Sunday, October 19, 2025
Homeರಾಷ್ಟ್ರೀಯ | Nationalತಾಯಿಯೊಂದಿಗೆ ಅಕ್ರಮ ಸಂಬಂಧ ಶಂಕೆ, ಸ್ನೇಹಿತನನ್ನು ಭೀಕರವಾಗಿ ಕೊಂದ ಕುಚಿಕುಗಳು

ತಾಯಿಯೊಂದಿಗೆ ಅಕ್ರಮ ಸಂಬಂಧ ಶಂಕೆ, ಸ್ನೇಹಿತನನ್ನು ಭೀಕರವಾಗಿ ಕೊಂದ ಕುಚಿಕುಗಳು

Youth hacked to death by friends in Habibganj: Key accused suspected his affair with his mother

ಭೋಪಾಲ್‌‍, ಅ. 19: ತನ್ನ ತಾಯಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದ ಮೇಲೆ ಮೂವರು ಸ್ನೇಹಿತರೇ ತಮ ಕುಚುಕು ಗೆಳೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮೂವರು ಸ್ನೇಹಿತರು ಸೇರಿ ತಮ್ಮ ಗೆಳೆಯನ ಕತ್ತು ಕೊಯ್ದು ಕೊಲೆ ಮಾಡಿ, ತಲೆಯನ್ನು ಕಲ್ಲಿನಿಂದ ಜಜ್ಜಿ ಪರಾರಿಯಾಗಿದ್ದಾರೆ.ಮೂವರಲ್ಲಿ ಒಬ್ಬನ ತಾಯಿಯ ಜತೆ ತನ್ನ ಗೆಳೆಯನಿಗೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಲ್ಲಿ ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ಯಾಮ್‌ ನಗರ ಮಲ್ಟಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಈ ಕುರಿತು ಪೊಲೀಸರಿಗೆ ಕರೆ ಬಂದಿತ್ತು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಆಶಿಶ್‌ (25) ಎಂಬುವವ ಶವವನ್ನು ಗಂಟಲು ಸೀಳಿ ತಲೆಯನ್ನು ಕಲ್ಲಿನಿಂದ ಜಜ್ಜಿದ ಸ್ಥಿತಿಯಲ್ಲಿ ಪತ್ತೆ ಮಾಡಿದ್ದರು.

ಪ್ರಾಥಮಿಕ ತನಿಖೆಯಲ್ಲಿ ರಂಜಿತ್‌, ನಿಖಿಲ್‌ ಮತ್ತು ವಿನಯ್‌ ಎಂಬ ಮೂವರು ಸ್ಥಳೀಯ ವ್ಯಕ್ತಿಗಳು ಈ ಕೊಲೆ ಮಾಡಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಆಶಿಶ್‌ ತನ್ನ ತಾಯಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ರಂಜಿತ್‌ಗೆ ಬಂದಿತ್ತು, ಇದರಿಂದಾಗಿ ಅವನು ಆಶಿಶ್‌ನನ್ನು ತನ್ನ ಮನೆಯ ಬಳಿ ಬರದಂತೆ ಎಚ್ಚರಿಸಿದ್ದನು ಎಂದು ಪೊಲೀಸ್‌‍ ಮೂಲಗಳು ಬಹಿರಂಗಪಡಿಸಿವೆ.

ತಡರಾತ್ರಿ ರಂಜಿತ್‌ ತನ್ನ ಮನೆಯ ಬಳಿ ಆಶಿಶ್‌ನನ್ನು ನೋಡಿದ್ದಾನೆ ಎಂದು ವರದಿಯಾಗಿದೆ. ಕೋಪದ ಭರದಲ್ಲಿ, ಅವನು ತನ್ನ ಸ್ನೇಹಿತರಾದ ನಿಖಿಲ್‌ ಮತ್ತು ವಿನಯ್‌ ಜೊತೆಗೂಡಿ ಆಶಿಶ್‌ನನ್ನು ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮೂವರು ಮೊದಲು ಆಶಿಶ್‌ನ ಕತ್ತು ಸೀಳಿ ನಂತರ ಅವನ ತಲೆಗೆ ಕಲ್ಲಿನಿಂದ ಹೊಡೆದ ಪರಿಣಾಮ ಆಶಿಶ್‌ ತಕ್ಷಣ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಆಶಿಶ್‌ ಮತ್ತು ರಂಜಿತ್‌ ಅನುಮಾನದಿಂದ ಅವರ ನಡುವೆ ಬಿರುಕು ಉಂಟಾಗುವ ಮೊದಲು ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು ಎಂಬುದು ದುರಂತ .ದಾಳಿಯ ಸಂಪೂರ್ಣ ಉದ್ದೇಶವನ್ನು ಬಹಿರಂಗಪಡಿಸಲು ಮತ್ತು ದಾಳಿಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ನಿರ್ಧರಿಸಲು ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.

RELATED ARTICLES

Latest News