ಚೆನ್ನೈ, ಅ.9- ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಸೊನ್ನೆ ಸುತ್ತಿ ಔಟಾದ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್‌ರನ್ನು ವಿಶ್ವಕಪ್ ವಿಜೇತ ಆಲ್‍ರೌಂಡರ್ ಯುವರಾಜ್ ಸಿಂಗ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ವಿರುದ್ಧ ಹಿಡಿದ ಸಾಧಿಸಿದ ಟೀಮ್ ಇಂಡಿಯಾದ ಸ್ಪಿನ್ನರ್ 10 ಓವರ್‍ಗಳಲ್ಲಿ 28 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಆಸೀಸ್ ತಂಡವನ್ನು 199 ರನ್‍ಗಳಿಗೆ ನಿಯಂತ್ರಿಸಲು ಬಲ ತುಂಬಿದ್ದರು.
BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ
ಆಸ್ಟ್ರೇಲಿಯಾ ನೀಡಿದ 200 ರನ್ ಗುರಿ ಹಿಂಬಾಲಿಸಿದ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರು ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹೇಝಲ್‍ವುಡ್ ಅವರ ವೇಗದ ದಾಳಿಯಿಂದ 2 ರನ್‍ಗಳಿಗೆ ವಿಕೆಟ್‍ಗಳನ್ನು ಕೈಚೆಲ್ಲಿ ತಂಡವನ್ನು ಸಂಕಷ್ಟಕ್ಕೆ ದೂಡಿದ್ದರು. ಈ ನಡುವೆ ಯುವಿ, ಯುವ ಆಟಗಾರ ಶ್ರೇಯಸ್ ಅಯ್ಯರ್ ಔಟಾದ ಕ್ರಮವನ್ನು ಖಂಡಿಸಿದ್ದಾರೆ.
ಇಸ್ರೇಲ್‍ನಲ್ಲಿ 18,000 ಭಾರತೀಯರು ಸುರಕ್ಷಿತ
ಅಯ್ಯರ್‌ರಿಂದ ಹೋರಾಟ ಕಂಡು ಬರಲಿಲ್ಲ:
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಯುವರಾಜ್ ಸಿಂಗ್, ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಕಟುವಾಗಿ ಟೀಕಿಸಿದ್ದು,ತಂಡದಲ್ಲಿ 4ನೇ ಕ್ರಮಾಂಕದ ಬ್ಯಾಟರ್ ಒತ್ತಡವನ್ನು ನಿಭಾಯಿಸುವ ಸಾಮಥ್ರ್ಯ ಹೊಂದಿರಬೇಕು. ಕುಸಿಯುತ್ತಿರುವ ತಂಡಕ್ಕೆ ತಮ್ಮ ಸೋಟಕ ಇನಿಂಗ್ಸ್‍ನಿಂದ ತಂಡವನ್ನು ಮೇಲೆತ್ತುವ ಹೊಣೆಯನ್ನು ಹೊರಬೇಕು. ಕೆ.ಎಲ್.ರಾಹುಲ್ ಅವರು 4ನೇ ಕ್ರಮಾಂಕಕ್ಕೆ ಉತ್ತಮ ಆಯ್ಕೆ ಆಗಿದ್ದಾರೆ, ಅಲ್ಲದೆ ಪಾಕಿಸ್ತಾನ ವಿರುದ್ಧ ಈ ಕ್ರಮಾಂಕದಲ್ಲಿ ಆಡಿ ಶತಕ ಸಿಡಿಸಿದ್ದಾರೆ.ಆದರೂ ಶ್ರೇಯಸ್ ಅಯ್ಯರ್ ಅನ್ನು ಈ ಕ್ರಮಾಂಕದಲ್ಲಿ ಆಡಿಸಲಾಗಿದ್ದು ಅವರಿಂದ ಯಾವುದೇ ಕಾಣಿಕೆ ತಂಡಕ್ಕೆ ಸಿಗಲಿಲ್ಲ' ಎಂದು ಯುವರಾಜ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಆಟಗಾರ ನಾಗಿದ್ದು ತಂಡವನ್ನು ಮುನ್ನಡೆಸುವ ಸಾಮಥ್ರ್ಯ ಹೊಂದಿದ್ದಾರೆ. ಆದರಿಂದ ಅವರನ್ನು ತಂಡದಿಂದ ಕೈಬಿಡಬೇಡಿ’ ಎಂದು ಬಿಸಿಸಿಐ ಸೆಲೆಕ್ಟರ್ಸ್‍ಗಳನ್ನು ಯುವರಾಜ್‍ಸಿಂಗ್ ಆಗ್ರಹಿಸಿದ್ದಾರೆ.