Thursday, August 14, 2025
Homeಬೆಂಗಳೂರುನವಜಾತ ಶಿಶುವನ್ನು ಮಾರಾಟ ಮಾಡಿ ಹಣ ಖರ್ಚಾದ ನಂತರ ಮಗುವನ್ನು ವಾಪಸ್‌‍ ಕೇಳಿದ ಮಹಿಳೆ

ನವಜಾತ ಶಿಶುವನ್ನು ಮಾರಾಟ ಮಾಡಿ ಹಣ ಖರ್ಚಾದ ನಂತರ ಮಗುವನ್ನು ವಾಪಸ್‌‍ ಕೇಳಿದ ಮಹಿಳೆ

Woman sells newborn baby and demands return of baby after spending money

ಬೆಂಗಳೂರು,ಆ.14-ನವಜಾತ ಶಿಶುವನ್ನು ಮಾರಾಟ ಮಾಡಿ ಬಳಿಕ ಹಣ ಖರ್ಚಾದ ನಂತರ ಮಗುವನ್ನು ವಾಪಸ್‌‍ ಕೊಡಿಸಿ ಎಂದು ಮಹಿಳೆಯೊಬ್ಬರು ಡಿಜೆ ಹಳ್ಳಿ ಪೊಲೀಸ್‌‍ ಠಾಣೆ ದೂರು ನೀಡಿದ ಘಟನೆ ನಡೆದಿದೆ.

ಅಮುದಾ, ರಮ್ಯಾ ಎಂಬವರಿಗೆ ಸುಮಾರು 2.5 ಲಕ್ಷ ರೂ.ಗೆ ನಸೀಂ ಬೇಗಂ ಎಂಬ ಮಹಿಳೆ ತಮ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದರು.ನಸೀಂ ಬೇಗಂ 15 ವರ್ಷದ ಹಿಂದೆ ದಸ್ತಗೀರ್‌ ಎಂಬವರ ಜೊತೆ ಮದುವೆಯಾಗಿದ್ದರು. ದಂಪತಿಗೆ ಎರಡು ಗಂಡು,1ಹೆಣ್ಣುಮಕ್ಕಳೕದ್ದು. ಶಿವಾಜಿನಗರದ ಘೋಷಾ ಆಸ್ಪತ್ರೆಯಲ್ಲಿ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದರು.

ಹಣದಾಸೆಗಾಗಿ ಆ ಸಮಯದಲ್ಲಿ ದಂಪತಿ ನವಜಾತ ಹೆಣ್ಣುಮಗುವನ್ನು 2.5 ಲಕ್ಷ ರೂ.ಗೆ ಮಾರಾಟ ಮಾಡಿದ್ದರು.ಮಾರಾಟ ಮಾಡಿ ಬಂದಿದ್ದ ಹಣ ಖರ್ಚಾದ ಬಳಿಕ ಮಹಿಳೆ ಇದೀಗ ಮಗು ವಾಪಸ್‌‍ ಬೇಕು ಎಂದು ಕೇಳುತ್ತಿದ್ದಾರೆ. ಈ ಹಿನ್ನೆಲೆ ಸದ್ಯ ಡಿಜೆ ಹಳ್ಳಿ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಮಕ್ಕಳ ಹಕ್ಕು ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಇದು ಅನಧೀಕೃತವಾಗಿ ಮಗು ಮಾರಾಟವಾಗಿದೆ.ಮತ್ತು ಪಡೆದವರೂ ಕೂಡ ನಿಯಮ ಪಾಲಿಸಿಲ್ಲ ಎಂದು ಹೇಳಿದ್ದಾರೆ.

RELATED ARTICLES

Latest News