ಬೆಂಗಳೂರು,ಫೆ.15- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೆಹಲಿಗೆ ಹೋಗಲು ಬಂದಿದ್ದ ಜಿಂಬಾಬ್ವೆ ದೇಶದ ಪ್ರಜೆಯೊಬ್ಬ ಮಹಿಳೆಯರ ಬೂತ್‍ಗೆ ಪ್ರವೇಶಿಸಿದ್ದಲ್ಲದೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿಸಿ ಬಲವಂತವಾಗಿ ಸೆಕ್ಯೂರ್ ಹ್ಯಾಶ್ ರೂಮ್‍ಗೆ ಪ್ರವೇಶಿಸಲು ಯತ್ನಿಸಿದ ಬಗ್ಗೆ ದೂರು ದಾಖಲಾಗಿದೆ.
ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುವ ಸಲುವಾಗಿ ಜಿಂಬಾಬ್ವೆ ದೇಶದ ಪ್ರಜೆ ರುಕುಡ್ಜೋ ಚಿರಿಕುಮರ ಎಂಬಾತ ಫೆ.13 ರಂದು ರಾತ್ರಿ 11.25ರ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ. ಎಕ್ಸ್‍ಬಿಸ್ ನಂ.5 ರಲ್ಲಿ ಪಿಇಎಸ್‍ಸಿ ಗಾಗಿ ತಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾಗೂ ಬ್ಯಾಗನ್ನು ಎಕ್ಸ್‍ಬಿಸ್ ಮಿಶನ್ ಸಿ-01 ರಲ್ಲಿಟ್ಟು ಮಹಿಳೆಯರ ಫ್ರಿಸ್ಕಿಂಗ್ ಬೂತ್‍ಗೆ ಪ್ರವೇಶಿಸಿ, ಕರ್ತವ್ಯದಲ್ಲಿದ್ದ ಮಹಿಳಾ
ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ.
ಪರಿಷತ್‍ನಲ್ಲಿ ತೆರಿಗೆ ಕೋಲಾಹಲ ; ಆಡಳಿತ ಪ್ರತಿಪಕ್ಷಗಳ ವಾಕ್ಸಮರ
ನಂತರ ಸೆಕ್ಯೂರ್ ಹ್ಯಾಶ್ ಅಲ್ಗೋರಿತಮ್ (ಎಸ್‍ಎಚ್‍ಎ) ಗೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಸಿಐಎಸ್‍ಎಫ್‍ನ ನರೇಂದ್ರ ಸಿಂಗ್ ಎಂಬುವರು ಈತನ ವರ್ತನೆ ಬಗ್ಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕಳ್ಳ ಸಾಗಾಣಿಕೆ:17 ಲಕ್ಷ ಮೌಲ್ಯದ ಚಿನ್ನದ ತುಂಡುಗಳು ವಶ
ಬೆಂಗಳೂರು, ಫೆ.15- ಕುವೈತ್‍ನಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದ ಪ್ರಯಾಣಿಕನೊಬ್ಬನ ಬಳಿ ಕಳ್ಳಸಾಗಾಣಿಕೆ ಮೂಲಕ ತರುತ್ತಿದ್ದ 17 ಲಕ್ಷ ರೂ. ಮೌಲ್ಯದ 279.5 ಗ್ರಾಂ ತೂಕದ ಚಿನ್ನದ ತುಂಡುಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಫೆ.15ರಂದು ಕುವೈತ್‍ನಿಂದ ಭಾರತೀಯ ವ್ಯಕ್ತಿಯೊಬ್ಬ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ.
ಆಗ ಅನುಮಾನಗೊಂಡ ಕಸ್ಟಮ್ಸ್ ಅಕಾರಿಗಳು ಆತನ ಬಳಿ ಇದ್ದ ಅಲಂಕೃತ ಅಗರ್‍ಬತ್ತಿ ಕಂಟೈನರ್ ಪರಿಶೀಲಿಸಿದಾಗ ಆತ ಬಚ್ಚಿಟ್ಟಿದ್ದ ಚಿನ್ನದ ಕಚ್ಚಾ ತುಂಡುಗಳು ಪತ್ತೆಯಾಗಿವೆ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ 17,23,117ರೂ. ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.