Sunday, February 23, 2025
Homeಬೆಂಗಳೂರು"ನಾನು ನಾಲ್ಕು ಮಕ್ಕಳ ತಾಯಿ ಪ್ಲೀಸ್ ಬಿಟ್ಟು ಬಿಡಿ" ಎಂದು ಗೊಗರೆದರೂ ಬಿಡದೆ ಅತ್ಯಾಚಾರವೆಸಗಿದ ಕಾಮುಕರು

“ನಾನು ನಾಲ್ಕು ಮಕ್ಕಳ ತಾಯಿ ಪ್ಲೀಸ್ ಬಿಟ್ಟು ಬಿಡಿ” ಎಂದು ಗೊಗರೆದರೂ ಬಿಡದೆ ಅತ್ಯಾಚಾರವೆಸಗಿದ ಕಾಮುಕರು

Women Raped In Bengaluru

ಬೆಂಗಳೂರು, ಫೆ.22- ನಾಲ್ಕು ಮಕ್ಕಳ ತಾಯಿ ಮೇಲೆ ಹೊರ ರಾಜ್ಯದ ನಾಲ್ವರು ಕಾಮುಕರು ನಡೆಸಿರುವ ಸಾಮೂಹಿಕ ಅತ್ಯಾಚಾರ ಅತ್ಯಂತ ಪೈಶಾಚಿಕವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದ ನಾಲ್ಕು ಮಕ್ಕಳ ತಾಯಿ ದೆಹಲಿ ಮೂಲದ ಮಹಿಳೆಯೊಂದಿಗೆ ಸಲುಗೆಯಿಂದ ಮಾತನಾಡಿಸಿ ಹೋಟೆಲ್ ಟೆರೆಸ್‌ಗೆ ಕರೆದೊಯ್ದು, ಊಟ ಕೊಡಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಕಾಮುಕರು ಆಕೆ ಮನಷ್ಯಳು ಎನ್ನುವುದನೇ ಮರೆತಂತೆ ವರ್ತಿಸಿದ್ದಾರೆ ಮಾತ್ರವಲ್ಲ ಆಕೆಯ ಮುಖ ಪರಚಿ ಮೃಗೀಯವಾಗಿ ನಡೆದುಕೊಂಡಿದ್ದಾರೆ ಎಂದು ಕೊರಮಂಗಲ ಪೊಲೀಸರು ತಿಳಿಸಿದ್ದಾರೆ.

ಅಯ್ಯೋ ದಮ್ಮಯ್ಯ … ಬೇಡ…. ಫೀಸ್ ನನ್ನನ್ನು ಬಿಟ್ಟು ಬಿಡಿ ಎಂದು ಸಂತ್ರಸ್ಥ ಮಹಿಳೆ ಹಿಂದಿ ಭಾಷೆಯಲ್ಲಿ ಪರಿ ಪರಿಯಾಗಿ ಬೇಡಿಕೊಂಡರು ಕಾಮುಕರು ಬಲವಂತವಾಗಿ ಆಕೆಯನ್ನು ಬೆಳಗಿನ ಜಾವದವರೆಗೂ ಅಲ್ಲೇ ಇರಿಸಿಕೊಂಡು ಹಲವಾರು ಬಾರಿ ಅತ್ಯಾಚಾರ ನಡೆಸಿ ಹಿಂಸೆ ನೀಡಿದ್ದಾರೆ.ಅಲ್ಲದೆ ಆಕೆಗೆ ಈ ವಿಚಾರ ಯಾರಿಗಾದರೂ ತಿಳಿಸಿದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಬೆದರಿಸಿ ಬೆಳಗಿನ ಜಾವ ಆಕೆಯನ್ನು ಬಿಟ್ಟು ಕಳಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯ ಮೊಬೈಲ್ ಫೋನ್ ನಾಪತ್ತೆಯಾಗಿದ್ದರಿಂದ ಸುಧಾರಿಸಿಕೊಂಡು ಬಂದು 112 ನಂಬರಿಗೆ ದೂರವಾಣಿ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳು ನಗರ ಬಿಟ್ಟು ತಮ್ಮ ರಾಜ್ಯಕ್ಕೆ ಪಲಾಯನ ಮಾಡುವ ಮುನ್ನವೇ ಎಲ್ಲ ನಾಲ್ಕು ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆ ಮೇಲೆ ಪೈಶಾಚಿಕವಾಗಿ ವರ್ತಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಪಶ್ಚಿಮ ಬಂಗಾಳ ಹಾಗೂ ಉತ್ತರಾಖಂಡ್ ಮೂಲದ ಅಜಿತ್, ವಿಶ್ವ, ಶಿಭುಲ್ ಮತ್ತು ಶೋಭನ್ ಎಂಬ ಕಾಮುಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.ಕಾಮುಕರ ಕಾಮತೃಷೆಗೆ ಒಳಗಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯಾರು ಆ ಮಹಿಳೆ:
ಸಂತ್ರಸ್ಥ ಮಹಿಳೆ ದೆಹಲಿ ಮೂಲದವರಾಗಿದ್ದು, ಇಲ್ಲಿನ ವ್ಯಕ್ತಿಯೊಬ್ಬರನ್ನು ವಿವಾಹವಾಗಿ ಕಳೆದ ಹಲವಾರು ವರ್ಷಗಳಿಂದ ನಗರದಲ್ಲೇ ನೆಲೆಸಿದ್ದಾರೆ. ಪತಿಯ ಜೊತೆ ಕೆಟರಿಂಗ್ ನಡೆಸುತ್ತಿದ್ದ ಮಹಿಳೆ ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಊಟ ಸರಬರಾಜು ಮಾಡುವ ಕೆಲಸ ಮಾಡಿಕೊಂಡಿದ್ದರು.

