Wednesday, August 13, 2025
Homeರಾಷ್ಟ್ರೀಯ | Nationalಪುರುಷನ ವೇಷದಲ್ಲಿ ಬಂದು ಸಂಬಂಧಿಕರ ಮನೆಯಲ್ಲಿ 1.5 ಕೋಟಿ ರೂ. ಆಭರಣ ದೋಚಿದ ಮಹಿಳೆ

ಪುರುಷನ ವೇಷದಲ್ಲಿ ಬಂದು ಸಂಬಂಧಿಕರ ಮನೆಯಲ್ಲಿ 1.5 ಕೋಟಿ ರೂ. ಆಭರಣ ದೋಚಿದ ಮಹಿಳೆ

Woman Poses As Man, Robs Jewellery Of Rs 1.5 Crore From Relative's House

ಪಾಲ್ಘರ್‌,ಆ.13-ತನ್ನ ಸಹೋದರಿಯ ಮಾವನ ಮನೆಗೆ ಪುರುಷನಂತೆ ವೇಷ ಧರಿಸಿ ನುಗ್ಗಿದ ಮಹಿಳೆ 1.5 ಕೋಟಿ ರೂ ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ದೋಚಿರುವ ಘಟನೆ ಇಲ್ಲಿ ನಡೆದಿದೆ. ಪಾಲ್ಘರ್‌ನ ವಸಾಯಿ ಪ್ರದೇಶದ ಮಾಣಿಕ್‌ಪುರದಲ್ಲಿ ಈ ಘಟನೆ ನಡೆದಿದ್ದು, ಅದೇ ರಾತ್ರಿ ಗುಜರಾತ್‌ಗೆ ಪರಾರಿಯಾಗಿದ್ದ ಜ್ಯೋತಿ ಮೋಹನ್‌ ಭಾನುಶಾಲಿ(22) ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮಹಿಳೆ ಪುರುಷನಂತೆ ವೇಷ ಧರಿಸಿ, ಒಂಟಿಯಾಗಿ ವಾಸಿಸುತ್ತಿದ್ದ ತನ್ನ ಸಹೋದರಿಯ ಮಾವನ ಮನೆಗೆ ಬಂದಿದ್ದರು,ಯಾವುದೋ ವ್ಯವಹಾರದ ಬಗ್ಗೆ ಮಾತನಾಡಬೇಕೆಂದು ವೃದ್ಧ ವ್ಯಕ್ತಿಯನ್ನು ಶೌಚಾಲಯಕ್ಕೆ ಕರೆದೊಯ್ದು, ಪರಿಶೀಲಿಸುವ ನೆಪದಲ್ಲಿ, ಒಳಗೆ ತಳ್ಳಿ ಬೀಗ ಹಾಕಲಾಗಿತ್ತು.

ನಂತರ ಮನೆಯಲ್ಲಾ ಜಾಲಾಡಿ ಕೈಗೆ ಸಿಕ್ಕ 1.4 ಕೆಜಿ ಚಿನ್ನಾಭರಣಗಳು ಮತ್ತು 2.3 ಕೆಜಿ ಬೆಳ್ಳಿ ವಸ್ತುಗಳೊಂದಿಗೆ ಜ್ಯೋತಿ ಪರಾರಿಯಾಗಿದ್ದಳು ಎಂದು ಸಹಾಯಕ ಪೊಲೀಸ್‌‍ ಆಯುಕ್ತ ಮದನ್‌ ಬಲ್ಲಾಳ್‌ ತಿಳಿಸಿದ್ದಾರೆ.

ಒಟ್ಟು ಇದರ ಮೌಲ್ಯ 1,50 ಕೋಟಿಗೂ ಹೆಚ್ಚು ಹೇಳಿದರು. ದೂರಿನ ಆಧಾರದ ಮೇಲೆ, ಅದೇ ದಿನ ಕಳ್ಳತನ, ದರೋಡೆ ಮತ್ತು ಅಕ್ರಮ ಬಂಧನ ಕಾಯ್ಧೆಯಡಿ ಪ್ರಕರಣ ದಾಖಲಿಸಿದ ಪೊಲೀಸರು ಪೊಲೀಸರು ಸುಮಾರು 75 ರಿಂದ 80 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಎಂದು ಅವರು ಹೇಳಿದರು.

ಒಬ್ಬ ವ್ಯಕ್ತಿ ಕದ್ದ ವಸ್ತುಗಳನ್ನು ಒಯ್ಯುವ ನಂತರ ಒಬ್ಬ ಮಹಿಳೆ ಅವುಗಳನ್ನು ಸಂಗ್ರಹಿಸುವ ದೃಶ್ಯ ಪತ್ತೆಯಾಗಿತ್ತು. ತಾಂತ್ರಿಕ ಮತ್ತು ಗುಪ್ತಚರ ಮಾಹಿತಿಯ ಜೊತೆಗೆ, ಗುಜರಾತ್‌ನಲ್ಲಿರುವ ವೈದ್ದನ ಸಂಬಂಧಿಯೊಬ್ಬರು ಅಪರಾಧದಲ್ಲಿ ಭಾಗಿಯಾಗಿರಬಹುದು ಎಂಬ ಸುಳಿವು ತನಿಖಾಧಿಕಾರಿಗಳಿಗೆ ಸಿಕ್ಕಿತ್ತು..

ತ್ವರಿತವಾಗಿ ಕಾರ್ಯಪ್ರವೃತ್ತರಾದ ಅಪರಾಧ ವಿಭಾಗದ ತಂಡ, ನವಸಾರಿ ಪೊಲೀಸರ ನೆರವಿನೊಂದಿಗೆ, ತಡರಾತ್ರಿ ಗುಜರಾತ್‌ನ ಜ್ಯೋತಿ ಮೋಹನ್‌ ಭಾನುಶಾಲಿ ಯನ್ನು ಬಂಧಿಸಿದೆ ಎಂದು ಬಲ್ಲಾಳ್‌ ಹೇಳಿದರು.

ವಿಚಾರಣೆಯ ಸಮಯದಲ್ಲಿ, ಅವಳು ತಾನೇ ಈ ಯೋಜನೆ ರೂಪಿಸಿದ್ದಾಗಿ ಒಪ್ಪಿಕೊಂಡಳು. ಪುರುಷನ ವೇಷ ಧರಿಸಿ, ತನ್ನ ಸಹೋದರಿಯ ಮಾವ ಒಬ್ಬಂಟಿಯಾಗಿ ವಾಸಿಸುತ್ತಿದ್ದಾನೆಂದು ತಿಳಿದು ಅವರ ಮನೆಗೆ ನುಗ್ಗಿ ದರೋಡೆ ಮಾಡಿದ್ದಾಳೆ ಎಂದು ಅಧಿಕಾರಿ ಹೇಳಿದರು. ಪೊಲೀಸರು ಕದ್ದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

RELATED ARTICLES

Latest News