ಬೆಂಗಳೂರು, ಅ, 24-ಭಾರತದ ಅತ್ಯಂತ ದೊಡ್ಡ ಕಾರ್ಪೊರೇಟ್ ಟ್ರಾವೆಲ್ ಸೇವೆಗಳ ಪೂರೈಕೆದಾರ ಮತ್ತು ಮುಂಚೂಣಿಯ ಆನ್ಲೈನ್ ಟ್ರಾವೆಲ್ ಕಂಪನಿ ಯಾತ್ರಾ ಆನ್ಲೈನ್ ಸಂಸ್ಥೆ ಬೆಂಗಳೂರಿನಲ್ಲಿ ತನ್ನ ಮೊದಲ -ಫ್ರಾಂಚೈಸಿಯನ್ನು ಉದ್ಘಾಟಿಸಿದೆ.
ಬೆಂಗಳೂರಿನ ಅತ್ಯಂತ ಚಟುವಟಿಕೆಯ ತಾಣ ಜಯನಗರದಲ್ಲಿರುವ ಈ ಮಳಿಗೆಯು ದಕ್ಷಿಣದ ರಾಜ್ಯಕ್ಕೆ ತನ್ನ ಪ್ರವೇಶವನ್ನು ಪಡೆದಿದ್ದು ಆನ್ಲೈನ್ಟ್ರಾವೆಲ್ ಅನ್ನು ವೈಯಕ್ತಿಕಗೊಳಿಸಿದ ಸೇವೆಯೊಂದಿಗೆ ಸಂಯೋಜಿಸಿದ್ದು ನಗರದ ವ್ಯಾಪಾರ ಮತ್ತು ವಿರಾಮದ ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ.
ಯಾತ್ರಾ ಡಿಜಿಟಲ್ ಸರಳತೆ ಮತ್ತು ಮಾನವ ಸಂವಹನ ಎರಡನ್ನೂ ಬಯಸುವ ಪ್ರಯಾಣಿಕರ ವೃದ್ಧಿಸುತ್ತಿರುವ ಪ್ರವೃತ್ತಿಯನ್ನು ಬಳಸಿಕೊಳ್ಳಲಿದೆ. ಡಿಜಿಟಲ್ ಸರಳತೆಯನ್ನು ಮುಖಾಮುಖಿ ಪರಿಣಿತಿಯೊಂದಿಗೆ ಹೊಂದಿರುವ ಯಾತ್ರಾದ ಮಳಿಗೆಯು ಬೆಂಗಳೂರಿನ ಒತ್ತಡದ ವೃತ್ತಿಪರರಿಂದ ತಂತ್ರಜ್ಞಾನದ ಉತ್ಸಾಹಿಗಳು ಮತ್ತು ಕುಟುಂಬಗಳಿಗೆ ನೇರ ಪ್ರವೇಶ ಪಡೆಯಲು, ಅವರ ಯೋಜನೆಗಳನ್ನು ಚರ್ಚಿಸಲು ಮತ್ತು ವಿಮಾನಗಳ ಬುಕಿಂಗ್ ಗಳಿಂದ ತಮಗೆ ಬೇಕಾದ ಹಾಲಿಡೇ ಪ್ಯಾಕೇಜ್ ಗಳವರೆಗೆ ಅವರ ಎಲ್ಲ ಪ್ರಯಾಣದ ಅಗತ್ಯಗಳಿಗೆ ಪರಿಣಿತರ ಮಾರ್ಗದರ್ಶನ ಪಡೆಯಲು ಅವಕಾಶ ಕಲ್ಪಿಸುತ್ತದೆ.