Thursday, August 28, 2025
Homeಬೆಂಗಳೂರುಬೆಂಗಳೂರಲ್ಲಿ ಗೌರಿ ಹಬ್ಬದ ದಿನವೇ ಮಹಿಳಾ ಟೆಕ್ಕಿ ಆತ್ಮಹತ್ಯೆ

ಬೆಂಗಳೂರಲ್ಲಿ ಗೌರಿ ಹಬ್ಬದ ದಿನವೇ ಮಹಿಳಾ ಟೆಕ್ಕಿ ಆತ್ಮಹತ್ಯೆ

Woman techie commits suicide on Gauri festival day in Bengaluru

ಬೆಂಗಳೂರು,ಆ.28- ಗೌರಿ ಹಬ್ಬದ ದಿನವೇ ಮಹಿಳಾ ಟೆಕ್ಕಿಯೊಬ್ಬರು ಆತಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಗುಂಟೆ ಪೊಲೀಸ್‌‍ ಠಾಣೆ ವ್ಯಾಪ್ತಿಯ ಗಂಗೋತ್ರಿ ಸರ್ಕಲ್‌ ನಿವಾಸಿ ಶಿಲ್ಪಾ (27) ಆತಹತ್ಯೆ ಮಾಡಿಕೊಂಡಿರುವ ಟೆಕ್ಕಿ.

ಮೂರು ವರ್ಷದ ಹಿಂದೆ ಸಾಫ್ಟ್ ವೇರ್‌ ಎಂಜಿನಿಯರ್‌ ಪ್ರವೀಣ್‌ ಎಂಬುವವರನ್ನು ಟೆಕ್ಕಿ ಶಿಲ್ಪಾ ಮದುವೆಯಾಗಿದ್ದು, ದಂಪತಿ ಅನ್ಯೋನ್ಯವಾಗಿದ್ದರು.ಇತ್ತೀಚೆಗೆ ಪ್ರವೀಣ್‌ ಅವರು ಆ ಉದ್ಯೋಗ ತೊರೆದು ಬಿಸ್ನೆಸ್‌‍ ಆರಂಭಿಸಿದ್ದಾರೆ. ಈ ನಡುವೆ ಇವರ ದಾಂಪತ್ಯದಲ್ಲಿ ಏನಾಯಿತೋ ಏನೋ ಗೊತ್ತಿಲ್ಲ.

ಗೌರಿ ಹಬ್ಬದ ದಿನವಾದ ಮೊನ್ನೆ ರಾತ್ರಿ ಶಿಲ್ಪಾ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ನಂತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಶಿಲ್ಪಾ ಆತಹತ್ಯೆಗೆ ನಿಖರ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಶಿಲ್ಪಾ ಅವರ ತಾಯಿ ಪೊಲೀಸರಿಗೆ ವರದಕ್ಷಿಣೆ ಕಿರುಕುಳ ದೂರು ನೀಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News