ಬೆಂಗಳೂರು,ಡಿ.3- ವಿಶ್ವಗುರು ಬಸವಣ್ಣನವರ ಕುರಿತ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆಗಳು ಅಜ್ಞಾನದ ಪರಮಾವಧಿ. ಬಸವ ತತ್ವ ಅನುಯಾಯಿಗಳಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ರಾಷ್ಟ್ರೀಯ ಬಸವದಳ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪಾಧ್ಯಕ್ಷ ಪರಮಪೂಜ್ಯ ಸದ್ಗುರು ಶ್ರೀ ಬಸವ ಯೋಗ ಸ್ವಾಮೀಜಿ, ವಿಶ್ವಗುರು ಬಸವಣ್ಣನವರು ಚಿಕ್ಕ ವಯಸ್ಸಿನಿಂದಲೂ ಧೈರ್ಯಶಾಲಿಯೂ, ಮಹಾನ್ ಸಾಹಸಿಯೂ, ಜ್ಞಾನಿಯೂ ಆಗಿದ್ದರು. ಸರ್ವ ಜೀವರಾಶಿಗಳ ಸಮಾನತೆಗಾಗಿಅಧಿಕಾರ ಶಾಹಿಯಲ್ಲಿದ್ದ ಪಟ್ಟಭದ್ರ ಹಾಗೂ ಸಂಪ್ರದಾಯವಾದಿಗಳ ವಿರುದ್ಧ ಕ್ರಾಂತಿಯನ್ನೇ ಮಾಡಿದವರು. ತಮ ಉಪನಯನದ ಸಂದರ್ಭದಲ್ಲಿ ಅಕ್ಕನಿಗೂ ಉಪನಯನ ಮಾಡಬೇಕು ಎಂದು ಧೈರ್ಯದಿಂದ ಒತ್ತಾಯ ಮಾಡಿದ್ದರು.
ಇದನ್ನು ಒಪ್ಪದ ತಂದೆ-ತಾಯಿ, ಬಂಧು-ಬಳಗವನ್ನು ಬಿಟ್ಟು ಬಸವಣ್ಣನವರು ಒಬ್ಬರೆ ಕಾಡು-ಮೇಡುಗಳನ್ನು ದಾಟಿ ಧೈರ್ಯದಿಂದ ಕೂಡಲಸಂಗಮಕ್ಕೆ ಬರುತ್ತಾರೆ. ತಮ ಅಸಾಮಾನ್ಯ ಬುದ್ಧಿ, ಜ್ಞಾನ, ಧೈರ್ಯದಿಂದ ಸಮಾಜದಲ್ಲಿದ್ದ ಜಾತಿ, ವರ್ಣ, ವರ್ಗ, ಲಿಂಗ ಭೇದಗಳನ್ನು ತೊಡೆದು ಹಾಕಲು ಏಕಪಕ್ಷೀಯವಾಗಿ ಹೋರಾಟಗಳನ್ನು ಮಾಡುತ್ತಲೇ ತಮ 21ನೇ ವಯಸ್ಸಿನಲ್ಲಿ ನಿರಾಕಾರ ಪರಮಾತನ ಸಾಕ್ಷಾತ್ಕಾರವನ್ನು ಪಡೆಯುತ್ತಾರೆ.
ಪತ್ರಿಕಾ ಗೋಷ್ಠಿಯಲ್ಲಿ ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷ ಕೆ. ವೀರೇಶ, ಲಿಂಗಾಯತ ಧರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಈಶ್ವರ್ ಲಿಂಗಾಯತ, ಕೆ.ಜಿ.ಜಗದೀಶ, ಪ್ರಕಾಶ ಜಿರ್ಗೆ ಉಪಸ್ಥಿತರಿದ್ದರು.