Friday, November 15, 2024
Homeರಾಜ್ಯಅಮೇರಿಕಾದಲ್ಲಿ ವಿಶ್ವ ಒಕ್ಕಲಿಗರ ಸಮ್ಮೇಳನ

ಅಮೇರಿಕಾದಲ್ಲಿ ವಿಶ್ವ ಒಕ್ಕಲಿಗರ ಸಮ್ಮೇಳನ

World Vokkaliga Conference in America

ವಾಷಿಂಗ್‌ಟನ್‌,ನ.14-ಒಕ್ಕಲಿಗರ ಭವ್ಯ ಸಂಸ್ಕೃತಿ, ಪರಂಪರೆಗಳನ್ನು ಎತ್ತಿ ತೋರಿಸುವ ವಿಶ್ವ ಒಕ್ಕಲಿಗರ ನಮ್ಮೇಳನ ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿರುವ ಸ್ಯಾನ್‌ ಹೋಸೆ ನಗರದಲ್ಲಿ 2025 ರ ಜುಲೈ 3, 4 ಮತ್ತು 5 ರಂದು ಅಮೇರಿಕ ಒಕ್ಕಲಿಗರ ಪರಿಷತ್ತಿನ ಪಶ್ಚಿಮ ಶಾಖೆಯ ಅಶ್ರಯದಲ್ಲಿ ಅದ್ದೂರಿಯಿಂದ ನಡೆಯಲಿದೆ.

ಅನ್ನದಾತರೆಂದೇ ಪ್ರಸಿದ್ಧರಾದ ಒಕ್ಕಲಿಗರು ನಿಷ್ಠೆಯ ದುಡಿಮೆಯ ಜೊತೆಜೊತೆಗೆ ತಮ ಸರಳ ನಡೆ-ನುಡಿಯ ಸ್ನೇಹಮಯ ವ್ಯಕ್ತಿತ್ವಕ್ಕೆ ಲೋಕಪ್ರಿಯರಾದವರು, ಜನಪದ ಸಂಸ್ಕೃತಿಯಿಂದ ಹಿಡಿದು ಆಧುನಿಕ ವಿಜ್ಞಾನ-ತಂತ್ರಜ್ಞಾನಗಳವರೆಗೂ ಎಲ್ಲ ಕ್ಷೇತ್ರಗಳಲ್ಲೂ ಅಪಾರ ಮಟ್ಟದಲ್ಲಿ ತಮ ಕಾಣಿಕೆಯನ್ನಿತ್ತಿರುವ ಒಕ್ಕಲಿಗರ ಸಾಧನೆ-ಪರಿಶ್ರಮಗಳ ಕುರುಹಾಗಿ ಉಳುತ ಸಾಗಿಹವು ಜಗವೆಂಬ ಹೊಲವನು ಎಂಬ ಶೀರ್ಷಿಕೆಯಡಿ ಸಜ್ಜುಗೊಳ್ಳುತ್ತಿರುವ ಈ ಭವ್ಯಯ ಸಮೇಳನವು ವಿಶ್ವದ ಎಲ್ಲೆಡೆಯಿಂದ ಒಕ್ಕಲಿಗರನ್ನು ಆಕರ್ಷಿಸಲಿದೆ.

ಸುಮಾರು 1000ಕ್ಕೂ ಹೆಚ್ಚು ಜನರನ್ನು ಒಗ್ಗೂಡಲಿಸಲಿದೆ ಎಂದು ಅಮೇರಿಕ ಒಕ್ಕಲಿಗರ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ಧನಂಜಯ ಕೆಂಗಯ್ಯರವರು ತಿಳಿಸಿದ್ದಾರೆ. ಭಾರತ ಮತ್ತು ಅಮೆರಿಕಾ ದೇಶಗಳಷ್ಟೇ ಅಲ್ಲದೆ, ಯುರೋಪ್‌, ಆಸ್ಟ್ರೇಲಿಯಾ, ಕೆನಡಾ, ದುಬೈ ಹಾಗೂ ಅನೇಕ ಇನ್ನಿತರ ಭಾಗಗಳಿಂದ ಒಕ್ಕಲಿಗರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂಬುದು ಈ ಸಮೇಳನದ ವಿಶೇಷ.

ಅತ್ಯಂತ ಸುಂದರವಾದ ಸ್ಯಾನ್‌ ಜೋನೆ ಮೆಕೆನ್ರಿ ಕನ್ವೆನ್ಸನ್‌ ಸೆಂಟರ್‌ ನಲ್ಲಿ ನಡೆಯಲಿರುವ ಮೂರು ದಿನಗಳ ಈ ಸಾಂಸ್ಕೃತಿಕ ಉತ್ಸವಕ್ಕೆ ಭಾರತ ಹಾಗೂ ಅಮೇರಿಕಾದ ಕಲಾವಿದರಿಂದ ಭರ್ಜರಿ ಮನೋರಂಜನೆಯ ಕಾರ್ಯಕ್ರಮಗಳು, ಸವಿಯಾದ ಸಾಂಪ್ರದಾಯಿಕ ಔತಣ, ಬಾಂಧವ್ಯದ ಬೆಸುಗೆಯನ್ನು ಬಲಪಡಿಸುವ ಸ್ನೇಹಕೂಟಗಳು, ಮಕ್ಕಳಿಗೆ ಹಾಗೂ ಯುವಜನಾಂಗಕ್ಕೆ ಸ್ಪೂರ್ತಿ ಸಂತೋಷ ನೀಡುವ ಅನೇಕ ಚಟುವಟಿಕೆಗಳು, ಉದ್ಯಮಶೀಲರಿಗೆ ಉತ್ತೇಜನ ನೀಡುವ ಬ್ಯುಸಿನೆಸ್‌‍ ಫೋರಂ, ಸ್ತ್ರೀ ಶಕ್ತಿಗೆ ಪೂರಕವಾದ ಮಹಿಳಾ ವೇದಿಕೆ ಹೀಗೆ ಹತ್ತು ಹಲವಾರು ವಿಭಿನ್ನ ರೀತಿಯ ಕಾರ್ಯಕ್ರಮಗಳ ಯೋಜನೆ ಭರದಿಂದ ಸಾಗಿದೆ.

ತಮ ಉತ್ಸಾಹ, ಕ್ರಿಯಾಶೀಲತೆ ಹಾಗೂ ಅತಿಥ್ಯಕ್ಕೆ ಹೆಸರಾದ ಕ್ಯಾಲಿಫೋರ್ನಿಯಾ ಒಕ್ಕಲಿಗರು ಎಲ್ಲೆಡೆಯಿಂದ ಬರುವ ತಮ ಬಂಧು-ಮಿತ್ರರಿಗೆ ಅಪೂರ್ವ ಸ್ವಾಗತ ಕೋರಲು ಉತ್ಸುಕತೆಯಿಂದ ಅಣಿಯಾಗುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

RELATED ARTICLES

Latest News