ಗುರುವಾರ ರಾತ್ರಿ ತನ್ನ ಸ್ನೇಹಿತೆಯರನ್ನು ಭೇಟಿಯಾಗಲು ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜ್ ಬಳಿಯ ಜಂಕ್ಷನ್‌ನಲ್ಲಿ ಕಾಯುತ್ತಿದ್ದಾಗ, ಸಮೀಪದ ಹೋಟೆಲ್ ಒಂದರಲ್ಲಿ ಉದ್ಯೋಗಿಗಳಾಗಿದ್ದ ಹೊರ ರಾಜ್ಯದ ನಾಲ್ವರು ಕಾಮುಕರು ಆಕೆಯ ಬಳಿಗೆ ಬಂದು ಹಿಂದಿ ಭಾಷೆಯಲ್ಲಿ ಆತ್ಮೀಯವಾಗಿ ಮಾತನಾಡಿಸಿ ಊಟ ಕೊಡಿಸುವುದಾಗಿ ನಂಬಿಸಿ ಹೋಟೆಲ್‌ನ ಟೆರೆಸ್‌ಗೆ ಕರೆದೊಯ್ದಿದ್ದಾರೆ.

ಅಲ್ಲಿ ಮೊದಲು ಮಹಿಳೆಗೆ ಊಟ ಕೋಡಿಸಿ ನಂತರ ತಮ್ಮ ಕಾಮ ಚೇಷ್ಟೆ ಶುರು ಮಾಡಿದ್ದಾರೆ. ಇಂತಹದ್ದನ್ನು ಊಹಿಸದ ಮಹಿಳೆ ಕ್ಷಣಕಾಲ ಗಾಬರಿಗೊಂಡು ಫೀಸ್ ನನ್ನನ್ನು ಬಿಟ್ಟುಬಿಡಿ ನನಗೆ ನಾಲ್ಕು ಮಕ್ಕಳಿದ್ದಾರೆ ಎಂದು ಗೊಗರೆದರು ಆಕೆಯ ಆಕ್ರಂದನ ಕಾಮುಕರ ಕಿವಿಗೆ ಬೀಳಲೆ ಇಲ್ಲ.

ಪೊಲೀಸರ ಕಾರ್ಯಕ್ಕೆ ಶ್ಲಾಘನೆ:
ಕವಾಯತು ಸೇರಿದಂತೆ ನಿನ್ನೆ ಬಿಡುವಿಲ್ಲದ ಕೆಲಸದ ಒತ್ತಡದಲ್ಲಿದ್ದ ಪೊಲೀಸರು ಸಾಮೂಹಿಕ ಅತ್ಯಾಚಾರದ ವಿಷಯ ತಿಳಿಯುತ್ತಿದ್ದಂತೆ ಕ್ಷಿಪ್ರ ಕಾರ್ಯಚರಣೆ ನಡೆಸಿ ಎಲ್ಲಾ ನಾಲ್ಕು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಕೋರಮಂಗಲ ಪೊಲೀಸರ ಕಾರ್ಯಚರಣೆ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.

ಒಂದು ವೇಳೆ ಪೊಲೀಸರು ಈ ಪ್ರಕರಣದಲ್ಲೂ ನಿಧಾನಗತಿಯ ಕಾರ್ಯಚರಣೆ ನಡೆಸಿದ್ದರೆ ಆರೋಪಿಗಳು ನಗರ ಬಿಟ್ಟು ತಮ್ಮ ರಾಜ್ಯಗಳಿಗೆ ಪರಾರಿಯಾಗುವ ಸಾಧ್ಯತೆ ಇತ್ತು.

RELATED ARTICLES

Latest News