Monday, September 1, 2025
Homeರಾಷ್ಟ್ರೀಯ | Nationalಫೇಸ್‌‍ಬುಕ್‌ ಗೆಳೆಯನ ಕಿರುಕುಳಕ್ಕೆ ನೊಂದು ಯುವತಿ ಆತ್ಮಹತ್ಯೆ

ಫೇಸ್‌‍ಬುಕ್‌ ಗೆಳೆಯನ ಕಿರುಕುಳಕ್ಕೆ ನೊಂದು ಯುವತಿ ಆತ್ಮಹತ್ಯೆ

young woman commits suicide after being harassed by a Facebook friend

ಥಾನೆ(ಮಹಾರಾಷ್ಟ್ರ)ಸೆ.1- ಫೇಸ್‌‍ಬುಕ್‌ನಲ್ಲಿ ಪರಿಚವಾಗಿದ್ದ ಗೆಳೆಯನಿಗೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಲೇ ಯುವತಿಯೊಬ್ಬಳ್ಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ಟಿಟ್ವಾಲಾ ಪ್ರದೇಶದಲ್ಲಿ ನಡೆದಿದೆ.

ಮೃತ ಯುವತಿ ಹಾಗೂ ವ್ಯಕ್ತಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚವಾವಾಗಿ ಸ್ನೇಹಿತರಾಗಿ ಸಂಬಂಧ ಬೆಳೆಸಿಕೊಂಡಿದ್ದರು. ಆತ ಯುವತಿಯನ್ನು ನಂಬಿಸಿ ಆಭರಣಗಳನ್ನು ತೆಗೆದುಕೊಂಡಿದ್ದನು. ಹಿಂತಿರುಗಿಸುವಂತೆ ಕೇಳಿದಾಗ, ಆಕೆಯ ಖಾಸಗಿ ವೀಡಿಯೊಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ.

ವಂಚಕನ ಕಿರುಕುಳವನ್ನು ಸಹಿಸಲಾಗದೆ ಯುವತಿ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾಳೆ.ಮೃತ ಯುವತಿಯ ಕುಟುಂಬವು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆಯ ಕುಟುಂಬವು ಇದೇ ರೀತಿ ಹಲವು ಹುಡುಗಿಯರನ್ನು ವಂಚಿಸಲಾಗಿದೆ. ತಮ ಮಗಳ ಹೆಸರನ್ನು ಬಹಿರಂಗಗೊಳಿಸದಂತೆ ಕೋರಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್‌ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ. ಆದರೆ ಶವಪರೀಕ್ಷೆ ನಡೆಸದೆ ಮಹಿಳೆಯ ಅಂತ್ಯಕ್ರಿಯೆ ನಡೆಸಲಾಗಿದೆ. ಘಟನೆ ಸಂಬಂಧ ಇಲ್ಲಿಯವರೆಗೆ ಯಾವುದೇ ಎಫ್‌ಐಆರ್‌ ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News