ಬೆಂಗಳೂರು,ಅ.23– ಮನೆಯೊಂದರ ನಾಲ್ಕನೇ ಮಹಡಿಯಿಂದ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಕೆಜಿ ಹಳ್ಳಿ ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದಿದೆ.
ಮುಸ್ಲಿಂ ಕಾಲೋನಿ ನಿವಾಸಿ ಅಹಮದ್ (25) ಮೃತಪಟ್ಟ ಯುವಕ.
ನಿನ್ನೆ ಸಂಜೆ 4.30 ರ ಸುಮಾರಿಗೆ ಈತ ಬಿಎಂ ಲೇಔಟ್‌ನ ಮನೆಯೊಂದಕ್ಕೆ ಹೋಗಿದ್ದು, ನಾಲ್ಕನೇ ಮಹಡಿಯ ಟೆರೇಸ್‌ನಿಂದ ಬಿದ್ದು ಗಾಯಗೊಂಡಿದ್ದನು.ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈತ ಯಾವ ಕಾರಣಕ್ಕೆ ಬಿಎಂ ಲೇಔಟ್‌ನ ಆ ಮನೆಗೆ ಹೋಗಿದ್ದನು, ಟೆರೇಸ್‌ನಿಂದ ಆಯತಪ್ಪಿ ಬಿದ್ದಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.