Thursday, March 20, 2025
Homeರಾಜ್ಯಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ವಿಧೇಯಕದ ವಿರುದ್ಧ ರಾಜ್ಯಪಾಲರಿಗೆ ಯತ್ನಾಳ್‌ ಪತ್ರ

ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ವಿಧೇಯಕದ ವಿರುದ್ಧ ರಾಜ್ಯಪಾಲರಿಗೆ ಯತ್ನಾಳ್‌ ಪತ್ರ

Yatnal writes to Governor against contract reservation bill for Muslims

ವಿಜಯಪುರ,ಮಾ.19- ಕಾಮಗಾರಿಗಳಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಶೇ.4ರಷ್ಟು ಮೀಸಲಾತಿ ನೀಡುವ ವಿಧೇಯಕದ ವಿರುದ್ಧ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ವಿವಾದಾತ್ಮಕ ತಿದ್ದುಪಡಿಗೆ ಒಪ್ಪಿಗೆ ನೀಡದಂ ಮೂಲಕ ಅವರು ಮನವಿ ಮಾಡಿದ್ದಾರೆ.ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಽನಿಯಮ(ತಿದ್ದುಪಡಿ) ವಿಧೇಯಕ 2025 ಅನ್ನು ವಿಧಾನಸಭೆಯಲ್ಲಿ ಕಾನೂನು ಸಚಿವ ಎಚ್‌‍.ಕೆ.ಪಾಟೀಲ್‌ ಮಂಡಿಸಿದ್ದರು.

ಸದನದಲ್ಲಿ ವಿಧೇಯಕ ಮಂಡನೆಯಾಗುತ್ತಲೇ ಶಾಸಕ ಯತ್ನಾಳ್‌ ಪತ್ರ ಬರೆದಿದ್ದಾರೆ. ಸಂವಿಧಾನ ಬಾಹಿರವಾಗಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಒದಗಿಸುವ ಕೆಟಿಪಿಪಿ(ತಿದ್ದುಪಡಿ) ಮಸೂದೆ 2025ರ ವಿವಾದಾತ್ಮಕ ತಿದ್ದುಪಡಿಗಳಿಗೆ ಒಪ್ಪಿಗೆ ನೀಡದಂತೆ ಶಾಸಕ ಯತ್ನಾಳ್‌ ವಿನಂತಿಸಿದ್ದಾರೆ.

RELATED ARTICLES

Latest News