Saturday, September 14, 2024
Homeರಾಷ್ಟ್ರೀಯ | Nationalಕಾರ್‌ ಕಲಿಯಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆ

ಕಾರ್‌ ಕಲಿಯಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆ

ಮುಂಬೈ,ಜೂ.18- ಡ್ರೈವಿಂಗ್‌ ಕಲಿಯುತ್ತಿದ್ದ ಮಹಿಳೆಯೊಬ್ಬರು ಕಾರು ರಿವರ್ಸ್‌ ತೆಗೆದುಕೊಳ್ಳಲು ಹೋಗಿ 300 ಅಡಿ ಆಳದ ಕಂದಕಕ್ಕೆ ಕಾರು ಉರುಳಿಬಿದ್ದು ಸಾವನ್ನಪ್ಪಿರುವ ಘಟನೆ ಮಹರಾಷ್ಟ್ರದಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆ ಕಾರು ಕಲಿಯುತ್ತಿರುವುದನ್ನು ಆಕೆಯ ಸ್ನೇಹಿತ ವಿಡಿಯೋ ಮಾಡುತ್ತಿದ್ದ ಕಾರಣ ಮಹಿಳೆಯ ಚಲಾಯಿಸುತ್ತಿದ್ದ ಕಾರು 300 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿರುವುದು ರೆಕಾರ್ಡ್‌ ಆಗಿದೆ.ಶ್ವೇತಾ ದೀಪಕ್‌ ಸುರ್ವಾಸೆ ಹಾಗೂ ಆಕೆಯ ಸ್ನೇಹಿತ ಸೂರಜ್‌ ಸಂಜೌಮುಲೆ ನಿನ್ನೆ ಮದ್ಯಾಹ್ನ ಔರಂಗಾಬಾದ್‌ನಿಂದ ಸುಲಿಭಂಜನ್‌ ಬೆಟ್ಟ ಪ್ರದೇಶಕ್ಕೆ ತೆರಳಿದ್ದರು.

ವೀಡಿಯೊದಲ್ಲಿ, 23 ವರ್ಷದ ಶ್ವೇತಾ ದೀಪಕ್‌ ಸುರ್ವಾಸೆ, ಚಾಲಕನ ಸೀಟಿನಲ್ಲಿ ಆಕೆಯ ಸ್ನೇಹಿತ ಸೂರಜ್‌ ಸಂಜೌ ಮುಲೆ, 25, ಆಕೆಯ ವೀಡಿಯೊವನ್ನು ರೆಕಾರ್ಡ್‌ ಮಾಡಿದ್ದಾನೆ. ಇಬ್ಬರು ಸ್ನೇಹಿತರು ಸೋಮವಾರ ಮಧ್ಯಾಹ್ನ ಔರಂಗಾಬಾದ್‌ನಿಂದ ಸುಲಿಭಂಜನ್‌ ಬೆಟ್ಟಗಳಿಗೆ ಪ್ರಯಾಣಿಸಿದ್ದರು.

ಈ ಸಂದರ್ಭದಲ್ಲಿ ಸೂರಜ್‌ ಶ್ವೇತಾಗೆ ಕಾರು ಕಲಿಸಲು ಮುಂದಾಗುತ್ತಾ ಅದನ್ನು ವಿಡಿಯೋ ಮಾಡುತ್ತಿರುವಾಗ ಕಾರ್‌ ರಿವರ್ಸ್‌ ತೆಗೆದುಕೊಳ್ಳಲು ಹೋದ ಶ್ವೇತಾ ಕ್ಲಚ್‌ ಒತ್ತಿದ್ದಾಗ ಕಾರು ಹಿಮುಖವಾಗಿ ವೇಗವಾಗಿ ಸಂಚರಿಸುತ್ತದೆ ತಕ್ಷಣ ಸೂರಜ್‌ ಬ್ರೇಕ್‌ ಹಾಕುವಂತೆ ಸೂಚಿಸಿ ಕಾರ್‌ ಹತ್ತಿರ ಓಡಿ ಹೋಗುವಷ್ಟರಲ್ಲಿ ಕಾರ್‌ 300 ಅಡಿ ಕಂದಕಕ್ಕೆ ಉರುಳಿಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು 300 ಅಡಿ ಎತ್ತರದ ಬಂಡೆಯ ಕೆಳಗೆ ಉರುಳಿ ಕಮರಿಗೆ ಬಿತ್ತು ಈ ದೃಶ್ಯ ನೋಡಲು ಸಾಧ್ಯವಾಗಲಿಲ್ಲ ಎಂದು ಘೋರ ದುರಂತದ ಬಗ್ಗೆ ತಿಳಿಸಿದ್ದಾರೆ.ಮಳೆಗಾಲದಲ್ಲಿ ಸುಲಿಭಂಜನ್‌ ಬೆಟ್ಟದ ಮೇಲಿರುವ ದತ್ತಾತ್ರೇಯ ದೇವಾಲದ ಸುತ್ತಮತ್ತಲ ಇರುವ ಸುಂದರವಾದ ದಶ್ಯಾವಳಿಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವುದು ವಾಡಿಕೆ.

RELATED ARTICLES

Latest News