ಬೇಲೂರು,ಅ.28-ಕ್ಷುಲ್ಲಕ ವಿಚಾರಕ್ಕೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಮುಖದಲ್ಲೆ ಮಚ್ಚಿನಿಂದ ಕೊಚ್ಚಿ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಗುರಪ್ಪಗೌಡರ ಬೀದಿಯ ನಿವಾಸಿ ಗಿರೀಶ್ (28) ಕೊಲೆಯಾದ ಯುವಕ.
ಬಲ್ಲ ಮೂಲಗಳ ಪ್ರಕಾರ ಕೆಲವರ ನಡುವೆ ಯುವತಿಯೊಬ್ಬಳ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ.ಈ ಸಂದರ್ಭದಲ್ಲಿ ಎಸ್.ಸೂರಾಪುರ ಗ್ರಾಮದ ಶ್ರೀನಿವಾಸನನ್ನುಅವಾಚ್ಯ ಶಬ್ದಗಳಿಂದ ಗಿರೀಶ ನಿಂದಿಸಿ ಹೊಡೆದಿದ್ದನೆಂಬ ಮಾತು ಕೇಳಿ ಬಂದಿದೆ.
ನಿನ್ನೆ ಬೆಳಗ್ಗೆ ಶ್ರೀನಿವಾಸ ಬೇಲೂರಿಗೆ ಬಂದ ಸಂದರ್ಭದಲ್ಲೂ ಗಿರೀಶ್ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ರೊಚ್ಚಿಗೆದ್ದ ಶ್ರೀನಿವಾಸ್ಅಲಿಯಾಸ್ ಕೋಳಿ ಸೀನ ಬಸ್ ನಿಲ್ದಾಣದ ಶೌಚಗೃಹಕ್ಕೆ ಗಿರೀಶ್ ಹೋಗಿರುವುದನ್ನು ಗಮನಿಸಿ ಆತ ಬರುವುದನ್ನೇ ಕಾದು ನಿಂತು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಮುಖದಲ್ಲೆ ಮಚ್ಚಿನಿಂದಕೊಚ್ಚಿ ಬರ್ಬರವಾಗಿ ಆತನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದಗಿರೀಶ್ನನ್ನುಸ್ಥಳೀಯರು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಆತ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಹಾಗೂ ಇನ್್ಸಪೆಕ್ಟರ್ ರೇವಣ್ಣ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಬೇಲೂರು ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕೆಲವೇ ಗಂಟೆಗಳಲ್ಲಿ ಆರೋಪಿಯ ಜಾಡುಹಿಡಿದು ಬಂಧಿಸಿ ಕ್ರಮಕೈಗೊಂಡಿದ್ದಾರೆ.
