ಬೆಂಗಳೂರು,ಅ.27– ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೃಷ್ಣ ಗಾರ್ಡನ್, 1ನೇ ಕ್ರಾಸ್‌ನ ಡಿ ಬ್ಲಾಕ್‌ನ ನಿವಾಸಿ ಅರ್ಪಿತ (24) ಆತಹತ್ಯೆ ಮಾಡಿಕೊಂಡಿರುವ ಯುವತಿ.
ಮೂಲತಃ ಮಂಡ್ಯದ ಮದ್ದೂರು ತಾಲ್ಲೂಕು ಕಾಡುಕೊತ್ತನಹಳ್ಳಿಯ ರೈತ ಪರಮೇಶ್ ಎಂಬುವರ ಪುತ್ರಿಯಾದ ಅರ್ಪಿತ ಕೃಷ್ಣಗಾರ್ಡನ್‌ನಲ್ಲಿ ಚಿಕ್ಕಪ್ಪ ಬಸವರಾಜ್ ಅವರ ಮನೆಯಲ್ಲಿ ವಾಸವಿದ್ದು, ದಯಾನಂದ ಡೆಂಟಲ್ ಕಾಲೇಜು ಆಸ್ಪತ್ರೆಯಲ್ಲಿ ಚೇರ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನ ಚಿಕ್ಕಮ ಸಿಟಿ ಮಾರ್ಕೆಟ್‌ಗೆ ಹೋಗಲು ಅರ್ಪಿತ ಅವರನ್ನು ಕರೆದಿದ್ದಾರೆ. ಆದರೆ ನನಗೆ ಹುಷಾರಿಲ್ಲ. ಮನೆಯಲ್ಲೇ ಇರುತ್ತೇನೆಂದು ಅರ್ಪಿತ ಹೇಳಿ ಕಳುಹಿಸಿದ್ದಾರೆ.
ಬಳಿಕ ಮನೆಯಲ್ಲಿ ಯಾರು ಇಲ್ಲದಿದ್ದಾಗ ಕೋಣೆಯಲ್ಲಿ ಕಬ್ಬಿಣದ ಕೊಂಡಿಗೆ ವೇಲ್‌ನಿಂದ ನೇಣುಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ. ಮನೆಗೆ ಚಿಕ್ಕಮ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಹಲವು ದಿನಗಳಿಂದ ಅರ್ಪಿತ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಇದರಿಂದ ಆತಹತ್ಯೆ ಮಾಡಿಕೊಂಡಿರಬಹುದೆಂದು ಕುಟುಂಬದವರು ತಿಳಿಸಿದ್ದಾರೆ. ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
