬಿಐ ಬಂಧಿಸಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಅವರನ್ನು ಅಮೆರಿಕಕ್ಕೆ ಸಾಗಿಸಲಾಗಿದೆ ಮತ್ತು ಟೆಕ್ಸಾಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅದು ಹೇಳಿದೆ.
ಆಕೆಯ ಮಗನಿಗೆ ತೀವ್ರ ಬೆಳವಣಿಗೆಯ ಅಸ್ವಸ್ಥತೆ, ಸಾಮಾಜಿಕ ಅಸ್ವಸ್ಥತೆ, ಮೂಳೆ ಸಾಂದ್ರತೆ ಸಮಸ್ಯೆಗಳು ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಸೇರಿದಂತೆ ಹಲವಾರು ಆರೋಗ್ಯ ಮತ್ತು ಬೆಳವಣಿಗೆಯ ಸಮಸ್ಯೆಗಳಿದ್ದವು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಫಾಕ್‌್ಸ ನ್ಯೂಸ್ ವರದಿ ಮಾಡಿದೆ.
2023 ರ ಅಕ್ಟೋಬರ್‌ನಲ್ಲಿ ಟೆಕ್ಸಾಸ್ ಜಿಲ್ಲಾ ನ್ಯಾಯಾಲಯದಲ್ಲಿ ಸಿಂಗ್ ವಿರುದ್ಧ ಔಪಚಾರಿಕವಾಗಿ ಆರೋಪ ಹೊರಿಸಲಾಯಿತು.ಪಟೇಲ್ ಅವರ ಪೋಸ್ಟ್ ಪ್ರಕಾರ, ಅವರು ಪ್ರಾಸಿಕ್ಯೂಷನ್ ತಪ್ಪಿಸಲು ಕಾನೂನುಬಾಹಿರವಾಗಿ ದೇಶ ಬಿಟ್ಟ ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕೊಲೆಆರೋಪಗಳನ್ನು ಎದುರಿಸಬೇಕಾಗುತ್ತದೆ.
- ಹೈದರಾಬಾದ್ನಲ್ಲಿ ಕರ್ನಾಟಕದ ಕಲಬುರಗಿಯ ಒಂದೇ ಕುಟುಂಬದ ಐವರು ಆತ್ಮಹತ್ಯೆ
- ಮಹೇಶ್ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆದ ಪೊಲೀಸರು
- ರೈಲುಗಳ ಶೌಚಾಲಯಗಳಲ್ಲಿ ನೀರಿನ ಕೊರತೆ ಕುರಿತು 1 ಲಕ್ಷಕ್ಕೂ ಹೆಚ್ಚು ದೂರು : ಸಿಎಜಿ ವರದಿ
- ತ್ರಿವಳಿ ಕೊಲೆಗೆ ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ ದೆಹಲಿ
- 33 ದಿನದಲ್ಲಿ ಮಾದಪ್ಪನ ಹುಂಡಿಯಲ್ಲಿ 2 ಕೋಟಿ ಕಾಣಿಕೆ ಸಂಗ್ರಹ