Tuesday, February 25, 2025
Homeಜಿಲ್ಲಾ ಸುದ್ದಿಗಳು | District Newsಮಂಡ್ಯ | Mandyaಬಾವಿಯಲ್ಲಿ ಮಹಿಳೆಯ ಶವ ಪತ್ತೆ, ಸಾವಿನ ಸುತ್ತ ಅನುಮಾನ

ಬಾವಿಯಲ್ಲಿ ಮಹಿಳೆಯ ಶವ ಪತ್ತೆ, ಸಾವಿನ ಸುತ್ತ ಅನುಮಾನ

Woman's body found in well, suspicions surrounding death

ಮಂಡ್ಯ,ಫೆ.14-ಮಹಿಳೆಯ ಶವ ಬಾವಿಯಲ್ಲಿ ಪತ್ತೆಯಾಗಿದ್ದು ಸಾವಿನ ಹಿಂದೆ ಹಲವಾರು ಅನುಮಾನ ಮೂಡಿದೆ. ತಾಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿ ಗೃಹಿಣಿ ಜಾಹ್ನವಿ (26) ಮೃತದೇಹ ಪತ್ತೆಯಾಗಿದೆ.

ಜಾಹ್ನವಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಲಾಗಿದೆ ಮೃತಳ ಕುಟುಂಬಸ್ಥರು ಆರೋಪಿಸಿದ್ದರೆ. ಕಳೆದ 4 ವರ್ಷದ ಹಿಂದೆ ಯಶವಂತ್ ಮತ್ತು ಜಾಹ್ನವಿ ಮದುವೆಯಾಗಿತ್ತು.ನಂತರ ನಿತ್ಯ ಪತಿ ಕುಡಿದು ಬಂದು ಜಾಹ್ನವಿಗೆ ಹಲ್ಲೆ ಮಾಡುತ್ತಿದ್ದ ಕಿರುಕುಳ ಸಹಿಸಲಾಗದೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ಹೇಳಿದ್ದಾರೆ.

ಆದರೆ, ಮೃತದೇಹದ ಮೇಲೆ ಮತ್ತು ಮುಖದ ಮೇಲೆ ರಕ್ತದ ಕಲೆ ಪತ್ತೆಯಾಗಿದೆ. ಹಲ್ಲೆ ನಡೆಸಿ, ಬಳಿಕ ಪತಿಯೇ ಕೊಲೆ ಮಾಡಿದ್ದಾನೆಂದು ಜಾಹ್ನವಿ ಪೋಷಕರು ಆರೋಪಿಸಿದ್ದಾರೆ. ಕೆರಗೋಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ

RELATED ARTICLES

Latest News