Thursday, November 21, 2024
Homeರಾಷ್ಟ್ರೀಯ | Nationalದೇಶದಲ್ಲಿ ಜನಪ್ರಿಯ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ ಯೋಗಿ ಆದಿತ್ಯನಾಥ್

ದೇಶದಲ್ಲಿ ಜನಪ್ರಿಯ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ ಯೋಗಿ ಆದಿತ್ಯನಾಥ್

ನವದೆಹಲಿ,ಫೆ.10- ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಸ್ತುತ ದೇಶದಲ್ಲಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ಇಂಡಿಯಾ ಟು ಡೇ, ಸೀ ವೋಟರ್ ಮೂಡ್ ಆಫ್ ನೇಷನ್ ಸಮೀಕ್ಷೆ ಪ್ರಕಾರ ಯೋಗಿ ಆದಿತ್ಯನಾಥ್ ಅವರು ಜನಪ್ರಿಯ ಹಾಗೂ ಪ್ರಭಾವಿ ಮುಖ್ಯಮಂತ್ರಿಯಾಗಿದ್ದಾರೆ. ಜಗತ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದವರು. ಪ್ರಧಾನಿ ನರೇಂದ್ರ ಮೋದಿ ಅವರು 95.2 ಮಿಲಿಯನ್ ಟ್ವಿಟರ್ ಫಾಲೋವರ್ಸ್‍ಗಳನ್ನು ಹೊಂದಿದ್ದರೆ, ಕೇಂದ್ರ ಗೃಹಸಚಿವ ಅಮಿತ್ ಷಾ 34.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಯೋಗಿ ಆದಿತ್ಯನಾಥ್ ಅವರು 27.4 ಅನುಯಾಯಿಗಳೊಂದಿಗೆ ಪ್ರಭಾವಿ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ.

ಅವರ ಜನಪ್ರಿಯತೆ ಸಾಮಾಜಿಕ ಮಾಧ್ಯಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಂಡಿಯಾ ಟು ಡೇ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಸತತ ಎಂಟು ಬಾರಿ ಅವರು ಅತ್ಯಂತ ಪ್ರಭಾವಿ ಮುಖ್ಯಮಂತ್ರಿ ಎಂಬುದು ಕಂಡುಬಂದಿದೆ. 30 ಮುಖ್ಯಮಂತ್ರಿಗಳಲ್ಲಿ ಆದಿತ್ಯನಾಥ್ ಅವರು ಅತ್ಯುತ್ತಮ ಎಂಬ ರೇಟ್ ಬಂದಿದೆ. ಅವರ ಜನಪ್ರಿಯತೆಯಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ.

ಸಹಜಸ್ಥಿತಿಯತ್ತ ಹಿಂಸಾಚಾರ ಪೀಡಿತ ಉತ್ತರಾಖಂಡ

ಕಳೆದ ಆಗಸ್ಟ್ 2023ರಲ್ಲಿ ಈ ಕುರಿತು ಪ್ರತಿಕ್ರಿಯಿಸಿದ್ದ ಶೇ.46.3ರಷ್ಟು ಜನ ಯೋಗಿ ಅವರನ್ನು ಅತ್ಯುತ್ತಮ ಮುಖ್ಯಮಂತ್ರಿ ಎಂದು ಬಣ್ಣಿಸಿದ್ದಾರೆ. ಇದರಿಂದ ಅವರ ಸ್ಥಾನ ಮತ್ತಷ್ಟು ಸದೃಢವಾಗಿದೆ. ದೆಹಲಿಯಲ್ಲಿ ಕೇಜ್ರಿವಾಲ್ ಅವರ ರೇಟಿಂಗ್ 6 ತಿಂಗಳಲ್ಲಿ ಶೇ.58ರಿಂದ 36ಕ್ಕೆ ಕುಸಿದಿದೆ.

ಎಂ.ಕೆ.ಸ್ಟಾಲಿನ್ ಅವರ ರೇಟಿಂಗ್ ಶೇ.48ರಿಂದ 36ಕ್ಕೆ ಕುಸಿದಿದೆ. ನವೀನ್ ಪಟ್ನಾಯಕ್ ಅವರು ತವರು ರಾಜ್ಯದಲ್ಲಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ. ಪುಷ್ಕರ್ ಸಿಂಗ್ ಧಾಮಿ ಅವರು ಟಾಪ್ 10ರಲ್ಲಿದ್ದಾರೆ. ಅರವಿಂದ್ ಕೇಜ್ರವಾಲ್ ಅವರನ್ನು ಕೇವಲ 19.6 ಪ್ರತಿಶತ ಜನ ಬೆಂಬಲಿಸಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

RELATED ARTICLES

Latest News