Monday, January 6, 2025
Homeಬೆಂಗಳೂರುಚಾಲಕನ ವರ್ತನೆಗೆ ಹೆದರಿ ಆಟೋದಿಂದ ಜಿಗಿದು ಪಾರಾದ ಯುವತಿ

ಚಾಲಕನ ವರ್ತನೆಗೆ ಹೆದರಿ ಆಟೋದಿಂದ ಜಿಗಿದು ಪಾರಾದ ಯುವತಿ

Young woman jumps out of auto due to driver's behavior

ಬೆಂಗಳೂರು,ಜ.3- ಹೇಳಿದ ಜಾಗಕ್ಕೆ ಕರೆದೊಯ್ಯದೆ ಬೇರೆ ಮಾರ್ಗದಲ್ಲಿ ಹೋಗುತ್ತಿದ್ದ ಚಾಲಕನ ವರ್ತನೆಗೆ ಹೆದರಿದ ಮಹಿಳೆಯೊಬ್ಬರು ಆಟೋದಿಂದ ಜಿಗಿದು ಪಾರಾಗಿದ್ದಾರೆ. ಹೊರಮಾವಿನಿಂದ ಥಣಿಸಂದ್ರಗೆ ಹೋಗಲು ಮಹಿಳೆಯೊಬ್ಬರು ರಾತ್ರಿ ಆಟೋ ಬುಕ್ ಮಾಡಿದ್ದಾರೆ. ಆಟೋ ಬಂದಾಗ ಈ ಮಹಿಳೆ ಹತ್ತಿದ್ದಾರೆ.

ಮಾರ್ಗ ಮಧ್ಯೆ ಆಟೋ ಚಾಲಕ ಬೇರೆ ಜಾಗಕ್ಕೆ ಕರೆದುಕೊಂಡು ಹೋಗುತ್ತಿರುವ ಬಗ್ಗೆ ಮಹಿಳೆಗೆ ಅರಿವಾಗಿದೆ. ತಕ್ಷಣ ಆಕೆ ಆಟೋ ನಿಲ್ಲುಸುವಂತೆ ಹೇಳಿದರೂ ಚಾಲಕ ನಿಲ್ಲಿಸಿಲ್ಲ.
ಮದ್ಯ ಸೇವಿಸಿದ್ದ ಚಾಲಕನ ವರ್ತನೆಯಿಂದ ಭಯಗೊಂಡ ಮಹಿಳೆ ಮುಂದೇನು ಮಾಡುವುದೆಂದು ಯೋಚಿಸಿ ಹೆಬ್ಬಾಳದ ವೀರಣ್ಣಪಾಳ್ಯ ಬಳಿ ತಕ್ಷಣ ಆಟೋದಿಂದ ಹೊರಗೆ ಜಿಗಿದು ತನ್ನನ್ನು ರಕ್ಷಿಸಿಕೊಂಡಿದ್ದಾರೆ.

ಆಟೋ ಚಾಲಕನ ವರ್ತನೆ ಬಗ್ಗೆ ಆ ಮಹಿಳೆಯ ಪತಿ ಆಟೋ ನೊಂದಣಿ ಸಹಿತ ಬೆಂಗಳೂರು ನಗರ ಪೊಲೀಸರಿಗೆ ಎಕ್‌್ಸ ಖಾತೆಯಲ್ಲಿ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News