ಬಳ್ಳಾರಿ,ಮೇ.21-ಚಲಿಸುತ್ತಿರುವಾಗ ನಿಧಾನವಾಗಿ ನಿಂತ ಸಾರಿಗೆ ಬಸ್ಸನ್ನು ಮಹಿಳೆಯರೇ ತಳ್ಳಿದ ಘಟನೆ ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ನಿನ್ನೆ ಹೊಸಪೇಟೆಯಲ್ಲಿ ನಡೆದ ರಾಜ್ಯ ಸರ್ಕಾರದ ಸಂಕಲ್ಪ ಸಮರ್ಪಣೆ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದ ಮಹಿಳೆಯರು ತಮ್ಮೂರಿಗೆ ಹೋಗುವಾಗ ಬಸ್ ಹೆದ್ದಾರಿಯಲ್ಲಿ ಏಕಾಏಕಿ ನಿಂತಿದೆ.
ನಂತರ ಮಹಿಳೆಯರು ಹಿಮದಿನಿಂದ ಬಸ್ ನೂಕಿ ಅದು ಚಾಲನೆಗೊಂಡಾಗ ಮತ್ತೆ ಬಸ್ ಅತಿ ಪ್ರಯಾಣ ಮುಂದುವರೆಸಿದ್ದಾರೆ. ಆದರೆ ಇದನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು ಮಳೆಯ ನಡುವೆ ಮಹಿಳೆಯರು ಬಸ್ ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.