ಬೆಂಗಳೂರು, ಆ.11- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ನಿನ್ನೆಯಷ್ಟೇ ಲೋಕಾರ್ಪಣೆಗೊಂಡಿರುವ ಹಳದಿ ಮಾರ್ಗದಲ್ಲಿ ಇಂದಿನಿಂದ ಮೆಟ್ರೋ ಸಂಚಾರ ಪ್ರಾರಂಭವಾಗಿದೆ.
ಆರ್ ವಿ ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗಬೆಳಗ್ಗೆ 6.30ರಿಂದ ಮೆಟ್ರೋ ಸಂಚಾರ ಶುರುವಾಗಿದ್ದು, ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 6.30ಕ್ಕೆ ಮೆಟ್ರೋ ಸಂಚಾರ ಆರಂಭವಾಗಲಿದೆ. ಪ್ರತೀ 25 ನಿಮಿಷಕ್ಕೊಮ್ಮೆ ಮೆಟ್ರೋ ಸಂಚಾರವಿರಲಿದೆ. ಪ್ರತಿ ನಿಲ್ದಾಣ ದಲ್ಲಿ ನಿಲುಗಡೆ ಸಹಿತ ಮೊದಲ ನಿಲ್ದಾಣದಿಂದಕೊನೆ
ನಿಲ್ದಾಣ ತಲುಪಲು 35 ನಿಮಿಷ ಬೇಕಾಗುತ್ತದೆ.
ಯೆಲ್ಲೋ ಲೈನ್‌ನಲ್ಲಿ ಒಟ್ಟು 16 ನಿಲ್ದಾಣಗಳಿವೆ. ಇದರಲ್ಲಿ ಎರಡು ಟರ್ಮಿನಲ್‌ಗಳು ಸೇರಿವೆ. ಡೆಲಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 10.42 ಕ್ಕೆ ಸಂಚರಿಸಲಿದೆ. ಆರ್.ವಿ.ರೋಡ್ ಇಂಟರ್‌ಚೇಂಜ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 11.55 ಕ್ಕೆ ಕಾರ್ಯಾಚರಣೆ ನಡೆಸಲಿದೆ.
ಬೆಳಿಗ್ಗೆ 6.30 ರಿಂದ ಡೆಲ್ಮಾ ಎಲೆಕ್ಟ್ರಾನಿಕ್‌್ಸನಿಂದ, ಬೊಮ್ಮಸಂದ್ರದಿಂದ ಬೆಳಿಗ್ಗೆ 7.10 ರಿಂದ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದ ರೈಲು ಸಂಚಾರ ಮಾಡಲಿದೆ.ರಾತ್ರಿ 10.00 ಗಂಟೆಯ ನಂತರ ರೈಲು ಸಂಚಾರದ ಅವಧಿ ಕಡಿಮೆಯಾಗಿರಲಿದೆ.
ಭಾನುವಾರಗಳಲ್ಲಿ ರೈಲು ಸೇವೆಗಳು ಬೆಳಿಗೆ 6.30 ಬದಲಾಗಿ 7.00 ಕ್ಕೆ ಪ್ರಾರಂಭವಾಗಲಿದೆ. ಹಳದಿ ಮಾರ್ಗದ ಟರ್ಮಿನಲ್ ನಿಲ್ದಾಣಗಳ ನಡುವಿನ ಪ್ರಯಾಣದ ದರ 60 ರೂ.ಗಳಾಗಿರುತ್ತವೆ.
ಟೋಕನ್‌ಗಳು, ಕಾರ್ಡ್‌ಗಳು, ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್‌ಗಳು, ಟಿಕೆಟ್‌ಗಳು ಎಂದಿನಂತೆಯೇ ಲಭ್ಯವಿರಲಿದೆ.
- ಕೆ.ಎನ್.ರಾಜಣ್ಣ ತಲೆದಂಡ : ಸಚಿವ ಸ್ಥಾನದ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು
- ಸಚಿವ ಶಿವರಾಜ್ ತಂಗಡಗಿ ವಿರುದ್ಧ ಸ್ಪೀಕರ್ ಖಾದರ್ ಗರಂ
- ಸ್ಮಾರ್ಟ್ ಮೀಟರ್ ಅವ್ಯವಹಾರ : ಮೇಲ್ಮನೆಯಲ್ಲಿ ಗದ್ದಲ-ಕೋಲಾಹಲ
- ಗೋ ಹತ್ಯೆಗೈದು ವಿಕೃತಿ ಮೆರೆದ ಕಿಡಿಗೇಡಿಗಳು
- ಧರ್ಮಸ್ಥಳ ಎಸ್ಐಟಿ ತನಿಖೆ ಲೆಪ್ಟಿಸ್ಟ್ ಗಳ ವ್ಯವಸ್ಥಿತ ಷಡ್ಯಂತ್ರ : ಪ್ರಹ್ಲಾದ ಜೋಶಿ