Wednesday, April 2, 2025
Homeರಾಷ್ಟ್ರೀಯ | Nationalಹಿಂದೂಗಳು ಸುರಕ್ಷಿತವಾಗಿದ್ದರೆ ಮಾತ್ರ ಮುಸ್ಲಿಮರು ಸುರಕ್ಷಿತ : ಯೋಗಿ

ಹಿಂದೂಗಳು ಸುರಕ್ಷಿತವಾಗಿದ್ದರೆ ಮಾತ್ರ ಮುಸ್ಲಿಮರು ಸುರಕ್ಷಿತ : ಯೋಗಿ

Yogi Adityanath: Muslims in India safe only if Hindus are safe

ಲಖ್ನೋ,ಮಾ.26- ಉತ್ತರ ಪ್ರದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸುರಕ್ಷಿತವಾಗಿರುತ್ತಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ ಎಲ್ಲಾ ಧರ್ಮದ ಜನರು ಸುರಕ್ಷಿತವಾಗಿದ್ದಾರೆ. ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸೇಫಾಗಿರುತ್ತಾರೆ.

100 ಹಿಂದೂ ಕುಟುಂಬಗಳ ನಡುವೆ ಒಂದು ಮುಸ್ಲಿಂ ಕುಟುಂಬ ಭದ್ರವಾಗಿದೆ ಎಂದು ತಿಳಿಸಿದರು.ಉತ್ತರಪ್ರದೇಶದಲ್ಲಿ ಎಲ್ಲಾ ಧರ್ಮದ ಜನ ಸುರಕ್ಷಿತವಾಗಿದ್ದಾರೆ. ಅವರಿಗೆ ಎಲ್ಲಾ ಧಾರ್ಮಿಕ ಪದ್ಧತಿಗಳನ್ನು ಆಚರಿಸುವ ಸ್ವಾತಂತ್ರ್ಯವಿದೆ. 100 ಹಿಂದೂ ಕುಟುಂಬಗಳ ನಡುವೆ ಒಂದು ಮುಸ್ಲಿಂ ಕುಟುಂಬ ಸುರಕ್ಷಿತವಾಗೇ ಇರುತ್ತದೆ.

ಆದರೆ 100 ಮುಸ್ಲಿಂ ಕುಟುಂಬಗಳ ನಡುವೆ 50 ಹಿಂದೂ ಕುಟುಂಬಗಳಿದ್ದರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದರು. ಹಿಂದೂ ಆಡಳಿತಗಾರರು ಇತರರ ಮೇಲೆ ಆಧಿಪತ್ಯ ಸ್ಥಾಪಿಸಿದ ಉದಾಹರಣೆ ವಿಶ್ವ ಇತಿಹಾಸದಲ್ಲಿ ಇಲ್ಲ. ಇದಕ್ಕೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವೇ ಕಾರಣ, ಇದಕ್ಕೂ ಮುನ್ನ ಪಾಕಿಸ್ತಾನದಲ್ಲೂ ಈ ಉದಾಹರಣೆ ಇತ್ತು. ಅಫ್ಘಾನಿಸ್ತಾನದಲ್ಲೂ ಏನಾಯ್ತು ಅನ್ನೋದು ನಮಗೆ ಗೊತ್ತಿದೆ ಎಂದು ಹೇಳಿದರು.

2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಒಂದೇ ಒಂದು ಕೋಮುಗಲಭೆ ನಡೆದಿಲ್ಲ ಎಂದ ಅವರು, ಉತ್ತರಪ್ರದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸುರಕ್ಷಿತ. ನಾನು ಒಬ್ಬ ಸಾಮಾನ್ಯ ಪ್ರಜೆ, ಉತ್ತರ ಪ್ರದೇಶದ ಪ್ರಜೆ. ಎಲ್ಲರ ಸಂತೋಷಕ್ಕಾಗಿ ಹಾರೈಸುವ ಯೋಗಿ ನಾನು. ಎಲ್ಲರ ಬೆಂಬಲದಿಂದ ಅಭಿವೃದ್ಧಿ ಸಾಧ್ಯ ಅಂತ ನಂಬುವವನು ನಾನು. ಸನಾತನ ಧರ್ಮವು ವಿಶ್ವದ ಅತ್ಯಂತ ಪುರಾತನ ಧರ್ಮವಾಗಿದೆ ಎಂದು ಒತ್ತಿ ಹೇಳಿದರು.

ಉತ್ತರಪ್ರದೇಶದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತರು. ಹಿಂದೂಗಳು ಸುರಕ್ಷಿತವಾಗಿದ್ದರೆ, ಅವರು ಸಹ ಸುರಕ್ಷಿತವಾಗಿರುತ್ತಾರೆ. 2017 ಕ್ಕಿಂತ ಮೊದಲು ಯುಪಿಯಲ್ಲಿ ಗಲಭೆಗಳಾಗಿದ್ದರೆ, ಹಿಂದೂ ಅಂಗಡಿಗಳು ಉರಿಯುತ್ತಿದ್ದರೆ, ಮುಸ್ಲಿಂ ಅಂಗಡಿಗಳು ಸಹ ಉರಿಯುತ್ತಿದ್ದವು. ಹಿಂದೂ ಮನೆಗಳು ಉರಿಯುತ್ತಿದ್ದರೆ, ಮುಸ್ಲಿಂ ಮನೆಗಳು ಸಹ ಉರಿಯುತ್ತಿದ್ದವು. 2017ರ ನಂತರ ಗಲಭೆಗಳು ನಿಂತುಹೋದವು. ರಾಜ್ಯದ ಅಭಿವೃದ್ಧಿಯಲ್ಲಿ ನನಗೆ ನಂಬಿಕೆ ಇದೆ ಎಂದು ಅವರು ಹೇಳಿದರು.

ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ:
ಸಂದರ್ಶನದ ವೇಳೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ, ಒಂದು ಭಾರತ ಶ್ರೇಷ್ಠ ಭಾರತ ಆಗಬೇಕಲ್ಲವೇ? ಅವರು ದಶಕಗಳಿಂದ ಏನು ಮಾಡುತ್ತಿದ್ದರು? ಅವರು ಯಾಕೆ ರಾಮ ಮಂದಿರ ನಿರ್ಮಾಣ ಮಾಡಲಿಲ್ಲ? ರಾಹುಲ್‌ ಗಾಂಧಿ ತನ್ನ ಅಜ್ಜ, ಅಜ್ಜಿ ಮತ್ತು ತಂದೆಯನ್ನು ಕೇಳಬೇಕಿತ್ತು? ಆ ಸಮಯದಲ್ಲಿ ಅವರು ಅದನ್ನು ಏಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದರು.

ಅವರು ಯಾವಾಗಲೂ ಅಯೋಧ್ಯೆ ವಿವಾದವನ್ನು ವಿವಾದವಾಗಿಯೇ ಉಳಿಯಲು ಬಯಸುತ್ತಿದ್ದರು. ತಮ ಜೀವನದುದ್ದಕ್ಕೂ ಕಾಶಿಯ ಕಿರಿದಾದ ಬೀದಿಗಳಲ್ಲಿ ಗಾಂಧೀಜಿಯವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ 1916ರಲ್ಲಿ ಗಾಂಧೀಜಿ ಕಾಶಿಯ ಕಿರಿದಾದ ಬೀದಿಗಳ ಬಗ್ಗೆ ಕಠಿಣವಾದ ಟೀಕೆಯನ್ನು ಮಾಡಿದ್ದರು ಎಂಬುದನ್ನು ತಿಳಿಯಬೇಕು ಎಂದು ನುಡಿದರು.

ಕಾಂಗ್ರೆಸ್‌‍ ನಾಯಕರ ಭಾರತ್‌ ಜೋಡೋ ರಾಷ್ಟ್ರವ್ಯಾಪಿ ಅಭಿಯಾನ ವಾಸ್ತವವಾಗಿ ಭಾರತ್‌ ತೋಡೋ ಅಭಿಯಾನ. ದೇಶದ ಹೊರಗೆ ಹೋಗಿ ಭಾರತವನ್ನು ಟೀಕಿಸುತ್ತಾರೆ ಎಂದು ಅವರು ಕಿಡಿಕಾರಿದರು.

ಸನಾತನ ಧರ್ಮದ ಕುರಿತು ಮಾತನಾಡಿದ ಯೋಗಿ ಆದಿತ್ಯನಾಥ್‌, ಮುಖ್ಯಮಂತ್ರಿ, ಸನಾತನ ಧರ್ಮವು ವಿಶ್ವದ ಅತ್ಯಂತ ಪ್ರಾಚೀನ ಧರ್ಮ ಮತ್ತು ಸಂಸ್ಕೃತಿ ಎಂದು ಬಣ್ಣಿಸಿದರು.
ಸನಾತನ ಧರ್ಮದ ಅನುಯಾಯಿಗಳು ಎಂದಿಗೂ ಇತರರನ್ನು ನಂಬಿಸಿ ಮತಾಂತರ ಮಾಡಿಲ್ಲ. ಆದರೆ ಪ್ರತಿಯಾಗಿ ಅವರು ಏನು ಪಡೆದರು ಪ್ರತಿಯಾಗಿ ಅವರು ಏನು ಗಳಿಸಿದರು? ಹಿಂದೂ ಆಡಳಿತಗಾರರು ತಮ ಸ್ವಂತ ಶಕ್ತಿಯನ್ನು ಬಳಸಿಕೊಂಡು ಇತರರ ಮೇಲೆ ಪ್ರಭುತ್ವ ಸ್ಥಾಪಿಸಿದ ಉದಾಹರಣೆ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಅಂತಹ ನಿದರ್ಶನಗಳು ಅಸ್ತಿತ್ವದಲ್ಲಿಲ್ಲ ಎಂದು ಹೇಳಿದರು.

ಇತ್ತೀಚೆಗೆ ನಡೆದ ಸಂಭಾಲ್‌ ಕುರಿತು ಪ್ರತಿಕ್ರಿಯಿಸಿದ ಸಿಎಂ , ಸಂಭಾಲ್‌ನಲ್ಲಿ ಏನು ನಡೆದಿದೆ ಎನ್ನುವುದು ಎಲ್ಲರಿಗೂ ತಿಳಿದಿರುವುದು. ಶಾಹಿ ಜಾಮಾ ಮಸೀದಿಯನ್ನು ಪ್ರಾಚೀನ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ. ಹಿಂದೂ ದೇವಾಲಯಗಳನ್ನು ನಾಶಮಾಡಿದ ನಂತರ ನಿರ್ಮಿಸಲಾದ ಪೂಜಾ ಸ್ಥಳಗಳನ್ನು ದೇವರು ಸ್ವೀಕರಿಸುವುದಿಲ್ಲ ಎಂದು ಇಸ್ಲಾಂ ಹೇಳುತ್ತದೆ. ಹಾಗಾದರೆ ಅವುಗಳನ್ನು ಏಕೆ ನಿರ್ಮಿಸಲಾಯಿತು? ನ್ಯಾಯಾಲಯದ ತೀರ್ಪು ಬಂದ ನಂತರ ಅಲ್ಲಿ ದೇವಾಲಯ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News