Tuesday, February 25, 2025
Homeರಾಷ್ಟ್ರೀಯ | Nationalಮಹಾಕುಂಭವನ್ನು ಟೀಕಿಸಿದವರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ಕೊಟ್ಟ ಯೋಗಿ

ಮಹಾಕುಂಭವನ್ನು ಟೀಕಿಸಿದವರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ಕೊಟ್ಟ ಯೋಗಿ

Yogi gives a befitting reply to those who criticized the Mahakumbh

ಲಖ್ಯೋ, ಫೆ.25- ಇಲ್ಲಿನ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವವರ ಬಗ್ಗೆ ಲಘುವಾಗಿ ಟೀಕೆ ಮಾಡಿರುವ ವಿಪಕ್ಷಗಳ ಆರೋಪಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಟ್ಟಿನೋಡಿಕೊಳ್ಳುವ ಹಾಗೆ ತಿರುಗೇಟು ನೀಡಿದ್ದಾರೆ.

ಪ್ರಸ್ತುತ ಉತ್ತರಪ್ರದೇಶದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಅಧಿಕೃತ ವಿರೋಧ ಪಕ್ಷ ಸಮಾಜವಾದಿ ಪಕ್ಷ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಆರೋಪಕ್ಕೆ ಯೋಗಿ ಆದಿತ್ಯನಾಥ್ ತಮ್ಮದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.

ತಮ್ಮ ಮಾತಿನುದ್ದಕ್ಕೂ ಸನಾತನ ಧರ್ಮ, ಹಿಂದೂ ಆಚಾರವಿಚಾರ, ನಂಬಿಕೆ ಹಾಗೂ ಪ್ರಯಾಗ್‌ರಾಜ್‌ನ ಕುಂಭಮೇಳದ ಬಗ್ಗೆಯೂ ಟೀಕೆ ಮಾಡುತ್ತಿರುವವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.

ಯದ್ಭಾವಂ ತದ್ಭವತಿ ಎನ್ನುವ ಉಕ್ತಿಯಂತೆ ಕುಂಭಮೇಳದಲ್ಲಿ ಯಾರ್ಯಾರಿಗೆ ಏನೇನೆಲ್ಲಾ ಕಂಡಿತು, ದೊರಕಿತು ಎಂಬ ಪ್ರಶ್ನೆಗೆ ಯೋಗಿ ಆದಿತ್ಯನಾಥ್ ತೀಕ್ಷ್ಮವಾಗಿ ಪ್ರತ್ಯುತ್ತರ ನೀಡಿದ್ದಾರೆ.
ಕುಂಭಮೇಳದಲ್ಲಿ ರಣಹದ್ದುಗಳಿಗೆ ಶವಗಳೇ ಕಂಡವು. ಹಂದಿಗಳಿಗೆ ಬರೀ ಹೊಲಸು ಕಾಣಿಸಿತು. ಆಸ್ತಿಕರು ಆಶೀರ್ವಾದ ಪಡೆದರು. ಭಕ್ತರಿಗೆ ದೇವ ದರ್ಶನವಾಯಿತು, ವರ್ತಕರಿಗೆ ವ್ಯಾಪಾರ ದೊರೆಯಿತು, ಬಡವರೆಗೆ ಬಾಳು ದೊರೆಯಿತು, ದಯಾಳುಗಳಿಗೆ ಕರುಣೆ ಪ್ರಾಪ್ತವಾಯಿತು, ಕೋಟ್ಯಾಂತರ ಭಕ್ತರಿಗೆ ಸ್ವಚ್ಛತೆ, ಸುವ್ಯವಸ್ಥೆ ಕಾಣಿಸಿತು. ಹೀಗೆ ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ ಸಾಗುತಿದೆ ಮಹಾಕುಂಭ ಮೇಳ ಎಂದು ತಿರುಗೇಟು ಕೊಟ್ಟಿದ್ದಾರೆ.

RELATED ARTICLES

Latest News