ಫ್ರಾನ್ಸ್,ಆ.8- ಪ್ಯಾರಿಸ್ ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಭಾರತದ ಕುಸ್ತಿಪಟು ವಿನೇಶ್ ಪೋಗಟ್ ಅವರು ಮಹಿಳೆಯರ 50 ಕೆಜಿ ವಿಭಾಗದಿಂದ ಅನರ್ಹಗೊಂಡಿರುವ ಬೆನ್ನಲ್ಲೆ ಮತ್ತೊಬ್ಬ ಕುಸ್ತಿಪಟು ಒಲಿಂಪಿಕ್ಸ್‍ನಿಂದ ಹೊರ ಬಂದಿದ್ದಾರೆ. ಭಾರತದ ಪ್ರಮುಖ ಕುಸ್ತಿಪಟು ಅಂತಿಮ್ ಅವರನ್ನು ಅಶಿಸ್ತಿನ ಕಾರಣದಿಂದ ಪಂದ್ಯದಿಂದ ದೂರು ಇಡಲಾಗಿದೆ. ಜತೆಗೆ ಪ್ಯಾರಿಸ್ ಒಲಿಂಪಿಕ್ ಅಸೋಸಿಯೇಷನ್ ಪ್ಯಾರಿಸ್‍ನಿಂದ ಅವರನ್ನು ಗಡೀಪಾರು ಮಾಡಲು ನಿರ್ಧರಿಸಿದೆ.
ಪ್ರಿ ಕ್ವಾರ್ಟರ್ ಫೈನಲ್ನ ಲ್ಲಿ ಆಂತಿಮ್ ಟರ್ಕಿಯ ಯೆಟ್ಗಿಲ್ ಝೆನೆಪ್ ವಿರುದ್ಧ 0-10 ಅಂತರದಲ್ಲಿ ಸೋತಿದ್ದರು. ಇನ್ನು ಅವರನ್ನು ಗಡಿಪಾರು ಮಾಡಲು ಕಾರಣವನ್ನು ಕೂಡ ಪ್ಯಾರಿಸ್ ಒಲಿಂಪಿಕ್ ಅಸೋಸಿಯೇಷನ್ ನೀಡಿದೆ. ಒಲಿಂಪಿಕ್ ಗೇಮ್ಸ ವಿಲೇಜ್‍ಗೆ ಪ್ರವೇಶಿಸಲು ಅಂತಿಮ್ ಅವರ ಅಧಿಕೃತ ಕಾರ್ಡ್ ಅನ್ನು ಸಹೋದರಿ ನಿಶಾ ಬಳಸಿ ಸಿಕ್ಕಿಬಿದ್ದಿದ್ದಾರೆ. ಇದು ಒಲಿಂಪಿಕ್ ಆಟಗಾರರಿಗೆ ಮಾತ್ರ ನೀಡಲಾಗುವುದು, ಇದನ್ನು ಆಟಗಾರರಲ್ಲದವರು ಬಳಸುವಂತಿಲ್ಲ, ಆದರೆ ಅಂತಿಮ್ ಸಹೋದರಿ ಇದನ್ನು ಬಳಸಿರುವುದಕ್ಕೆ ಅವರು ಒಲಿಂಪಿಕ್ ನಿಯಮವನ್ನು ಉಲ್ಲಂಸಿದ್ದಾರೆ ಎಂದು ಆಟದಿಂದ ಹೊರ ಹಾಕಲಾಗಿದೆ.
ಅಂತಿಮ್ -Àಂಘಾಲ್ ಪ್ರಿ ಕ್ವಾರ್ಟರ್ -ಫೈನಲ್ನ ï ನಲ್ಲಿ ಸೋತ ನಂತರ ತನ್ನ ತರಬೇತುದಾರ ಹಾಗೂ ಸಹೋದರಿಯೊಂದಿಗೆ ತಾವು ಉಳಿದಿದ್ದ ಹೋಟೆಲïಗೆ ಹೋಗಿದ್ದಾರೆ. ಆದರೆ ಅಂತಿಮ್ -Àಂಘಾಲ್ ಗೇಮ್ಸï ವಿಲೇಜ್‍ನಲ್ಲಿ ತಮ್ಮ ಬ್ಯಾಗ್ ಬಿಟ್ಟ ಕಾರಣ, ತನ್ನ ಸಹೋದರಿ ನಿಶಾ ಅವರಿಗೆ ತಮ್ಮ ಅ„ಕೃತ ಕಾರ್ಡ್ ನೀಡಿ ಬ್ಯಾಗ್ ತರಲು ಹೇಳಿದ್ದಾರೆ. ಆದರೆ ಇದೀಗ ಇದು ಒಲಿಂಪಿಕ್ ನಿಯಮವನ್ನು ಉಲ್ಲಂಸಿದ್ದಾರೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಸಹೋದರಿಯನ್ನು ಗೇಮ್ಸï ವಿಲೇಜïಗೆ ಕಳುಹಿಸಿದರು ಕಾರಣ ಅಂತಿಮ್ -Àಂಘಾಲ್ ಅವರನ್ನು ಗಡಿಪಾರು ಮಾಡಲಾಗಿದೆ.
ಇನ್ನು ಈ ಬಗ್ಗೆ ಭಾರತೀಯ ಒಲಿಂಪಿಕ್ ಸಂಸ್ಥೆ ಮಾಹಿತಿ ನೀಡಿದ್ದು, ಶಿಸ್ತಿನ ಉಲ್ಲಂಘನೆಯನ್ನು ಫ್ರಂಚ್ ಅಧಿಕಾರಿಗಳ ಗಮನಕ್ಕೆ ತಂದ ಕಾರಣ ಅಂತಿಮ್ -Àಂಘಾಲ್ ಹಾಗೂ ಅವರ ಸಿಬ್ಬಂದಿಯನ್ನು ವಾಪಸ್ಸು ಭಾರತಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದರ ಜತೆಗೆ ಅಂತಿಮ್ -Àಂಘಾಲ್ ಸಹಾಯ ಸಿಬ್ಬಂದಿಗಳಾದ ವಿಕಾಸ್ ಮತ್ತು ಭಗತ್ ಮೇಲೆ ಪೊಲೀಸ್ ದೂರು ನೀಡಲಾಗಿದೆ. ಇವರಿಬ್ಬರು ಕುಡಿದು ಕ್ಯಾಬ್‍ನಲ್ಲಿ ಪ್ರಯಾಣಿಸಿದ್ದಾರೆ. ಹಾಗೂ ಕಾರು ಚಾಲಕನಿಗೆ ಹಣ ನೀಡುವಾಗ ಕಿರಿಕಿರಿ ಮಾಡಿದ್ದಾರೆ ಎಂದು ಪೆÇಲೀಸರಿಗೆ ಕ್ಯಾಬ್ ಡ್ರೈವರ್ ದೂರು ನೀಡಿದ್ದಾರೆ. ಆದರೆ ಅಂತಿಮ್ -Àಂಘಾಲ್ ಸಿಬ್ಬಂದಿಗಳು ಈ ಆರೋಪವನ್ನು ನಿರಕಾರಿಸಿದ್ದಾರೆ