ಹಾಸನ,ಸೆ.19- ಸ್ನೇಹಿತೆಯರ ಜೊತೆ ಪಾರ್ಕ್‌ನಲ್ಲಿ ಕುಳಿತಿದ್ದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ಅಪ್‌ಲೋಡ್ ಮಾಡಿದ್ದರಿಂದ ನೊಂದ ಬಿಎ ವಿದ್ಯಾರ್ಥಿ ಮನೆಯ ಕೊಟ್ಟಿಗೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲ್ಲೂಕಿನ ಕಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೊಸಳೆಹೊಸಳ್ಳಿ ನಿವಾಸಿ,ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತಯ್ತಿದ್ದ ಪವನ್.ಕೆ (21) ಮೃತ ವಿದ್ಯಾರ್ಥಿ.ಬುಧವಾರ ಮಧ್ಯಾಹ್ನ ಹಾಸನದ ಮಹಾರಾಜ ಪಾರ್ಕ್‌ನಲ್ಲಿ ಇಬ್ಬರು ಸ್ನೇಹಿತೆಯರ ಜೊತೆ ಕುಳಿತಿದ್ದ ಪವನ್ ಮಾತನಾಡುತ್ತಿದ್ದ. ಇದನ್ನು ಯುವತಿಯೊಬ್ಬಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಳು.ಜೊತೆಗೆ ಸಾಕಷ್ಟು ಟೀಕೆ ,ವ್ಯಂಗ್ಯ ಸಂಭಾಷಣೆ ಇತ್ತು.
ಇದರಿಂದ ಪವನ್‌ನೊಂದಿದ್ದ ಇನ್ನು ಕಾಲೇಜು ಸ್ನೇಹಿತರು ಕೂಡ ತಮಾಷೆ ಮಾಡಿದ್ದರು. ಇದರಿಂದ ನೊಂದು ಮನೆಯಲ್ಲಿ ಆತ್ಮ ಹತ್ಯ ಮಾಡಿಕೊಂಡಿದ್ದಾನೆ.ಪೋಷಕರು ಇದನ್ನು ನೋಡಿ ಆತಂಕಗೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಾಕಿದ್ದ ಯುವತಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.ಸದ್ಯ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.